ಆಶ್ಚರ್ಯ! ನಿಧಾನ ಗತಿಯ ಚಲನೆಗೆ ಗುರುತಿಸಿಕೊಂಡ ಆಮೆ ವಿದ್ಯುತ್ತಿನ ವೇಗದಲ್ಲಿ ಓಡಿತು! ಮೊಲಕ್ಕೆ ಮಣ್ಣು ಮುಕ್ಕಿಸುವ ತಯಾರಿಯೇ?

ನಿಸರ್ಗದಲ್ಲಿ ಒಮ್ಮೊಮ್ಮೆ ಕಲ್ಪನೆಗೂ ಮೀರಿ ವಿಚಿತ್ರ ಘಟನೆಗಳು ನಡೆಯುತ್ತವೆ. ಆಗ ಆಶ್ಚರ್ಯದಿಂದ ನೋಡುವ ಹೊರತಾಗಿ ಬೇರೇನೂ ಮಾಡುವ ಹಾಗೆ ಇರುವದಿಲ್ಲ. ಇದೇ ರೀತಿಯ ಒಂದು ಆಮೆಯ ಹೈ ಸ್ಪೀಡ್ ಓಟದ ದೃಶ್ಯ ಸದ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪ್ರಸ್ತುತ ವಿಡಿಯೋದಲ್ಲಿ ಒಂದು ಅಚ್ಚರಿಯ ದೃಶ್ಯ ಕಾಣಿಸಲಿದೆ. ಇದನ್ನು ನೋಡಿದ ನಂತರ ಮನುಷ್ಯ ವಿಚಾರದಲ್ಲಿ ಮುಳುಗುತ್ತಾನೆ. ಕಾರಣ ಈ ರೀತಿಯ ಕಲ್ಪನೆಯೇ ಆತ ಮಾಡಲು ಸಾಧ್ಯವಿಲ್ಲ.

ಇಲ್ಲಿ ಒಂದು ಆಮೆ ತನ್ನ ಮೂಲ ಗುಣದಿಂದ ಸಂಪೂರ್ಣ ಭಿನ್ನವಾಗಿ ವರ್ತಿಸಿದೆ. @Yoda4ever ಹೆಸರಿನ ಟ್ವಿಟರ್ ಅಕೌಂಟ್ ನಿಂದ ಒಂದು ವಿಡಿಯೋ ಶೇರ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಆಮೆ ಒಂದು ಚಿಕ್ಕ ಬ್ರಿಡ್ಜ್ ಮೇಲಿಂದ ಊಹಿಸಲು ಸಾಧ್ಯವಾಗದ ರೀತಿಯಲ್ಲಿ ತುಂಬಾ ಹಾಯ್ ಸ್ಪೀಡ್ ನಲ್ಲಿ ಚಲಿಸಿದೆ ಅಲ್ಲ ಓಡಿ ಹೋಗಿದೆ. ಈ ವಿಡಿಯೋ ನೋಡಿದವರಿಗೆ ನಿಜಕ್ಕೂ ಆಶ್ಚರ್ಯವಾಗಿದೆ. ಕೆಲವರಂತೂ ಇದನ್ನು ಆಮೆ ಮತ್ತು ಮೊಲದ ಕಥೆಗೆ ಹೋಲಿಸಿ ಬಹುಶಃ ಇದು ಮೊಲಕ್ಕೆ ಸ್ಪರ್ಧೆ ನೀಡುವ ತಯಾರಿಯಲ್ಲಿದೆ ಎನ್ನುತ್ತಿದ್ದಾರೆ. ಸದಾ ಯಾವತ್ತೂ ನಿಧಾನಗತಿಯಲ್ಲಿ ತೆವುಳುತ್ತಾ, ಒದ್ದಾಡುತ್ತಾ ನಡೆಯುವದನ್ನೇ ನೋಡಿದ ಜನರಿಗೆ ಆಮೆಯ ಈ ಓಟ ತುಂಬಾ ಇಷ್ಟವಾದಂತಿದೆ ಕಾರಣ ಈ ವಿಡಿಯೋ ಇಲ್ಲಿಯವರೆಗೆ 10 ಲಕ್ಷಕ್ಕೂ ಮೀರಿ ವೀಕ್ಷಣೆ ಪಡೆದಿದೆ.

ವಿಡಿಯೋ ಸಮುದ್ರದ ದಂಡೆಯ ಮೇಲೆ ತಯಾರಿಸಿದ ಡೆಕ್ ಮೇಲಿನದಿದೆ. ಅಲ್ಲಿ ಮೊದಲು ಆಮೆ ವುಡ್ ಬೋರ್ಡ್ ಮೇಲಿಂದ ನಿಧಾನ ಗತಿಯಲ್ಲಿ ತೆವುಳುತ್ತಾ ಬರುತ್ತದೆ. ನಂತರ ಅದು ಆ ಬ್ರಿಡ್ಜ್ ಮೇಲೆ ಕಾಲಿಡುತ್ತಿದ್ದಂತೆಯೇ ಅದರ ಮೈಯಲ್ಲಿ ಅದೇನು ವಿದ್ಯುತ್ ಸಂಚಾರವಾಯಿತು ಗೊತ್ತಿಲ್ಲ. ಒಮ್ಮೆಲೆ ಈ ಆಮೆ ಕುದುರೆಯ ವೇಗದಲ್ಲಿ ಬ್ರಿಡ್ಜ್ ಇಳಿದು ಬಿಡುತ್ತದೆ. ಇಲ್ಲಿ ಆಮೆ ನಿಮಿಷ ಬಿಡಿ ಕೆಲವೇ ಕ್ಷಣಗಳಲ್ಲಿ ಬ್ರಿಡ್ಜ್ ಪಾರು ಮಾಡಿದೆ. ಇದೇ ದೃಶ್ಯವನ್ನು ನೋಡಿ ನೆಟ್ಟಿಗರು ಬೆರಗಾಗಿ ಬಹುಶಃ ಮೊಲಕ್ಕೆ ಸ್ಪರ್ಧೆ ನೀಡಲಿದೆ ಈ ಆಮೆ ಎನ್ನುತ್ತಿದ್ದಾರೆ.

ಈ ವಿಡಿಯೋ ಫೇಕ್ ಅಥವಾ ಫಾಸ್ಟ್ ಫಾರ್ವರ್ಡ್ ಮಾಡಿದ್ದೂ ಅಲ್ಲ;

ಯಾರು ಈ ವಿಡಿಯೋ ಫೇಕ್ ಆಗಿದೆ ಅಥವಾ ಫಾಸ್ಟ್ ಫಾರ್ವರ್ಡ್ ಮಾಡಲಾಗಿದೆ ಎನ್ನುತ್ತಿದ್ದಾರೆ ಅವರಿಗಾಗಿ ಈ ಮಾಹಿತಿ.

ಈ ವಿಡಿಯೋ ಮತ್ತು ಆಡಿಯೋ ದೃಶ್ಯವನ್ನು ಸರಿಯಾಗಿ ಗಮನಿಸಿದಾಗ ಈ ವಿಡಿಯೋ ನಾರ್ಮಲ್ ವಿಡಿಯೋ ಆಗಿದೆ ಎಂಬುದು ಕಂಡು ಬರುತ್ತದೆ. ಕಾರಣ ಆಮೆಯ ಹೊರತಾಗಿ ಸುತ್ತ ಮುತ್ತಲಿನ ವಸ್ತುಗಳು ವಿಡಿಯೋದಲ್ಲಿ ಸಾಮಾನ್ಯವೆಂಬಂತೆ ಕಂಡು ಬರುತ್ತಿವೆ. ಬರೀ ಆಮೆಯಷ್ಟೇ ವೇಗದಲ್ಲಿ ಧಾವಿಸುತ್ತಿದೆ. ಮತ್ತು ಈ ಆಮೆ ತನ್ನ ನೈಸರ್ಗಿಕ ಪ್ರವೃತ್ತಿಯ ವಿರುದ್ಧ ಓಡುತ್ತಿದೆ.

ವಿಡಿಯೋ ನೋಡಿ

ಆಮೆ ಈ ರೀತಿ ಓಡಲು ಕಾರಣ…

ಆಮೆ ಈ ರೀತಿ ಓಡಲು ಕಾರಣವೇನೆಂದರೆ, ಅಲ್ಲಿರುವ ಬ್ರಿಡ್ಜ್ ನ ಪೊಸಿಷನ್. ಇದು ಒಂದು ಕಡೆಗೆ ತುಂಬಾ ಇಳಿಜಾರಾಗಿದೆ. ಹೀಗಾಗಿ ಆಮೆ ವುಡ್ ಬೋರ್ಡ್ ನಿಂದ ಬ್ರಿಡ್ಜ್ ಮೇಲೆ ಬರುವದೇ ತಡ ತನ್ನ ದೇಹದ ಭಾರದಿಂದಾಗಿ ಅದಕ್ಕೆ ತನ್ನಂತಾನೆ ವೇಗವು ಪ್ರಾಪ್ತವಾಗಿ ಓಡಲು ಶುರು ಮಾಡಿದೆ. ಇಲ್ಲಿ ಆಮೆಯ ಭಾರ ಮತ್ತು ಇಳಿಜಾರು ಇವೆರಡು ಮಹತ್ವದ ಕಾರಣವಾಗಿವೆ. ಈ ರೀತಿ ಎತ್ತರದ ಸ್ಥಳದಿಂದ ಇಳಿಜಾರಿನ ಕಡೆಗೆ ಹೋಗುವಾಗ ನಿಮಗೂ ಈ ರೀತಿಯ ಅನುಭವವಾಗಿರಬೇಕು ಅಲ್ವಾ?