ಆನೆಯೊಂದು ಮರ ಉರುಳಿಸಿದ ನಂತರ ಮಾಡಿದ ಈ ಪ್ರತಾಪವನ್ನೊಮ್ಮೆ ಮಿಸ್ ಮಾಡದೇ ವಿಡಿಯೋದಲ್ಲಿ ನೋಡಿಯೇ ಬಿಡಿ! ನಕ್ಕು ನಕ್ಕು ಸುಸ್ತಾಗುವಿರಿ…

ಕಾಡಿನಲ್ಲಿ ವಾಸಿಸುವ ಕಾಡುಪ್ರಾಣಿಗಳ ಜೀವನವೇ ತುಂಬಾ ಅದ್ಭುತವಾಗಿದೆ. ಅಲ್ಲಿ ವಾಸಿಸುವ ಪ್ರತಿಯೊಂದು ಪ್ರಾಣಿಗಳು ತಮ್ಮ ಬದುಕಿಗಾಗಿ ಏನಾದರೊಂದು ಹೊಸ ಹೊಸ ಮಾರ್ಗಗಳನ್ನು ಶೋಧಿಸುತ್ತಲೇ ಇರುತ್ತವೆ. ಮನುಷ್ಯನಿಗೆ ತನ್ನ ಕೆಲಸಗಳನ್ನು ಮಾಡಿಕೊಳ್ಳಲು ಸುಲಭವಾಗಲೆಂದು ನಿಸರ್ಗವು ಎರಡು ಕೈಗಳನ್ನು ದಯಪಾಲಿಸಿದೆ. ಅಥವಾ ಮನುಷ್ಯನು ತನ್ನ ಬುದ್ಧಿಶಕ್ತಿಯಿಂದ ಕೈಗಳನ್ನು ಹೇಗೆ ಉಪಯೋಗ ಮಾಡಿಕೊಳ್ಳುವುದೆಂದು ತಿಳಿದುಕೊಂಡನು. ಆದರೆ ಮನುಷ್ಯನ ಹೊರತಾಗಿ ಉಳಿದ ಪ್ರಾಣಿಗಳು ಈ ರೀತಿಯ ಸೌಲಭ್ಯವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. ಅದಕ್ಕಾಗಿ ಈ ಪ್ರಾಣಿಗಳು ಬೇರೆ ಮಾರ್ಗವನ್ನು ಹುಡುಕಿಕೊಳ್ಳುತ್ತವೆ.

ಈಗ ಇಲ್ಲಿ ನೋಡುವ ವಿಡಿಯೋದಲ್ಲಿ ಆನೆಯೊಂದು ತನ್ನ ಕೆಲಸಕ್ಕಾಗಿ ಮರವನ್ನೇ ಕೆಳಗೆ ಉರುಳಿಸಿದೆ. ಅಷ್ಟಕ್ಕೂ ಈ ಆನೆಯು ಅದ್ಯಾವ ಕೆಲಸಕ್ಕಾಗಿ ಮರವನ್ನು ಉರುಳಿಸಿದೆ ಎಂದು ಕೇಳುತ್ತೀರಾ? ಹಾಗಾದರೆ ಇಲ್ಲಿ ಓದಿ…

ವಿಡಿಯೋದಲ್ಲಿ ಕಾಣುವಂತೆ ಆನೆಯು ರಸ್ತೆಯ ಬದಿಯಲ್ಲಿರುವ ಮರವೊಂದನ್ನು ಕೆಳಗೆ ಉರುಳಿಸುತ್ತದೆ. ಆನೆಗಳು ಆಗಾಗ ಈ ರೀತಿಯ ಕೆಲಸವನ್ನು ಮಾಡುವುದುಂಟು. ಆದರೆ ಈ ಆನೆಯು ಸುಮ್ಮನೆ ಮರವನ್ನು ಉರುಳಿಸಿಲ್ಲ ಎಂಬುದು ನಂತರ ತಿಳಿಯುತ್ತದೆ. ಯಾಕೆಂದರೆ ಆನೆಗೆ ಅದರ ಹಿಂಬದಿಯಲ್ಲಿ ತುರಿಕೆ ಉಂಟಾಗಿತ್ತು. ಹೀಗಾಗಿ ಆ ತುರಿಕೆಯನ್ನು ನಿವಾರಿಸಿಕೊಳ್ಳಲು ಆನೆಯು ಮರವನ್ನು ಕೆಳಗೆ ಉರುಳಿಸಿ ಅದರ ಮೇಲೆ ಸರಿಯಾಗಿ ಕುಳಿತುಕೊಂಡು ಅತ್ತಿಂದಿತ್ತ ಇತ್ತಿಂದತ್ತ ತುರಿಕೆ ಕಡಿಮೆಯಾಗುವವರೆಗೆ ಸರಿದಾಡಿದೆ.

ನೋಡಿ ಈ ವಿಡಿಯೋ…

ಪ್ರಸ್ತುತ ಈ ವಿಡಿಯೋ ನೇಟಿಜನ್ಸ್ ಗಳಿಗೆ ತುಂಬಾನೇ ಇಷ್ಟವಾಗಿದೆ ಎಂಬುದು ಅವರು ಮಾಡಿರುವ ಕಮೆಂಟ್ ಗಳಿಂದ ಕಂಡುಬರುತ್ತದೆ. ಈ ವಿಡಿಯೋವನ್ನು ಟ್ವಿಟರ್ನಲ್ಲಿ ರೂಪಿನ್ ಶರ್ಮ ಅವರು ಶೇರ್ ಮಾಡಿದ್ದಾರೆ. ಇದನ್ನು ನೋಡಿದ ಯೂಸರ್ ನೊಬ್ಬ “ತುರಿಕೆಯ ನಿವಾರಣೆಗಾಗಿ ಪಾಪ ಒಂದು ಮರದ ಜೀವ ಹೋಯಿತು” ಎಂದು ಕಮೆಂಟ್ ಮಾಡಿದ್ದಾನೆ. ಇನ್ನೊಬ್ಬ ಯೂಸರ್ ಹಿಂದಿಯಲ್ಲಿ “ಶೌಕ್ ಬಡಿ ಚೀಜ್ ಹೈ” ಎಂದಿದ್ದಾನೆ.