….ಆದ್ದರಿಂದ ‘ಈ’ ನಾಯಿ ಕಳೆದ ಮೂರು ತಿಂಗಳಿನಿಂದ ಆಸ್ಪತ್ರೆಯಲ್ಲಿಯೇ ಕುಳಿತಿದೆ!
ನಾಯಿ ಇದೊಂದು ಸಾಕುಪ್ರಾಣಿಯಾಗಿದೆ. ಇದನ್ನು ನಗರಗಳಿಂದ ಹಳ್ಳಿಗಳವರೆಗೆ ಎಲ್ಲೆಡೆ ಕಾಣಬಹುದು. ನಾಯಿಗಳು ತನ್ನಮಾಲೀಕನ ಮೇಲೆ ತುಂಬಾ ಪ್ರೀತಿಯನ್ನು ಹೊಂದಿರುತ್ತವೆ ಎಂಬುದು ನಮಗೆಲ್ಲರಿಗೂ ತಿಳಿದ ಸಂಗತಿಯಾಗಿದೆ. ಇದುವರೆಗೂ ಎಷ್ಟೋ ಸಲ ತಮ್ಮ ಮಾಲೀಕನ ಸಾವಿನ ನಂತರವೂ ನಾಯಿ ತನ್ನ ಮಾಲೀಕರಿಗಾಗಿ ಕಾಯುತ್ತಿದೆ ಅಥವಾ ನಾಯಿ ಆಹಾರ ಮತ್ತು ನೀರನ್ನು ಕೈಬಿಟ್ಟಿದೆ ಎಂಬ ವರದಿಗಳು ಬಂದಿವೆ. ಕರೋನಾ ವೈರಸ ಸಮಯದಲ್ಲಿ ಚೀನಾದಲ್ಲಿ ಇದೇ ರೀತಿಯ ಒಂದು ಘಟನೆ ಈಗ ಹೊರಹೊಮ್ಮಿದೆ. ಇದನ್ನು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ, ಈ ವರದಿಯ ಪ್ರಕಾರ ನಾಯಿ ತನ್ನ ಮಾಲೀಕರ ಮರಣದ ನಂತರವೂ ಪ್ರತಿದಿನ ಆಸ್ಪತ್ರೆಯ ಬಾಗಿಲಲ್ಲಿ ಬಂದು ಕುಳಿತುಕೊಂಡು ಮಾಲೀಕನಿಗಾಗಿ ಕಾಯುತ್ತಿದೆ ಅಂತೆ.

ಫೆಬ್ರವರಿಯಲ್ಲಿ ಹುಬೈ ಪ್ರಾಂತ್ಯದಲ್ಲಿ ಕೋರೊನಾ ವೈರಸ್ ಉದ್ರೇಕವಾಗಿತ್ತು ಅಲ್ಲದೆ ಅಲ್ಲಿದ್ದ ಪರಿಸರದ ತುಂಬೆಲ್ಲ ಹರಡಿಕೊಂಡಿತ್ತು. ದೊರೆತ ಮಾಹಿತಿಯ ಪ್ರಕಾರ, ಇದೇಸಮಯದಲ್ಲಿ ಅಲ್ಲಿಯ ಒಬ್ಬ ವ್ಯಕ್ತಿಗೆ ಕೋರೊನಾ ಸೋಂಕು ತಗುಲಿತು ನಂತರ ಆತನನ್ನು ಟೀಕಾಂಗ್ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಐದನೇ ದಿನ ವ್ಯಕ್ತಿ ಮೃತಪಟ್ಟ. ಆದರೆ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ ದಿನದಿಂದ, ಅವನ ಸಾಕು ನಾಯಿ ಆಸ್ಪತ್ರೆಯ ಲಾಬಿಯಲ್ಲಿ ಅದರ ಮಾಲೀಕರಿಗಾಗಿ ಕಾಯುತ್ತಿತ್ತು. ಇಂದು ಈ ಘಟನೆಗೆ ಮೂರು ತಿಂಗಳ ಆಗಿದೆ ಆದರೆ ಇಂದಿಗೂ ಸಹ ಆ ನಾಯಿ ತನ್ನ ಮಾಲೀಕನಿಗಾಗಿ ಪ್ರತಿನಿತ್ಯ ಆಸ್ಪತ್ರೆ ಲಾಬಿಯಲ್ಲಿ ಬಂದು ಕುಳಿತು ಕಾದು ಮತ್ತೆ ರಾತ್ರಿ ಮನೆಗೆ ಹೋಗುತ್ತದೆ ಹೀಗೆ ಸುಮಾರು ಮೂರು ತಿಂಗಳ ಕಾಲ ನಡೆಯಿತು. ಅದನ್ನು ಅರಿತ ಪ್ರಾಣಿ ಸ್ನೇಹಿತರು ಈ ನಾಯಿಯನ್ನು ಇರಲು ಅದಕ್ಕೆ ಆಶ್ರಯ ನೀಡುವ ಸಲುವಾಗಿ ಒಂದು ಚಿಕ್ಕ ಗುಡಿಸಲು ನಿರ್ಮಾಣಮಾಡಿದ್ದಾರೆ. ನಾಯಿ ತನ್ನ ಮಾಲೀಕರು ಆಸ್ಪತ್ರೆಯಿಂದ ಬೇಗ ಹೊರಗೆ ಬರಬಹುದು ಅವರನ್ನು ಕರೆದುಕೊಂಡು ಹೋಗಬಹುದು ಎಂಬ ಉದ್ದೇಶದಿಂದ ಈ ನಾಯಿ ಇದುವರೆಗೂ ಆಸ್ಪತ್ರೆಯಲ್ಲಿ ಬಂದು ಮಾಲೀಕನಿಗಾಗಿ ಕಾಯುತ್ತಿದೆ.
ಮ್ಯಾಂಗ್ರೆಲ್ ತಳಿಯ ಏಳು ವರ್ಷದ ನಾಯಿಗೆ ಕ್ಸಿಯಾವೋ ಬಾವೊ ಎಂದು ಹೆಸರಿಸಲಾಗಿದೆ. ಸ್ಥಳೀಯ ಮಾಧ್ಯಮ ವರದಿಗಳ ಪ್ರಕಾರ, ಆಸ್ಪತ್ರೆಯ ಸಿಬ್ಬಂದಿ ನಾಯಿಯನ್ನು ಇಲ್ಲಿಂದ ಹೊರಗೆ ತರಲು ಹಲವಾರು ಬಾರಿ ಪ್ರಯತ್ನಿಸಿದರೂ ಅಲ್ಲದೆ , ಅದಕ್ಕೆ ತಿಂಡಿಯ ಆಸೆ ತೋರಿಸಿ ಹೊರಹಾಕಲು ಪ್ರಯತ್ನಿಸಿದರು ಅದು ಹೊರಗಡೆ ಹೋಗಲೇ ಇಲ್ಲ. ನಾಯಿ ಮೂರು ತಿಂಗಳಿಂದ ಇಲ್ಲಿಗೆ ಬರುತ್ತಿತ್ತು. ಏಪ್ರಿಲ್ ಮಧ್ಯದಲ್ಲಿ ಚೀನಾದಲ್ಲಿ ನಿರ್ಬಂಧಗಳು ಕಡಿಮೆಯಾದ ನಂತರ ಆಸ್ಪತ್ರೆಯ ಸಮೀಪವಿರುವ ಸೂಪರ್ ರ್ಮಾರ್ಕೆಟ್ನಿಂದ ನಾಯಿಯ ತಿಂಡಿಯ ವ್ಯವಸ್ಥೆ ಮಾಡಲಾಯಿತು.
“ಆಸ್ಪತ್ರೆಯ ಸಿಬ್ಬಂದಿ ನನಗೆ ನೀಡಿದ ಮಾಹಿತಿಯ ಪ್ರಕಾರ, ನಾಯಿಯ ಹಿರಿಯ ಮಾಲೀಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕರೋನಾದಿಂದಾಗಿ ಆ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆದರೆ ಆಗಿನಿಂದ ಈಗಿನ ವರೆಗೂ ನಾಯಿ ಆಸ್ಪತ್ರೆಯ ಲಾಬಿಯಲ್ಲಿ ಅದರ ಮಾಲೀಕರಿಗಾಗಿ ಕಾಯುತ್ತಿರುವುದು ಕಂಡುಬಂದಿದೆ” ಎಂದು ಸೂಪರ್ ರ್ಮಾರ್ಕೆಟ್ ಮಾಲೀಕರು ಹೇಳಿದ್ದಾರೆ.
Loyal #dog waits at a #Wuhan hospital for 3 months after his owner dies from covid-19
— Hans Solo (@thandojo) May 26, 2020
7-yo dog Xiao Bao waited patiently for his owner at Wuhan hospital.Staff at Wuhan Taikang Hospital fed Xiao Bao
Xiao's owner died 5 days after being admitted pic.twitter.com/H31Ls2Dsrh
ಕೆಲವು ದಿನಗಳ ಹಿಂದೆ ಈ ನಾಯಿಯನ್ನು ವುಹಾನ್ ಸಣ್ಣ ಪ್ರಾಣಿ ಸಂರಕ್ಷಣಾ ಸಂಘವು ಅದಕ್ಕೆ ಶ್ವಾನ ಆಶ್ರಮದಲ್ಲಿ ಸ್ಥಳಾಂತರಿಸಿದೆ.