ಆನ್ಲೈನ್ ಮೀಟಿಂಗ್ ವೇಳೆ ನಡೆದ ಅವಘಡ: ಮೈ ಮೇಲೆ ಬಟ್ಟೆಯಿಲ್ಲದೆ ಕಾಣಿಸಿಕೊಂಡ ನಾಯಕನ ಪತ್ನಿ, ಮುಜುಗರಕ್ಕೀಡಾದ ಅನ್ಯ ನಾಯಕರು, ಸದಸ್ಯರು
ಕೊರೊನಾ ಮಹಾಮಾರಿಯು ಇಡೀ ಜಗತ್ತಿನಾದ್ಯಂತ ಹರಡಿದ್ದು ಅದರ ಪ್ರ ಕೋ ಪವು ಇನ್ನೂ ಕಡಿಮೆಯಾಗಿಲ್ಲ. ಕೊರೊನ ಇಡೀ ಮಾನವ ಸಮುದಾಯದ ಜೀವನದ ದಿಕ್ಕನ್ನು ಸಂಪೂರ್ಣವಾಗಿ ಬದಲಿಸಿ ಹಾಕಿದೆ. ಜನರ ಕೆಲಸದ ವಿಧಾನದಲ್ಲಿ ದೊಡ್ಡ ಮಟ್ಟದಲ್ಲಿ ಬದಲಾವಣೆಯನ್ನು ಕಂಡಿದೆ. ಈಗ ಬಹಳಷ್ಟು ಜನರು ತಮ್ಮ ಅರ್ಧದಷ್ಟು ಕೆಲಸವನ್ನು ಕಚೇರಿಯ ಬದಲಾಗಿ ತಮ್ಮ ತಮ್ಮ ಮನೆಗಳಲ್ಲಿಯೇ ಮಾಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಆನ್ಲೈನ್ ಮೀಟಿಂಗ್ ಗಳು ಹೆಚ್ಚು ಪ್ರಚಲಿತವಾಗುತ್ತಿದೆ. ಆದರೆ ಆನ್ ಲೈನ್ ಮೀಟಿಂಗ್ ಗಳು ನಡೆಯುವಂತಹ ಸಂದರ್ಭದಲ್ಲಿ ಕೆಲವು ಮುಜುಗರ ಉಂಟು ಮಾಡುವಂತಹ ಘಟನೆಗಳು ಕೂಡಾ ನಡೆದಿರುವುದು ಮಾತ್ರವೇ ಅಲ್ಲದೇ ಅವು ವಿಶ್ವದಾದ್ಯಂತ ದೊಡ್ಡ ಸುದ್ದಿಗಳಾಗಿ ಹೋಗಿವೆ. ಈಗ ಅದೇ ಸಾಲಿಗೆ ಮತ್ತೊಂದು ಸುದ್ದಿ ದಕ್ಷಿಣ ಆಫ್ರಿಕಾದಿಂದ ಕೂಡ ವರದಿಯಾಗಿದೆ.
ವಾಸ್ತವವಾಗಿ ಕಳೆದ ಮಂಗಳವಾರದಂದು ದಕ್ಷಿಣ ಆಫ್ರಿಕಾದಲ್ಲಿ ನಾಯಕರು ಝೂಮ್ ಮೀಟಿಂಗ್ ಒಂದನ್ನು ನಡೆಸಿದ್ದರು. ಆಗ ಸಭೆಯು ನಡೆಯುತ್ತಿರುವ ವೇಳೆಯಲ್ಲೇ ನಾಯಕರೊಬ್ಬರ ಪತ್ನಿಯ ತನ್ನ ಪತಿಯ ಹಿಂದೆ ಬೆ ತ್ತ ಲೆಯಾಗಿ ನಿಂತಿರುವ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಈ ಕಾರಣದಿಂದ ಈಗ ಆ ನಾಯಕ ಮತ್ತು ಅವರ ಪತ್ನಿ ಇಬ್ಬರೂ ಕೂಡ ಮುಜುಗರ ಪಡುವಂತಾಗಿದೆ. ದಕ್ಷಿಣ ಆಫ್ರಿಕಾದ 23 ಸಾಂಪ್ರದಾಯಿಕ ನಾಯಕರ ಸಂಘಟನೆಯಾದ ಹೌಸ್ ಆಫ್ ಟ್ರೆಡಿಷನಲ್ ಲೀಡರ್ಸ್ ಸದಸ್ಯ ಕ್ಸೊಲಿಲೆ ಎನ್ಡೆವು ಅವರು ಕಳೆದ ಮಂಗಳವಾರ ದಕ್ಷಿಣ ಆಫ್ರಿಕಾದ ಪೂರ್ವ ಕೇಪ್ ಟೌನ್ ನಲ್ಲಿ ಹೆಚ್ಚುತ್ತಿರುವ ಕೊರೋನಾ ಸಂಕ್ರಮಣ ಹಾಗೂ ಅದರಿಂದ ಉಂಟಾಗುತ್ತಿರುವ ಸಾ ವುಗಳ ಕುರಿತಾಗಿ ಚರ್ಚೆಯನ್ನು ನಡೆಸುತ್ತಿದ್ದರು.
ಅವರು ಚರ್ಚೆಯ ವೇಳೆಯಲ್ಲಿ ಹೇಗೆ ಕೇಪ್ ಟೌನ್ ನಲ್ಲಿ ಕೊರೊನಾ ಸಂಕ್ರಮಣವನ್ನು ನಿಯಂತ್ರಣಕ್ಕೆ ತರಲು ಸ್ಥಳೀಯ ವೈದ್ಯರ ಜೊತೆಗೆ ತಾನು ಕೆಲಸವನ್ನು ಮಾಡುತ್ತಿರುವುದಾಗಿ ವಿವರಿಸುತ್ತಿರುವಾಗಲೇ ಅವರ ಪತ್ನಿಯು ಬೆತ್ತಲೆಯಾಗಿ ಅವರ ಹಿಂದೆ ಕ್ಯಾಮೆರಾದಲ್ಲಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಸಂಘಟನೆಯ ನಾಯಕರು ಹಾಗೂ ಸದಸ್ಯರು ಒಂದು ಕ್ಷಣ ಶಾ ಕ್ ಆಗಿದ್ದಾರೆ. ನಂತರ ಒಬ್ಬರು ಎನ್ಡೇವು ಅವರಿಗೆ ನಿಮ್ಮ ಪತ್ನಿ ಬಟ್ಟೆಯನ್ನು ಧರಿಸಿದೆ, ವಿವಸ್ತ್ರವಾಗಿ ನಿಂತಿರುವುದು ಸ್ಕ್ರೀನಿನಲ್ಲಿ ಕಾಣಿಸುತ್ತಿದೆ ಎಂದು ಹೇಳಿದ್ದಾರೆ. ಆ ಮಾತನ್ನು ಕೇಳಿದ ಕೂಡಲೇ ನಾಚಿಕೆ ಹಾಗೂ ಮುಜುಗರವುಂಟಾದ ಕಾರಣ ಎನ್ಡೇವು ಅವರು ಕ್ಯಾಮರಾವನ್ನು ಪಾಸ್ ಮಾಡಿದ್ದಾರೆ.
ನಾಯಕನ ಪತ್ನಿಯು ಬೆತ್ತಲೆಯಾಗಿ ಪರದೆಯ ಮೇಲೆ ಕಂಡಕೂಡಲೇ ಸಭೆಯಲ್ಲಿದ್ದ ಮತ್ತೋರ್ವ ನಾಯಕರು ಎನ್ಡೇವು ಅವರ ಮಾತಿಗೆ ಅಡ್ಡಿ ಪಡಿಸಿ, ನಿಮ್ಮ ಹಿಂದೆ ನಿಂತಿರುವ ಮಹಿಳೆ ಸರಿಯಾಗಿ ವಸ್ತ್ರವನ್ನು ಧರಿಸಿಲ್ಲ. ನಮಗೆ ಎಲ್ಲವೂ ಕಾಣಿಸುತ್ತಿದೆ. ನೀವು ಮೀಟಿಂಗ್ ನಲ್ಲಿ ಇರುವ ವಿಷಯವನ್ನು ಅವರಿಗೆ ತಿಳಿಸಿಲ್ಲವೇ? ನಮಗೆ ಇದು ತೀವ್ರ ಮುಜುಗರಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದ್ದಾರೆ. ಈ ಮಾತನ್ನು ಕೇಳಿದ ಕೂಡಲೇ ಎನ್ಡೇವು ಅವರು ಎಲ್ಲ ನಾಯಕರ ಕ್ಷಮೆಯನ್ನು ಕೇಳುತ್ತಾ, ಈ ವಿಚಾರಕ್ಕೆ ನನಗೆ ಬಹಳ ಬೇಸರವಾಗಿದೆ. ಕ್ಯಾಮರಾ ಕಡೆ ನನ್ನ ಗಮನವನ್ನು ಕೇಂದ್ರೀಕರಿಸಿದ ನಾನು ಹಿಂದೆ ಏನು ನಡೆಯುತ್ತಿದೆ ಎಂಬುದನ್ನು ನಾನು ಗಮನಿಸಲಿಲ್ಲ ಕ್ಷಮಿಸಿ ಎಂದು ಹೇಳಿದ್ದಾರೆ.
ಈ ಘಟನೆಯ ನಂತರ ಅವರು ಈ ವಿಷಯದ ಕುರಿತಾಗಿ ಸ್ಪಷ್ಟನೆ ನೀಡಿದ್ದು ಝೂಮ್ ಅಪ್ಲಿಕೇಶನ್ನಲ್ಲಿ ಮೀಟಿಂಗ್ ಮಾಡುವುದು ನಮಗೆ ಹೊಸತು, ಈ ವಿಷಯವಾಗಿ ನಮಗೆ ಹೆಚ್ಚಿನ ತರಬೇತಿ ನೀಡಲಾಗಿಲ್ಲ. ನನ್ನ ಮನೆಯಲ್ಲಿ ಕೂಡ ಇದೆಲ್ಲವೂ ಹೊಸದು ಎನಿಸಿದೆ. ಆದ್ದರಿಂದ ಇದರ ಬಗ್ಗೆ ಹೆಚ್ಚು ತಿಳಿಯಬೇಕಾಗಿದೆ. ಅಲ್ಲದೇ ಅಂದು ರಾತ್ರಿ ಹತ್ತು ಗಂಟೆಗೆ ಸಭೆ ಮುಗಿಯಬೇಕಿತ್ತು. ಆದರೆ ಅನಂತರ ಕೂಡಾ ಅದು ಮುಂದುವರೆದಿತ್ತು. ನನ್ನ ಪತ್ನಿಗೆ ಅದು ಗೊತ್ತಿಲ್ಲದೇ ಹಾಗೆ ವಿ ವ ಸ್ತ್ರಳಾಗಿ ಆಕೆ ಬಾತ್ ರೂಮ್ ಕಡೆಗೆ ಹೋಗುತ್ತಿದ್ದಳು, ಆಕೆಗೆ ಮೀಟಿಂಗ್ ಇನ್ನೂ ನಡೆಯುತ್ತಿರುವ ವಿಷಯ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ.