ಆನಂದ್ ಮಹೀಂದ್ರ ಶೇರ್ ಮಾಡಿದರು ಅಗ್ಗದಲ್ಲಿ ಅಗ್ಗದ ಬೆಲೆಯ ವಾಕಿಂಗ್,ರನ್ನಿಂಗ್ ಮಾಡುವ ಟ್ರೇಡ್ ಮಿಲ್ Video!
ಜಗತ್ತಿನಲ್ಲಿ ಟ್ಯಾಲೆಂಟ್ ತುಂಬಿದ ಜನರಿಗೇನು ಕಮ್ಮಿ ಇಲ್ಲ. ಅದರಲ್ಲೂ ಭಾರತೀಯರ ಮೈಂಡ್ ನಲ್ಲಂತೂ ಈ ಟ್ಯಾಲೆಂಟ್ ಒತ್ತಿ ಒತ್ತಿ ತುಂಬಿದೆ ಎಂದರೆ ತಪ್ಪಲ್ಲ. ಪ್ರತಿಯೊಂದರಲ್ಲಿ ಭಾರತೀಯರು ಏನಾದರೂ ಜೂಗಾಡ್ ಮಾಡುವುದರಲ್ಲಿ ತುಂಬಾ ಎಕ್ಸ್ಪರ್ಟ್ ಎಂದು ಹೇಳಲಾಗುತ್ತದೆ. ಹೆಚ್ಚಿನ ಬೆಲೆಯ ವಸ್ತುಗಳಿಗೆ ಪರ್ಯಾಯವಾಗಿ ಅದೇ ಕೆಲಸವನ್ನು ಮಾಡುವ ಬೇರೆ ವಸ್ತುಗಳನ್ನು ಕಡಿಮೆ ಬೆಲೆಯಲ್ಲಿ ತಯಾರಿಸುವ ಟೆಕ್ನಿಕ್ ನಮ್ಮ ಹುಡುಗರಲ್ಲಿದೆ. ಸದ್ಯ ವ್ಯಕ್ತಿಯೊಬ್ಬ ಟ್ರೇಡ್ ಮಿಲ್ ನಿಂದ (ವಾಕಿಂಗ್ ಮತ್ತು ರನ್ನಿಂಗ್ ಗಾಗಿ ಜಿಮ್ ನಲ್ಲಿ, ಮನೆಯಲ್ಲಿ ಅಥವಾ ಆಫೀಸಿನಲ್ಲಿ ಉಪಯೋಗಿಸುವ ಸಾಧನ) ತೆಗೆದುಕೊಳ್ಳುವ ಕೆಲಸ ತುಂಬಾ ಕಡಿಮೆ ಬೆಲೆಯಲ್ಲಿ ಅಂದರೆ ಶೂನ್ಯ ಬೆಲೆಯಲ್ಲಿ ಬೇರೆ ಆಪ್ಷನ್ ನಲ್ಲಿ ಕಂಡು ಹಿಡಿದಿದ್ದಾನೆ.
ಪ್ರಸ್ತುತ ವಿಡಿಯೋ ಅಷ್ಟೇ ಕಾಮಿಡಿ ಸಹ ಅನಿಸುತ್ತದೆ. ಈ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಪಾತ್ರೆಗಳನ್ನು ತೊಳೆಯುವ ಲಿಕ್ವಿಡ್ ನ್ನು ಮೊದಲು ನೆಲದ ಮೇಲೆ ಚೆಲ್ಲುತ್ತಾನೆ. ತದನಂತರ ಅದರ ಮೇಲೆ ಸ್ವಲ್ಪ ನೀರು ಚೆಲ್ಲಿ ಕಾಲಿನಿಂದ ಅದೆಲ್ಲ ಕಡೆಗೆ ಹರಡುವ ಹಾಗೆ ಮಾಡುತ್ತಾನೆ. ತದನಂತರ ಅದರ ಮೇಲೆ ಮೊದಲು ಶುರು ಮಾಡುತ್ತಾನೆ ವಾಕಿಂಗ್. ವಾಕಿಂಗ್ ಸ್ಟಾರ್ಟ್ ಮಾಡುವ ಮುನ್ನ ಗಮನವಿಟ್ಟು ನೋಡಿ ಅದರ ಸ್ಪೀಡ್ ಬಟನ್ ಪ್ರೆಸ್ ಮಾಡುತ್ತಾನೆ. ಶುರುವಾಯ್ತು ವ್ಯಕ್ತಿಯ ವಾಕಿಂಗ್. ಕೆಲವೇ ಕ್ಷಣಗಳ ನಂತರ ಈ ಅಗ್ಗದ ಟ್ರೇಡ್ ಮಿಲ್ ನ ಬಟನ್ ಪ್ರೆಸ್ ಮಾಡಿ ವೇಗ ಸ್ವಲ್ಪ ಹೆಚ್ಚಿಸುತ್ತಾನೆ. ಮತ್ತೆ ಕೆಲವು ಕ್ಷಣಗಳ ನಂತರ ಪುನಃ ಬಟನ್ ಪ್ರೆಸ್ ಮಾಡಿ ಹೈ ಸ್ಪೀಡ್ ನಲ್ಲಿ ಇಡುತ್ತಾನೆ. ಆತ ಓಡುವುದನ್ನು ಇಲ್ಲಿ ನೋಡಬಹುದು ಮತ್ತು ಈ ದೃಶ್ಯವನ್ನು ನೋಡಿ ನಗು ತಡೆಯಲು ಸಾಧ್ಯವಾದರೆ ಪ್ರಯತ್ನ ಮಾಡಿ. ಹೇಗಿದೆ ಕಡಿಮೆ ಬೆಲೆಯ ಟ್ರೇಡ್ ಮಿಲ್, ಇಷ್ಟವಾಯ್ತಾ?
ನೋಡಿ ಈ ವಿಡಿಯೋ…
The lowest cost treadmill in the world. And this year’s Innovation Award trophy goes to… pic.twitter.com/oMlyEPBQoy
— anand mahindra (@anandmahindra) January 7, 2023
ಪ್ರಸ್ತುತ ಈ ವಿಡಿಯೋವನ್ನು ಮಹೀಂದ್ರ ಗ್ರೂಪಿನ ಚೇರ್ಮನ್ ರಾದ ಆನಂದ್ ಮಹೀಂದ್ರಾ ಅವರು ತಮ್ಮ ಟ್ವಿಟರ್ ಅಕೌಂಟ್ ನಿಂದ ಶೇರ್ ಮಾಡಿದ್ದಾರೆ. ಈ ವಿಡಿಯೋ ಶೇರ್ ಮಾಡಿದ ಬರೀ ಒಂಬತ್ತು ಗಂಟೆಗಳಲ್ಲಿ 1.4 ಮಿಲಿಯನ್ ಗೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ನೆಟ್ಟಿಗರು ನೀಡಿದ ಪ್ರತಿಕ್ರಿಯೆಗಳು ತುಂಬಾ ತಮಾಷೆಯಿಂದ ಕೂಡಿವೆ. ಒಬ್ಬನು ಡಾಕ್ಟರ್ ಈತನಿಗೆ ವೆಟ್ ಮಾಡುತ್ತಿದ್ದಾನೆ ಎಂದರೆ ಇನ್ನೊಬ್ಬ ಹೆಂಡತಿ ಕೇಳುತ್ತಿದ್ದಾಳೆ ಆ ಫ್ಲೋರ್ ಮೇಲೆ ಚೆಲ್ಲಿದ ಆಯಿಲ್ ಯಾರು ಸ್ವಚ್ಚಗೊಳಿಸುವರೆಂದು.