ಆಸ್ಟ್ರೇಲಿಯಾ ವಿರುದ್ಧ ವಿಜಯೋತ್ಸವದ ಜೋಷ್ ನಲ್ಲಿ ಕೆಳಗೆ ಬಿದ್ದರು ಪಾಕ್ ಕ್ರಿಕೆಟ್ ಆಟಗಾರರು ! ವಿಡಿಯೋ ವೈರಲ್…

ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಪಾಕಿಸ್ತಾನದ ಪ್ರವಾಸದಲ್ಲಿದೆ. ಈ ಎರಡು ತಂಡಗಳ ಮಧ್ಯೆ ಮೊದಲು ಮೂರು ಟೆಸ್ಟ್ ಪಂದ್ಯಗಳ ಸರಣಿ ನಡೆಯಿತು. ಈ ಮೂರು ಟೆಸ್ಟ್ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಪಾಕಿಸ್ತಾನಕ್ಕೆ 0-1 ಅಂತರದಿಂದ ನಮಿಸಿತು. ತದನಂತರ ಬಾಬರ್ ಆಜಮ್ ನೇತೃತ್ವದಲ್ಲಿ ಆಸ್ಟ್ರೇಲಿಯಾ ವಿರುದ್ಧ 3 ಏಕದಿನ ಪಂದ್ಯಗಳ ಸರಣಿಯಲ್ಲಿ ಪಾಕಿಸ್ತಾನವು 2-1 ಅಂತರದಿಂದ ಗೆಲುವು ಸಾಧಿಸಿತು. ಸರಣಿ ವಿಜಯದ ನಂತರ ಪಾಕಿಸ್ತಾನ ತಂಡವು ಏನಾದರೂ ಸ್ವಲ್ಪ ಸ್ಪೆಷಲ್ ಮಾಡುವ ಯತ್ನ ಮಾಡಿತು. ಇದರಿಂದಾಗಿ ಸಂಪೂರ್ಣ ತಂಡವೇ ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಗೆ ಗುರಿಯಾಯಿತು.

ಪಾಕಿಸ್ತಾನವು ಆಸ್ಟ್ರೇಲಿಯಾದ ವಿರುದ್ಧ 20 ವರ್ಷಗಳ ನಂತರ ಏಕದಿನ ಸರಣಿ ಗೆದ್ದಿದೆ. ಆಸ್ಟ್ರೇಲಿಯಾ ವಿರುದ್ಧ ಸರಣಿ ಗೆಲುವು ಸಾಧಿಸಿದ ನಂತರ ತಂಡವು ವಿಜ್ರಂಭಣೆಯಿಂದ ವಿಜಯೋತ್ಸವವನ್ನು ಆಚರಿಸುತ್ತಿತ್ತು. ಎಲ್ಲಾ ಆಟಗಾರರು ತುಂಬಾ ಜೋಶ್ ನಲ್ಲಿ ಇದ್ದರು. ಈ ಜೋಶ್ ನಲ್ಲಿ ತಂಡದ ಅರ್ಧ ಆಟಗಾರರು ವಿನ್ನರ್ ಬೋರ್ಡ್ ಜೊತೆಗೆ ಕೆಳಗೆ ಕುಸಿದು ಬಿದ್ದಿದ್ದಾರೆ. ಈ ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಗಾಯ ಮಾತ್ರ ಆಗಿಲ್ಲ. ಆಟಗಾರರು ಕೆಳಗೆ ಬಿದ್ದ ನಂತರ ತಡಬಡಿಸಿ ಮತ್ತೆ ಬೇಗನೆ ಅಲ್ಲಿಯೇ ಎದ್ದು ನಿಂತಿದ್ದಾರೆ. ಈ ಪ್ರಸಂಗದ ನಂತರ ಪಾಕಿಸ್ತಾನ ತಂಡವು ಸೋಶಿಯಲ್ ಮೀಡಿಯಾದಲ್ಲಿ ಪ್ರಚಂಡವಾದ ಟ್ರೋಲ್ ಆಗಲು ಶುರುವಾಯಿತು.

ಪ್ರಸ್ತುತ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿಯಾಗಿ ವೈರಲ್ ಆಗುತ್ತಿದೆ. ಇದಕ್ಕೆ ಕೆಲವು ಅಭಿಮಾನಿಗಳು ಕಡಿಮೆ ಹಣದಲ್ಲಿ ಕೆಲಸ ಮಾಡಿಕೊಂಡಾಗ ಹೀಗೆಯೇ ಆಗುತ್ತದೆ ಎಂದಿದ್ದಾರೆ. ಇನ್ನು ಕೆಲವರು ಪಾಕಿಸ್ತಾನಿ ಆಟಗಾರರನ್ನು ತಮಾಷೆಗೆ ಗುರಿಪಡಿಸಿದ್ದಾರೆ.

ವಿಡಿಯೋ ನೋಡಿ

ಈ ಸಂಪೂರ್ಣ ಸರಣಿಯಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಆಜಮ್ ಒಳ್ಳೆಯ ಬ್ಯಾಟಿಂಗ್ ಪ್ರದರ್ಶನ ಮಾಡಿದ್ದಕ್ಕೆ ಮ್ಯಾನ್ ಆಫ್ ದಿ ಮ್ಯಾಚ್ ಮತ್ತು ಮ್ಯಾನ್ ಆಫ್ ದ ಸೀರೀಸ್ ಎರಡು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ. ಬಾಬರ್ ಆಜಮ್ ಮೂರು ಏಕದಿನ ಪಂದ್ಯಗಳಲ್ಲಿ ಒಟ್ಟು 276 ರನ್ಗಳನ್ನು ಕಲೆಹಾಕಿದ್ದಾರೆ. ಇದರಲ್ಲಿ ಎರಡು ಶತಕ ಹಾಗೂ ಒಂದು ಅರ್ಧ ಶತಕ ಶಾಮೀಲಾಗಿದೆ.