ಆನ್ ಡ್ಯೂಟಿ ಕ್ಲಿಕ್ ಆದ ಈ ಸಾಲಿಡ್ ಸೆಲ್ಫಿ ಆಯಿತು ವೈರಲ್! ಇದರಲ್ಲಡಗಿದೆ ಒಂದು ತುಂಬಾ ಸ್ಪೆಷಲ್! ನೇಟಿಜನ್ಸ್ ಫುಲ್ ಫಿದಾ.

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಮನಮುಟ್ಟುವ ಸುಂದರ ಫೋಟೋ ಒಂದು ವೇಗವಾಗಿ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ತಂದೆ-ಮಗ ಇಬ್ಬರೂ ರೈಲಿನಲ್ಲಿ ತಮ್ಮ ಸೇವೆಯಲ್ಲಿ ನಿರತರಾಗಿದ್ದಾರೆ. ವಿಶೇಷವೆಂದರೆ ತಂದೆ ಮಗ ಇಬ್ಬರೂ ಬೇರೆ ಬೇರೆ ರೈಲಿನಲ್ಲಿ ಡ್ಯೂಟಿ ಮಾಡುವಾಗ ಆಕಸ್ಮಿಕವಾಗಿ ಸಂಧಿಸಿದ್ದಾರೆ. ಅದೇ ಸಂದರ್ಭದಲ್ಲಿ ಮಗ ತೆಗೆದ ಈ ಫೋಟೋ ವೈರಲ್ ಆಗುತ್ತಿದೆ.

ಇಲ್ಲಿ ಮಗ ಟಿಕೆಟ್ ಎಕ್ಸಾಮಿನರ್ (TTE) ಆಗಿ ಕಾರ್ಯ ನಿರ್ವಹಿಸುತ್ತಿದ್ದರೆ ತಂದೆ ಗಾರ್ಡ್ ಆಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ನಿಜಕ್ಕೂ ಈ ಸೆಲ್ಫಿ ಅಮೇಜಿಂಗ್ ಎಂದೇ ಹೇಳಬಹುದು. ಇಲ್ಲಿ ತಂದೆ ಗಾರ್ಡ್ ಆಗಿ ಹಾಗೂ ಮಗ TTE ಆಗಿ ತಮ್ಮ ಜವಾಬ್ದಾರಿಯನ್ನು ನಿರ್ವಹಿಸುತ್ತಿರುವಾಗ ಎರಡು ಟ್ರೈನ್ ಗಳು ತುಂಬಾ ಹತ್ತಿರದಿಂದ ಪಾಸ್ ಆಗುವಾಗ ಮಗ ಸೆಲ್ಫಿ ಕ್ಲಿಕ್ಕಿಸಿದ್ದಾನೆ.

ತಂದೆ ಮಗನ ಈ ಸುಂದರವಾದ ಫೋಟೋ ನೆಟ್ಟಿಗರಿಗೆ ತುಂಬಾ ಭಾವನಾತ್ಮಕವಾಗಿ ಅವರ ಹೃದಯವನ್ನೇ ತಟ್ಟಿದೆ. ನೇಟಿಜನ್ಸ್ ಗಳು ಈ ಫೋಟೋವನ್ನು ತುಂಬಾನೇ ಇಷ್ಟಪಟ್ಟಿದ್ದಾರೆ.