ಆಧಾರ್ ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಈಗ ಬಳಸುತ್ತಿಲ್ಲವೇ? ಹೀಗೆ ಮಾಡಿ ಹೊಸ ನಂಬರ್ ಅಪಡೆಟ್!

ಭಾರತ ದೇಶವು ಡಿಜಿಟಲಿಕರಣದ ಕಡೆಗೆ ಹೆಜ್ಜೆ ಇಡುತ್ತಿದೆ. ಇಂದು ಬಹುತೇಕ ಕೆಲಸಗಳು ಆನ್ಲೈನ್ ಮೂಲಕ ನಡೆಯುತ್ತಿದೆ. ಕೊರೊನಾ ವಕ್ಕರಿಸಿದ ನಂತರದ ದಿನಗಳಲ್ಲಂತೂ ಬಹುತೇಕ ವರ್ಕ್ ಫ್ರಮ್ ಹೋಮ್ ಎಂದು ಆನ್ಲೈನ್ ವಹಿವಾಟುಗಳು ಹಾಗೂ ಆನ್ಲೈನ್ ಉದ್ಯೋಗಗಳು ಬಹಳಷ್ಟು ಪ್ರಮಾಣದಲ್ಲಿ ಹೆಚ್ಚಿದೆ. ಶಾಲಾ ಕಾಲೇಜುಗಳ ತರಗತಿಗಳು ಕೂಡಾ ಆನ್ಲೈನ್ ಮೂಲಕವೇ ನಡೆಯುವಂತಹ ಪರಿಸ್ಥಿತಿ ದೇಶದಲ್ಲಿ ಎದುರಾಗಿದೆ. ಇನ್ನು ನಮ್ಮ ದೇಶ ಭಾರತದಲ್ಲಿ ಇಲ್ಲಿನ ನಾಗರಿಕರಿಗೆ ಮತದಾರರ ಗುರುತಿನ ಚೀಟಿಯನ್ನು ಎಲ್ಲರಿಗೂ ನೀಡಲಾಗಿದೆ. ಅದೇ ರೀತಿಯಲ್ಲಿ ದೇಶದ ಸಮಸ್ತ ನಾಗರಿಕರಿಗೂ ಸಹಾ ಆಧಾರ್ ಕಾರ್ಡ್ ಎನ್ನುವ ವಿಶೇಷವಾದ ಗುರುತಿನ ಚೀಟಿಯ ಮೂಲಕ ಒಂದು ವಿಶಿಷ್ಟವಾದ ನಂಬರನ್ನು ನೀಡಲಾಗಿದೆ.

ಪ್ರಸ್ತುತ ಭಾರತದಲ್ಲಿ ಆಧಾರ್ ಕಾರ್ಡ್ ಪ್ರತಿಯೊಬ್ಬರ ಅಗತ್ಯವಾದ ದಾಖಲೆಯಾಗಿದೆ. ಆಧಾರ್ ಕಾರ್ಡ್ ಇಲ್ಲದೆ ಬಹುತೇಕ ಯಾವುದೇ ಸರ್ಕಾರಿ ಕೆಲಸಗಳು ನಡೆಯುವುದಿಲ್ಲ ಅಷ್ಟೊಂದು ಪ್ರಾಮುಖ್ಯತೆಯನ್ನು ಆಧಾರ್ ಕಾರ್ಡ್ ಪಡೆದುಕೊಂಡಿದೆ. ಆದ್ದರಿಂದಲೇ ಆಧಾರ್ ಕಾರ್ಡ್ ವಿಚಾರದಲ್ಲಿ ಸಾಕಷ್ಟು ಗಮನವನ್ನು ನೀಡಬೇಕಾದ ಅವಶ್ಯಕತೆ ಇದೆ. ಆಧಾರ ಕಾರ್ಡ್ ನಲ್ಲಿ ನಾವು ನೀಡುವ ಎಲ್ಲಾ ಮಾಹಿತಿಗಳು ಸ್ಪಷ್ಟವಾಗಿ ಹಾಗೂ ವಸ್ತುನಿಷ್ಠವಾಗಿ ಇರಬೇಕಾದ ಅನಿವಾರ್ಯತೆ ಇದೆ. ಏನಾದರೂ ತಪ್ಪುಗಳು ಸಂಭವಿಸಿದರೆ ಶ್ರೀಘ್ರದಲ್ಲೇ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂಬುದನ್ನು ನಾವು ಮರೆಯಬಾರದು.

ಆಧಾರ್ ನ ವಿವರಗಳಲ್ಲಿ ಪ್ರಮುಖವಾಗಿ ಇರಬೇಕಾಗಿರುವುದು ನಿಮ್ಮ ಮೊಬೈಲ್ ಸಂಖ್ಯೆ. ಏಕೆಂದರೆ ನಿಮ್ಮ ಮೊಬೈಲ್ ನಂಬರ್ ನೇರವಾಗಿ ಆಧಾರ್ ಕಾರ್ಡ್ ಜೊತೆಗೆ ಲಿಂಕ್ ಆಗಿರುತ್ತದೆ. ಹೀಗೆ ಲಿಂಕ್ ಆಗಿದ್ದರೆ ಆಧಾರ್ ಕಾರ್ಡನ್ನು ಬಳಸಿ ಅಥವಾ ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಯಾವುದೇ ಕೆಲಸವನ್ನು ಮಾಡಿದಾಗಲೂ ಸಹ ಕೂಡಲೇ ನಿಮ್ಮ ಮೊಬೈಲ್ ನಂಬರ್ ಗೆ ಸಂದೇಶವು ಬರುತ್ತದೆ. ಒಂದು ವೇಳೆ ನೀವು ಆಧಾರ್ ನಲ್ಲಿ ಲಿಂಕ್ ಮಾಡಿರುವ ಫೋನ್ ನಂಬರ್ ಈಗ ಕೆಲಸ ಮಾಡುತ್ತಿಲ್ಲವೆಂದರೆ ಅಥವಾ ಆ ನಂಬರನ್ನು ನೀವು ಬಳಸುತ್ತಿಲ್ಲ ಎನ್ನುವುದಾದರೆ ಇಲ್ಲಿರುವ ಮಾಹಿತಿ ನಿಮಗಾಗಿ, ಸ್ವಲ್ಪ ಗಮನವಿಟ್ಟು ಈ ವಿಚಾರವನ್ನು ತಿಳಿದುಕೊಳ್ಳಿ.

ಆಧಾರ್ ಲಿಂಕ್ ಮಾಡಿರುವ ಫೋನ್ ನಂಬರ್ ಒಂದು ವೇಳೆ ಕೆಲಸ ಮಾಡುತ್ತಿಲ್ಲ ಎನ್ನುವುದಾದರೆ ಆಗ ಆಧಾರ್ ನಲ್ಲಿ ಏನಾದರೂ ತಿದ್ದುಪಡಿ ಮಾಡಿಸಬೇಕಾದರೆ ಅಥವಾ ಅದನ್ನು ನವೀಕರಣ ಮಾಡಿಸಬೇಕೆಂದು ಕೊಂಡಾಗ ಸಮಸ್ಯೆ ಎದುರಾಗುತ್ತದೆ. ಏಕೆಂದರೆ ಆಧಾರ್ ಕಾರ್ಡ್ ನಲ್ಲಿ ಯಾವುದೇ ತಿದ್ದುಪಡಿ ಅಥವಾ ನವೀಕರಣವನ್ನು ಮಾಡಿಸಬೇಕು ಎಂದಾಗ ಓಟಿಪಿಯು ನಿಮ್ಮ ಆಧಾರ್ ಲಿಂಕ್ ಆಗಿರುವ ಮೊಬೈಲ್ ನಂಬರ್ ಗೆ ಬರುತ್ತದೆ. ಆದ್ದರಿಂದಲೇ ನಂಬರನ್ನು ಅಪ್ ಡೇಟ್ ಮಾಡಿಸದೆ ಹೋದಲ್ಲಿ ಬಹಳಷ್ಟು ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ. ಈಗ ನಾವು ಆಧಾರ್ ನಲ್ಲಿ ನಿಮ್ಮ ಹೊಸ ನಂಬರನ್ನು ಅಪ್ಡೇಟ್ ಮಾಡಲು ಅಥವಾ ಅದನ್ನು ನವೀಕರಣಗೊಳಿಸಲಾಗುವುದು ಇರುವ ಮಾರ್ಗದ ಕುರಿತಾಗಿ ಹೇಳಲು ಹೊರಟಿದ್ದೇವೆ.

ಆಧಾರ್ ಕಾರ್ಡ್ ಗೆ ಸಂಬಂಧಿಸಿದಂತೆ ಮೊಬೈಲ್ ನಂಬರನ್ನು ನವೀಕರಣ ಮಾಡಿಸಬೇಕಾದರೆ ಮೊದಲಿಗೆ ನೀವು ನಿಮ್ಮ ಹತ್ತಿರದ ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ. ಜೊತೆಗೆ ನಿಮ್ಮ ಆಧಾರ್ ಕಾರ್ಡನ್ನು ಕೂಡಾ ತೆಗೆದುಕೊಂಡು ಹೋಗಬೇಕು. ಅಲ್ಲಿ ಹೋದ ನಂತರ ಆಡ್ ಮತ್ತು ಅಪ್ಡೇಟ್ ಮೊಬೈಲ್ ನಂಬರ್ ಎನ್ನುವ ಆಯ್ಕೆಯನ್ನು ಆರಿಸಿಕೊಳ್ಳಬೇಕು. ಇದಕ್ಕಾಗಿ ನೀವು ಐವತ್ತು ರೂಪಾಯಿಗಳನ್ನು ಪಾವತಿ ಮಾಡಬೇಕು. 1947 ನಂಬರಿಗೆ ಕರೆಯನ್ನು ಮಾಡುವ ಮೂಲಕ ಮೊಬೈಲ್ ನಂಬರ್ ಅಪ್ಡೇಟ್ ಗೆ ಸಂಬಂಧಿಸಿದಂತೆ ನೀವು ಮಾಡಿರುವ ವಿನಂತಿಯ ಸದ್ಯದ ಸ್ಥಿತಿ ಏನಾಗಿದೆ ಎಂಬ ಸ್ಟೇಟಸ್ ಅನ್ನು ಕೂಡ ಪಡೆಯಲು ಅವಕಾಶವಿದೆ.