ಆರ್ಯನ್ ಖಾನ್ ಅರೆಸ್ಟ್ ನಂತರ ಅಕ್ಷಯ್ ಕುಮಾರ್ ಇನ್ನೂವರೆಗೂ ಶಾಂತರಾಗಿಯೇ ಇದ್ದಾರೆ, ಕಾರಣ…
ಬಾಲಿವುಡ್ ನಲ್ಲಿ ಯಾವುದೇ ಘಟನೆಗಳು ನಡೆಯಲಿ ಸೆಲೆಬ್ರಿಟಿಗಳು ಆಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ವಿಚಾರಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಟ್ವೀಟ್ ಮಾಡುವುದು ಅಥವಾ ಪೋಸ್ಟ್ ಮಾಡುವುದು ಕಂಡುಬರುತ್ತದೆ.
ಈಗಲೂ ಹಾಗೆಯೇ ಕಂಡುಬರುತ್ತಿದೆ. ಬಾಲಿವುಡ್ ಕಿಂಗ್ ಖಾನ್ ಶಾರುಖ್ ಖಾನ್ ಅವರ ಮಗ ಆರ್ಯನ್ ಖಾನ್ ಡ್ರ#ಗ್ಸ್ ಕೇಸ್ನಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ. ಸದ್ಯ NCB ಕಡೆಯಿಂದ ಆತನ ತನಿಖೆ ನಡೆದಿದೆ. ಈ ಸಂದರ್ಭದಲ್ಲಿ ಶಾರುಖ್ ಖಾನ್ ಗೆ ಆತನ ಫ್ಯಾನ್ಸ್ ಗಳು ಸಪೋರ್ಟ್ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಅನೇಕ ದೊಡ್ಡ ದೊಡ್ಡ ಸ್ಟಾರ್ಸ್ ಗಳು ಸಹಿತ ಶಾರುಖ್ ಖಾನ್ ಅವರನ್ನು ಸಪೋರ್ಟ್ ಮಾಡುತ್ತಿರುವುದು ಕಂಡುಬರುತ್ತಿದೆ. ಅವರು ಮಾಡುತ್ತಿರುವ ಟ್ವಿಟ್ ಮತ್ತು ಪೋಸ್ಟ್ ಗಳಿಂದ ಆರ್ಯನ್ ಖಾನ್ ಕಡೆಗೆ ಒಲವು ಇರುವಂತೆ ಕಂಡುಬರುತ್ತಿದೆ.
ಆರ್ಯನ್ ಖಾನ್ ನನ್ನು ಅರೆಸ್ಟ್ ಮಾಡಿದ ನಂತರ ಎಲ್ಲಕ್ಕೂ ಮೊದಲು ಸಲ್ಮಾನ್ ಖಾನ್ ಅವರು ಶಾರುಖ್ ಖಾನ್ ಮನೆಗೆ ಹೋಗಿ ಅವರಿಗೆ ಭೇಟಿಯಾಗಿದ್ದರು. ಅನೇಕ ಸಲ ತಮ್ಮ ವಿಚಾರಗಳನ್ನು ಸ್ಪಷ್ಟವಾಗಿ ಮಂಡಿಸುವ ಅಕ್ಷಯ್ ಕುಮಾರ್ ಮಾತ್ರ ಈ ಪ್ರಕರಣದಲ್ಲಿ ಇಲ್ಲಿಯವರೆಗೆ ಶಾಂತರಾಗಿದ್ದದ್ದು ಕಂಡುಬರುತ್ತಿದೆ. ಅಕ್ಷಯ್ ಕುಮಾರ್ ಈ ಪ್ರಕರಣದ ಬಗ್ಗೆ ಇಲ್ಲಿಯವರೆಗೆ ಯಾವುದೇ ರೀತಿಯ ಪೋಸ್ಟ್ ಅಥವಾ ಪ್ರತಿಕ್ರಿಯೆ ಶೇರ್ ಮಾಡಿಲ್ಲ.
ಅಕ್ಷಯ್ ಮತ್ತು ಶಾರುಖ್ ಖಾನ್ ಒಳ್ಳೆಯ ಮಿತ್ರರಿದ್ದಾರೆ. ಈ ಸಂದರ್ಭದಲ್ಲಿ ಅಕ್ಷಯ್ ಜೊತೆಗೆ ಅಜಯ್ ಹಾಗೂ ಕಾಜಲ್ ಇವರು ಸಹ ಶಾಂತರಾಗಿ ಇರುವುದೇ ಒಳ್ಳೆಯದೆಂದು ತಿಳಿದಿದ್ದಾರೆ.
ಈ ಪ್ರಕರಣದಲ್ಲಿ ಕೆಲವು ಸೆಲೆಬ್ರಿಟಿಗಳು ಓಪನ್ ಆಗಿ ಮಾತನಾಡುತ್ತಿದ್ದಾರೆ. ಇನ್ನು ಕೆಲವರು ಇಲ್ಲಿಯವರೆಗೆ ಶಾಂತರಾಗಿಯೇ ಇದ್ದಾರೆ. ಇತ್ತಕಡೆ ಆರ್ಯನ್ ಖಾನನ ಸಮಸ್ಯೆಗಳು ಹೆಚ್ಚಾಗುತ್ತಲೇ ಇವೆ. ಆತನ ಮುಂದಿನ ಹೀರಿಂಗ್ ಅಕ್ಟೋಬರ್ 20 ರವರೆಗೆ ಮುಂದೂಡಲಾಗಿದೆ. ಅಲ್ಲಿಯವರೆಗೆ ಆರ್ಯನ್ ಗೆ NCB ಯ ಕೊಠಡಿಯಲ್ಲಿಯೇ ದಿನಗಳನ್ನು ಕಳೆಯಬೇಕಾಗಿದೆ.
ಆರ್ಯನ್ ಖಾನನ ಅರೆಸ್ಟ್ ನಂತರ ಅಕ್ಷಯ್ ಕುಮಾರ್ ತನ್ನ ಮಗನಿಗೆ ಚೆನ್ನಾಗಿ ವಾರ್ನಿಂಗ್ ನೀಡಿದ್ದಾರೆಂದು ಬಾಲಿವುಡ್ ನಲ್ಲಿ ಕೇಳಿ ಬರುತ್ತಿದೆ. ಏಕೆಂದರೆ ಆರ್ಯನ್ ಖಾನ್ ಅರೆಸ್ಟ್ ನಂತರ ಅಕ್ಷಯ್ ಕುಮಾರ್ ಮಗ ಆರವ್ ಸಹ ತುಂಬಾ ಚರ್ಚೆಯಲ್ಲಿದ್ದನು.