ಆಸ್ಟ್ರೇಲಿಯಾದ ಕ್ರಿಕೆಟ್ ಆಟಗಾರನಾಗುವನು ಭಾರತದ ಅಳಿಯ. ನೋಡಿ ಭಾರತೀಯ ಶೈಲಿಯ ನಿಶ್ಚಿತಾರ್ಥದ ಫೋಟೋಗಳು!
ಆಸ್ಟ್ರೇಲಿಯಾದ ಫೇಮಸ್ ಕ್ರಿಕೆಟ್ ಆಟಗಾರ ಮ್ಯಾಕ್ಸ್ ವೆಲ್ ಫೆಬ್ರುವರಿಯಲ್ಲಿ ವಿನಿ ರಮಣ್ ಈ ಭಾರತೀಯ ವಂಶದ ಹುಡುಗಿಯ ಜೊತೆಗೆ ಮದುವೆಯಾಗುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಈಗ ಕೆಲವೇ ದಿನಗಳ ಹಿಂದೆ ನಿಶ್ಚಿತಾರ್ಥ ಮಾಡಿಕೊಂಡ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ. ವಿಶೇಷವೆಂದರೆ ಮ್ಯಾಕ್ಸ್ ವೆಲ್ ಮತ್ತು ವಿನಿಯ ನಿಶ್ಚಿತಾರ್ಥದ ಕಾರ್ಯಕ್ರಮ ಭಾರತೀಯ ಪದ್ಧತಿಯಿಂದ ಆಗಿದೆ. ಕಳೆದ ತಿಂಗಳು ಮ್ಯಾಕ್ಸ್ ವೆಲ್ ವಿನಿಗೆ ಮದುವೆಯಾಗುವ ಬಗ್ಗೆ ವಿಚಾರಿಸಿದ್ದರು, ಆನಂತರ ಈಗ ಭಾರತೀಯ ಪದ್ಧತಿಯಂತೆ ನಿಶ್ಚಿತಾರ್ಥ ಮಾಡಿದರು. ವಿನಿ ಈ ಫೋಟೋಗಳನ್ನು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿದ್ದಾರೆ.

ಇಬ್ಬರೂ ಬಹಳ ದಿವಸಗಳಿಂದ ಒಬ್ಬರಿಗೊಬ್ಬರು ಗುರುತಿಸುತ್ತಿದ್ದರು. ಇಬ್ಬರೂ ತಮ್ಮ ಫೋಟೋಗಳನ್ನು ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿದ್ದಾರೆ. ನಿಶ್ಚಿತಾರ್ಥದ ಕಾರ್ಯಕ್ರಮದಲ್ಲಿ ಸಮೀಪದ ಮಿತ್ರರು ಮತ್ತು ಕುಟುಂಬದ ಸದಸ್ಯರು ಹಾಜರಿದ್ದರು.

ಈ ಕಾರ್ಯಕ್ರಮಕ್ಕೆ ಮ್ಯಾಕ್ಸ್ ವೆಲ್ ನೀಲಿ ಬಣ್ಣದ ಶೇರ್ವಾನಿ ಹಾಕಿದರೆ, ವಿನಿ ಕಪ್ಪು ಬಣ್ಣದ ಡ್ರೆಸ್ ತೊಟ್ಟಿದ್ದಳು. ಭಾರತೀಯ ಉಡುಗೆಯಲ್ಲಿ ಇಬ್ಬರೂ ತುಂಬಾ ಸುಂದರವಾಗಿ ಕಾಣುತ್ತಿದ್ದರು.

ಫೆಬ್ರುವರಿ ತಿಂಗಳಲ್ಲಿ ಆಸ್ಟ್ರೇಲಿಯಾದ ಈ ಆಲ್ ರೌಂಡರ್ ಆಟಗಾರ ಮ್ಯಾಕ್ಸ್ ವೆಲ್ ಅವರು ಇನ್ಸ್ಟಾಗ್ರಾಮ್ ನಲ್ಲಿ ಭಾರತೀಯ ಮೂಲದ ವಿನಿ ರಮಣ್ ಜೊತೆಗೆ ಮದುವೆಯಾಗುವ ಬಗ್ಗೆ ಹೇಳಿದ್ದರು. ತನ್ನ ಮಾನಸಿಕ ಆರೋಗ್ಯ ಸರಿ ಇಲ್ಲದ ಕಾರಣ ಒಂದು ವರ್ಷ ಕ್ರಿಕೆಟ್ ಆಟದಿಂದ ದೂರವಿರುವ ಬಗ್ಗೆ ನಿರ್ಣಯ ತೆಗೆದುಕೊಂಡಿದ್ದರು. ಅದಾದ ನಂತರ ಮತ್ತೆ ಕ್ರಿಕೆಟ್ ಜೀವನದ ಪ್ರಾರಂಭ ಮಾಡಿದ್ದಾರೆ.
