“ಆ” ಕಾಲ್ ಗರ್ಲ್ ಕೊರೊನಾ ಟೆಸ್ಟ್ ‘ಪಾಸಿಟಿವ್’; ಅನೇಕರ ಜೀವ ಮುಷ್ಠಿಯಲ್ಲಿ!

ದೇಶದಲ್ಲಿಯ ಕೊರೊನ ರೋಗಿಗಳ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ. ಅಂಥದ್ದರಲ್ಲಿಯೇ ಒಂದು ಗಮನ ಸೆಳೆಯುವ ಸುದ್ದಿ ರಾಜಸ್ಥಾನದಲ್ಲಿ ಹರಿದಾಡುತ್ತಿದೆ.

ರಾಜಸ್ಥಾನದ ಉದಯಪುರ ಜಿಲ್ಲೆಯಲ್ಲಿ ಒಬ್ಬಳು ಕಾಲ್ ಗರ್ಲ್ ಳ ರಿಪೋರ್ಟ್ ಪಾಜಿಟಿವ್ ಬಂದಿದೆ. ಅವಳ ಸಂಪರ್ಕದಲ್ಲಿ ಅನೇಕ ಜನರು ಇದ್ದಾರೆ ಎನ್ನುವ ಸತ್ಯ ಹೊರಬಿದ್ದಿದೆ. ಹೀಗಾಗಿ ಈ ಪಾಸಿಟಿವ್ ರಿಪೋರ್ಟ್ ದಿಂದ ಆಕೆಯ ಸಂಪರ್ಕದಲ್ಲಿದ್ದವರು ತಮ್ಮ ಜೀವವನ್ನು ಮುಷ್ಠಿಯಲ್ಲಿ ಹಿಡಿದಿದ್ದಾರೆ.

ಈ ಕಾಲ್ ಗರ್ಲ್ ಸಹಿತ ಏಳು ಯುವತಿಯರನ್ನು ಮತ್ತು 10 ಜನ ಯುವಕರನ್ನು ಅರೆಸ್ಟ್ ಮಾಡಲಾಗಿದೆ. ಇವರೆಲ್ಲರ ಕೊರೊನ ಟೆಸ್ಟ್ ಮಾಡಲಾಗಿ ಅದರಲ್ಲಿ ಈ ಒಬ್ಬಳು ಯುವತಿ ಪಾಸಿಟಿವ್ ಕಂಡು ಬಂದಿದ್ದಾಳೆ. ಇದರಲ್ಲಿ ಮೂವರು ಮಹಿಳಾ ಪೊಲೀಸರು ಈ ಕಾರ್ಯತಂತ್ರವನ್ನು ರೂಪಿಸಿ 17 ಜನರಿಗೆ ಅರೆಸ್ಟ್ ಮಾಡಿದ್ದಾರೆ.

DSP ಚೇತನಾ ಭಾಟಿಯವರು ಹೋಟೆಲ್ ಟರ್ಬೋ ಮೇಲೆ ರೇಡ್ ಹಾಕಿ ನಾಲ್ಕು ಯುವತಿಯರಿಗೂ ಅರೆಸ್ಟ್ ಮಾಡಿದ್ದಾರೆ. ಅವರ ಮೇಲೆ ವೇ’ಶ್ಯಾ ವ್ಯವಸಾಯ ಮಾಡುತ್ತಿರುವ ಬಗ್ಗೆ ಕೇಸ್ ದಾಖಲಿಸಿದ್ದಾರೆ. ಈ ರೇಡ್ ನಲ್ಲಿ ಮದ್ಯದ ದೊಡ್ಡ ಸ್ಟಾಕ್ ಸಹ ಸಿಕ್ಕಿದೆ. ಇವರಲ್ಲಿ ಒಬ್ಬರ ಕೊರೊನ ಪಾಸಿಟಿವ್ ಬಂದ ನಂತರ ಪೊಲೀಸರ ಕೆಲಸ ಇನ್ನು ಹೆಚ್ಚಿದೆ. ಈ ಕಾಲ್ ಗರ್ಲ್ ಳು ಏತನ್ಮಧ್ಯೆ ಅನೇಕ ಯುವಕರ ಜೊತೆಗೆ ಸಂಪರ್ಕವಿಟ್ಟಿದ್ದು ಕಂಡು ಬಂದಿದೆ. ಹೀಗಾಗಿ ಆ ಯುವಕರ ಶೋಧ ಮಾಡುವ ಕೆಲಸ ಪೊಲೀಸರಿಗೆ ಮಾಡಬೇಕಾಗಿದೆ.