ಆಲಿಯಾ ಭಟ್ ಜೊತೆ ತನ್ನ ಸಂಬಂಧದ ಬಗ್ಗೆ ಮೌನ ಮುರಿದ ರಣಬೀರ್ ಕಪೂರ್: ಮದುವೆ ಬಗ್ಗೆ ನೀಡಿದರು ಮಾಹಿತಿ!

ಬಾಲಿವುಡ್ ನ ಬಹುಚರ್ಚಿತ ಜೋಡಿಗಳಲ್ಲಿ ಸ್ಟಾರ್ ಜೋಡಿ ಎನಿಸಿರುವ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ ಕೂಡ ಒಂದು. ಇವರಿಬ್ಬರ ನಡುವಿನ ಸಂಬಂಧದ ಕುರಿತಾಗಿ ಒಂದಲ್ಲ ಒಂದು ಸುದ್ದಿಯು ಮಾಧ್ಯಮಗಳಲ್ಲಿ ಹರಿದಾಡುತ್ತಲೇ ಇರುತ್ತದೆ. ಅಂತಹ ಸುದ್ದಿಗಳಲ್ಲಿ ಒಂದು, ಈ ವರ್ಷದ ಕೊನೆಯಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ವಿವಾಹವಾಗಲಿದ್ದಾರೆ ಎಂಬುದು ಕೂಡಾ ಆಗಿತ್ತು. ಆದರೆ ಈ ಸುದ್ದಿಯು ಕೇವಲ ಒಂದು ಸುದ್ದಿಯಾಗಿ ಮಾತ್ರವೇ ಉಳಿಯಿತೇ ಹೊರತು ಅವರಿಬ್ಬರ ವಿವಾಹವಾಗುವ ಯಾವುದೇ ಲಕ್ಷಣಗಳು ಇನ್ನೂ ಕಾಣುತ್ತಿಲ್ಲ. ಈ ಎಲ್ಲಾ ಸುದ್ದಿಗಳ ನಡುವೆ ಮೊಟ್ಟಮೊದಲ ಬಾರಿಗೆ ನಟ ರಣಬೀರ್ ಕಪೂರ್ ಅವರು ಆಲಿಯಾ ಜೊತೆಗಿನ ತಮ್ಮ ಸಂಬಂಧದ ಬಗ್ಗೆ ಮಾದ್ಯಮವೊಂದರ ಮುಂದೆ ಬಹಳ ಮುಕ್ತವಾಗಿ ಮಾತನಾಡಿದ್ದಾರೆ.

ಕೆಲವೇ ದಿನಗಳ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ನಟ ರಣಬೀರ್ ಕಪೂರ್ ಅವರು, ತಮ್ಮ ಮತ್ತು ಆಲಿಯಾ ನಡುವಿನ ಸಂಬಂಧದ ಕುರಿತಾಗಿ ಹಾಗೂ ತಮ್ಮ ಮದುವೆಯ ವಿಷಯವಾಗಿ ಬಹಳ ಪ್ರಮುಖವಾದ ವಿಚಾರವನ್ನು ಹಂಚಿಕೊಂಡಿದ್ದಾರೆ. ರಣಬೀರ್ ಆಲಿಯಾ ಜೊತೆಗೆ ವಿವಾಹದ ಪ್ಲಾನಿಂಗ್ ಕುರಿತಾಗಿ ಕೂಡ ಮಾತಾಡಿದ್ದಾರೆ. ಅವರು ಕೊರೋನಾ ಮಹಾಮಾರಿ ಸಮಸ್ಯೆ ಇಲ್ಲವಾಗಿದ್ದರೆ ಈ ವೇಳೆಗೆ ವಿವಾಹ ಸಂಪನ್ನವಾಗಿರುತ್ತಿತ್ತು ಎಂದಿದ್ದು, ರಣಬೀರ್ ಅವರು ಆದಷ್ಟು ಬೇಗ ತನ್ನ ಜೀವನದಲ್ಲಿ ಮದುವೆ ಎನ್ನುವ ಲಕ್ಷ್ಯಕ್ಕೆ ಟಿಕ್ ಮಾರ್ಕ್ ಹಾಕುವುದಾಗಿ ಹೇಳಿಕೊಂಡಿದ್ದಾರೆ. ಸಂದರ್ಶನದ ವೇಳೆಯಲ್ಲಿ ರಣಬೀರ್ ಕಪೂರ್ ಆಲಿಯಾ ಭಟ್ ವಿಚಾರವಾಗಿ ಬಹಳಷ್ಟು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ

ಆಲಿಯಾ ಅವರ ಗುಣಗಾನವನ್ನು ಮಾಡುತ್ತಾ ಲಾಕ್ ಡೌನ್ ವೇಳೆಯಲ್ಲಿ ನಾವಿಬ್ಬರೂ ಜೊತೆಯಾಗಿಯೇ ಇದ್ದೆವು ಆ ಸಂದರ್ಭದಲ್ಲಿ ಆಲಿಯಾ ಪ್ರತಿದಿನ ಕೂಡಾ ಒಂದಲ್ಲ ಒಂದು ಹೊಸ ವಿಷಯವನ್ನು ಕಲಿಯಲು ಆಸಕ್ತಿಯನ್ನು ತೋರಿಸುತ್ತಿದ್ದರು. ಆಕೆ ಒಬ್ಬ ಓವರ್ ಅಚೀವರ್ ಎಂದಿರುವ ರಣಬೀರ್, ಆಲಿಯಾ ಗಿಟಾರ್ ನುಡಿಸುವುದರಿಂದ ಹಿಡಿದು ಸ್ಕ್ರೀನ್ ರೈಟಿಂಗ್ ಬರೆಯುವವರೆಗೂ ತರಗತಿಗಳನ್ನು ಕೇಳಿದ್ದಾರೆ, ಆದರೆ ನಾನು ಮಾತ್ರ ಆಲಿಯ ಮುಂದೆ ಸದಾ ಅಂಡರ್ ಅಚೀವರ್ ಅನಿಸುತ್ತದೆ ಏಕೆಂದರೆ ನಾನು ಲಾಕ್ ಡೌನ್ ವೇಳೆಯಲ್ಲಿ ಕೇವಲ ಸಿನಿಮಾಗಳನ್ನು ನೋಡುತ್ತಿದ್ದೆ ಎಂದು ಹೇಳಿದ್ದಾರೆ.

ಕೆಕವು ದಿನಗಳ ಹಿಂದೆ ಈ ಜೋಡಿ ಗೋವಾದಲ್ಲಿ ಫುಟ್ಬಾಲ್ ಮ್ಯಾಚ್ ಎಂಜಾಯ್ ಮಾಡಲು ಹೋಗಿದ್ದರು. ಅವರಿಬ್ಬರು ಸ್ಟೇಡಿಯಂನಲ್ಲಿ ಹಾಗೂ ಏರ್ ಪೋರ್ಟ್ ನಲ್ಲಿ ಈ ಜೋಡಿ ಕ್ಯಾಮೆರಾದ ಕಣ್ಣಿಗೆ ಕಂಡಿದ್ದರು. ಗೋವಾದಲ್ಲಿ ಫುಟ್ಬಾಲ್ ನಡೆಯುತ್ತಿದ್ದ ಸ್ಟೇಡಿಯಂನಲ್ಲಿ ತಮ್ಮ ತಮ್ಮ ತಂಡಗಳ ಜೆರ್ಸಿ ಧರಿಸಿ ಆಲಿಯಾ ಹಾಗೂ ರಣಬೀರ್ ಫೋಟೋ ಗಳು ಸೋಶಿಯಲ್ ಮೀಡಿಯಾ ಗಳಲ್ಲಿ ವೈರಲ್ ಆಗಿತ್ತು. ಆಲಿಯಾ ಇತ್ತೀಚೆಗೆ ರಣಬೀರ್ ಕಪೂರ್ ವಾಸವಿರುವ ಕಾಂಪ್ಲೆಕ್ಸ್ ನಲ್ಲಿ ಹೊಸದೊಂದು ಫ್ಲಾಟ್ ಕೂಡಾ ಖರೀದಿ ಮಾಡಿದ್ದಾರೆ. ಮುಂಬೈನ ಜುಹೂವಿನಲ್ಲಿ ಆಲಿಯಾ ತಮ್ಮ ಸಹೋದರಿ ಶಾಹಿನ ಭಟ್ ಜೊತೆ ವಾಸಿಸುತ್ತಿದ್ದಾರೆ.

ಆದರೆ ಈಗ ಅವರು 32 ಕೋಟಿ ರೂಪಾಯಿಗಳನ್ನು ನೀಡಿ ಮುಂಬೈನ ಬಾಂದ್ರಾದಲ್ಲಿ ರಣಬೀರ್ ಕಪೂರ್ ಫ್ಲ್ಯಾಟ್ ಇರುವ ಅದೇ ಕಾಂಪ್ಲೆಕ್ಸ್ ನಲ್ಲಿ ಐದನೇ ಅಂತಸ್ತಿನಲ್ಲಿ ಹೊಸ ಫ್ಲ್ಯಾಟನ್ನು ಖರೀದಿ ಮಾಡಿದ್ದಾರೆ. ಇತ್ತೀಚೆಗೆ ಆಲಿಯ ಟಾಲಿವುಡ್ ನ ಸ್ಟಾರ್ ಡೈರೆಕ್ಟರ್ ರಾಜಮೌಳಿ ಅವರ ಆರ್ ಆರ್ ಆರ್ ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸಿ, ಚಿತ್ರೀಕರಣ ಮುಗಿದ ಮೇಲೆ ಅಲ್ಲಿಂದ ನೇರವಾಗಿ ತಮ್ಮ ಬಾಯ್ ಫ್ರೆಂಡ್ ಜೊತೆ ಪ್ರವಾಸಕ್ಕೆ ತೆರಳಿದ್ದರು. ಅಯಾನ್ ಮುಖರ್ಜಿ ಅವರ ಬ್ರಹ್ಮಾಸ್ತ್ರ ಸಿನಿಮಾದ ವಿಷಯವಾಗಿ ಕೂಡಾ ಆಲಿಯಾ ಸಾಕಷ್ಟು ಸುದ್ದಿಯಲ್ಲಿದ್ದಾರೆ.