ಆಟ ಆಟದಲ್ಲೇ ಕುಕರ್ ನಲ್ಲಿ ಸಿಲುಕಿಕೊಂಡ ಹುಡುಗಿಯ ತಲೆ; ಆಮೇಲೆ ಯಾವುದೇ ಗಾಯವಿಲ್ಲದೆ ಹೀಗೆ ತೆಗೆದರು!
ಭಾವನಗರ :- ಗುಜರಾತ್‌ನ ಭಾವನಗರದ ಪಿರ್ಚಲ್ಲಾ ಸ್ಟ್ರೀಟ್ ಪ್ರದೇಶದಲ್ಲಿ ಒಂದು ವಿಚಿತ್ರ ಘಟನೆ ಬೆಳಕಿಗೆ ಬಂದಿದೆ. ಇಲ್ಲಿ ಆಟ ಆಡುವಾಗ 1 ವರ್ಷದ ಮುಗ್ದ ಹುಡುಗಿಯ ತಲೆ ಪ್ರೆಶರ್ ಕುಕ್ಕರ್‌ನಲ್ಲಿ ಸಿಲುಕಿಕೊಂಡಿತ್ತು. ಇದನ್ನು ಕಂಡ ತಂದೆ ತಾಯಿಯರ ಕಾಲು ಕೆಳಗಿನ ಭೂಮಿಯೇ ಸರಿದಂತಾಯಿತು. ಅವರು ತಕ್ಷಣ ಮಗುವನ್ನು ಕರೆದುಕೊಂಡು ಆಸ್ಪತ್ರೆಗೆ ಹೋದರು. ಅಲ್ಲಿನ ವೈದ್ಯರೂ ಮಗುವಿನ ಈ ಸ್ಥಿತಿಯನ್ನು ನೋಡಿ ಆಶ್ಚರ್ಯಗೊಂಡರು. ಅದರ ನಂತರ, 45 ನಿಮಿಷಗಳ ಕಠಿಣ ಪರಿಶ್ರಮದ ನಂತರ ಮುಗ್ದ ಮಗುವನ್ನು ಸುರಕ್ಷಿತವಾಗಿ ಉಳಿಸಲಾಯಿತು.
ಭಾವನಗರದ ಘಟನೆ
ವರದಿಗಾರರ ಪ್ರಕಾರ, ಮಗುವನ್ನು ಉಳಿಸಿಕೊಳ್ಳುವ ಸಲುವಾಗಿ ಪ್ರೆಶರ್ ಕುಕ್ಕರ್ ನ್ನೇ ಕತ್ತರಿಸಬೇಕಾಯಿತು. ಅದರಿಂದಾಗಿ ಮಗುವಿನ ತಲೆ ಕುಕ್ಕರ್ ನಿಂದ ಹೊರಗಡೆ ಬಂದಿತು. ತದನಂತರ ಮಗುವಿನ ಪಾಲಕರು ಹಾಗೂ ಅಲಿದ್ದ ಜನರು ಡಾಕ್ಟರ್ ಅವರ ಈ ಕಾರ್ಯ ಮೆಚ್ಚಿ ಹೊಗಳಿದರು. ಕುಕ್ಕರ್ ನಲ್ಲಿ ತಲೆ ಸಿಲುಕಿಕೊಂಡ ಮಗುವಿನ ಹೆಸರು ಪ್ರಿಯಾಂಶಿ ಧಾರ್ಮಿಕಭಾಯಿ ವಾಲಾ ಇದೆ. ನಿನ್ನೆ ಮನೆಯಲ್ಲಿ ಆಟವಾಡುತ್ತಿರುವಾಗ ಅದರ ತಲೆ ಕುಕ್ಕರ್ ನಲ್ಲಿ ಸಿಕ್ಕಿ ಹಾಕಿಕೊಂಡಿತು.

ಮಗುವಿನ ಈ ಸ್ಥಿತಿ ನೋಡಿದ ಕೂಡಲೇ ಡಾಕ್ಟರ್ ಕೂಡಾ ದಂಗಾದರು.
ಮುಗ್ಧ ಬಾಲಕಿಯ ಪಾಲಕರು ಎಷ್ಟೋ ಪ್ರಯತ್ನಿಸಿದರೂ ಸಹ ತಲೆ ಹೊರಗೆ ಬರಲಿಲ್ಲ. ಅಲ್ಲದೆ ಕುಕ್ಕರ್ ಮಗುವಿನ ತಲೆಯ ಮೇಲೆ ಭಾರವಾದ ಕಾರಣ ಮಗು ಜೋರಾಗಿ ಅಳಲು ಪ್ರಾರಂಭಿಸಿತು. ನಂತರ ಆ ಮಗುವನ್ನು ಸರಕಾರಿ ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿದ್ದ ವೈದ್ಯರು ಸಹ ಈ ಮುಗ್ಧ ಮಗುವಿನ ಪರಸ್ಥಿತಿ ನೋಡಿ ದಂಗಾದರು. ತಲೆಯನ್ನು ಹೊರಗೆ ತಗೆಯುವ ಸಲುವಾಗಿ ಕುಕ್ಕರ್ ಕತ್ತರಿಸಬೇಕಾಯಿತು.

ತದನಂತರ ಚೈಲ್ಡ್ ಡಿಪಾರ್ಟ್ಮೆಂಟ್ ಡಾಕ್ಟರ್ ಮೆಹುಲ್ ಗೋಸಾಯಿ, ಡಾ ಉನ್ನತಿ ಶಾಹ, ಡಾ.ಆದಿತ್ಯ ನಿಖಿಲೇಶ್ವರ್ ಮತ್ತು ನರ್ಸಿಂಗ್ ಹಾಗೂ ಎಡ್ಮಿನ್ ಸ್ಟಾಫ್ ಮಗುವಿನ ಈ ಸಮಸ್ಯೆಯನ್ನು ದೂರ ಮಾಡಲು ಒಂದಾಗಿ ಕಾರ್ಯ ನಿರ್ವಹಣೆ ಮಾಡಿದರು. ಅವರು ಯೂಟ್ಯೂಬ್ ನಲ್ಲಿಯ ಕೆಲವು ವಿಡಿಯೋಗಳನ್ನು ನೋಡಿದ ಮೇಲೆ ಈ ರೀತಿಯ ಮಗುವಿನ ತಲೆಯಲ್ಲಿ ಸಿಕ್ಕಿಬಿದ್ದ ಕುಕ್ಕರ್ ಕಟ್ ಮಾಡಲು ಸಹಾಯವಾಯಿತು ಎಂದು ಡಾಕ್ಟರ್ ತಿಳಿಸಿದ್ದಾರೆ.

ಈ ಸಂಗತಿಗಳ ಕುರಿತು ಎಚ್ಚರ ವಹಿಸಿದ್ದರು.
ರೇಸ್ಕ್ಯೂ ಸಮಯದಲ್ಲಿ ಮಗುವಿನ ಪಲ್ಸ್ ಹಾಗೂ ಆಕ್ಸಿಜನ್ ಲೇವಲ್ ದಂತಹ ಅನೇಕ ಸಂಗತಿಗಳ ಬಗ್ಗೆ ಡಾಕ್ಟರ್ ತುಂಬಾ ಎಚ್ಚರ ವಹಿಸಿದ್ದರು. ಈ ಟೀಮ್ ನಲ್ಲಿ ಡಾಕ್ಟರ್ ಹಾಗೂ ನರ್ಸಿಂಗ್ ಸ್ಟಾಫ್ ಪಾಲ್ಗೊಂಡಿದ್ದರು. ಸುಮಾರು 45 ನಿಮಿಷಗಳ ವರೆಗೆ ಕಾರ್ಯಾಚರಣೆ ನಡೆಸಿದ ಮೇಲೆ ಯಾವುದೇ ಗಾಯವಿಲ್ಲದೆ ಮಗುವಿನ ತಲೆಯನ್ನು ಕುಕ್ಕರ್ ದಿಂದ ಬೇರ್ಪಡಿಸಲಾಯಿತು.
