‘ಆತ’ ಕಣ್ಣು ತೆರೆದಾಗ ಸಿಂಹ ಅವನ ಎದೆಯ ಮೇಲೆ ಕುಳಿತಿತ್ತು!
ಘಟನೆ ಗುಜರಾತಿನ ಅಮರೇಲಿ ಜಿಲ್ಲೆಯ ಸಾವರಕುಂಡಲಾ ತಾಲೂಕಿನ ಅಬಹಾರಮಪಾರಾ ಊರಿನಲ್ಲಿಂದ ವರದಿಯಾಗಿದೆ.
ವಿಪುಲ ಹೆಸರಿನ ಯುವಕ ತನ್ನ ಗುಡಿಸಲಲ್ಲಿ ಸುಖ ನಿದ್ರೆಯಲ್ಲಿದ್ದಾಗ ಆತನ ಎದೆಯ ಮೇಲೆ ಸಿಂಹವೊಂದು ಬಂದು ಕುಳಿತಿರುವ ಘಟನೆ ನಡೆದಿದೆ. ಸಿಂಹದ ಗರ್ಜನೆಯನ್ನೇ ಕೇಳಿದರೆ ಅಂಜುವ ನಾವು ಸ್ವಲ್ಪ ಯೋಚಿಸಿ, ಮನುಷ್ಯ ಸುಖವಾದ ನಿದ್ರೆಯಲ್ಲಿದ್ದಾಗ ಆತನಿಗೆ ಏನೂ ಗೊತ್ತಿರದ ಸಂದರ್ಭದಲ್ಲಿ ಎಚ್ಚರವಾದಾಗ ಎದೆಯ ಮೇಲೆ ಒಮ್ಮಿಂದೊಮ್ಮೆಲೆ ಸಿಂಹ ಕುಳಿತಿದ್ದನ್ನು ನೋಡಿದಾಗ ಯುವಕನಿಗೆ ಹೇಗಾಗಿರಬೇಡ.

ಈ ರೀತಿಯ ಭೀ ತಿಯ ಪ್ರಸಂಗದಲ್ಲಿ ಹೆಚ್ಚಾಗಿ ಎಲ್ಲರೂ ತಮ್ಮ ಸಂಯಮವನ್ನು ಕಳೆದುಕೊಳ್ಳುವವರೇ ಜಾಸ್ತಿ. ಅಂಥದ್ದರಲ್ಲಿ ವಿಫುಲ್ ಮಾಡಿದ್ದೇನು ನೋಡಿ, ಎದೆಯ ಮೇಲೆ ಏನೋ ಭಾರವಾದಂತೆನಿಸಿ ಕಣ್ಣುಗಳನ್ನು ತೆರೆದು ನೋಡಿದಾಗ ಸಿಂಹವೊಂದು ಎದೆಯ ಮೇಲೆ ಆಸೀನವಾಗಿತ್ತು. ಆ ಸಮಯದಲ್ಲಿ ವಿಫುಲ್ ಹೆದರಿದರೂ ಸಹಿತ ಧೈರ್ಯದಿಂದ ಮತ್ತು ಸಂಯಮದಿಂದ ಸಮಯೋಚಿತನಾಗಿ ತನ್ನ ಮಾನಸಿಕ ಮತ್ತು ದೈಹಿಕ ಶಕ್ತಿಯನ್ನು ಒಗ್ಗೂಡಿಸಿ ಏಕಕಾಲಕ್ಕೆ ಸಿಂಹಕ್ಕೆ ದೂರ ನೂಕಿದ್ದಾನೆ. ಆಕಸ್ಮಿಕವಾದ ಅಟ್ಯಾಕ್ ನಿಂದ ಸಿಂಹವು ಸ್ವಲ್ಪ ಗಲಿಬಿಲಿಗೊಂಡಿದೆ. ಜೋರಾದ ಪ್ರತಿಕಾರದಿಂದ ಸಿಂಹ ತನ್ನ ಜೀವಕ್ಕೆ ಅಪಾಯವಿದೆ ಎಂದು ತಿಳಿದು ಅಲ್ಲಿಂದ ಕಾಡಿನ ಕಡೆಗೆ ಕಾಲ್ಕಿತ್ತಿದೆ.
ಟೈಮ್ಸ್ ಆಫ್ ಇಂಡಿಯಾದಲ್ಲಿ ಈ ಘಟನೆಯ ಬಗ್ಗೆ ವಿಫುಲ್ ಹೇಳುತ್ತಾರೆ, ‘ನನ್ನ ಸುದೈವ ನಾನು ಉಳಿದೆ. ಸಿಂಹ ನನ್ನನ್ನು ತನ್ನ ಆಹಾರಕ್ಕಾಗಿ ಆಯ್ಕೆ ಮಾಡಿ ತಪ್ಪಿತು’ ಎಂದು ಆ ಕರಾಳ ರಾತ್ರಿಯ ಬಗ್ಗೆ ಹೇಳುತ್ತಾರೆ. ಸದ್ಯ ಗುಜರಾತಿನ ಕಾಡುಗಳಲ್ಲಿ ಹುಲಿ ಮತ್ತು ಸಿಂಹಗಳ ಸಂಖ್ಯೆ ಗಣನೀಯವಾಗಿ ಏರುತ್ತಿದೆ.