‘ಆ’ ಹುಡುಗಿ ನನ್ನಿಂದ ‘ಅದು’ ಬಯಸಿದ್ದಳು: ತನ್ನ ಮೊದಲ ಡೇಟಿಂಗ್ ಬಗ್ಗೆ ಆಸಕ್ತಿಕರ ವಿಷಯ ಹೇಳಿದ ಅಕ್ಷಯ್ ಕುಮಾರ್!

ಬಾಲಿವುಡ್ ನ ಬಹುತೇಕ ಎಲ್ಲಾ ಸೆಲೆಬ್ರಿಟಿಗಳು ಕೂಡಾ ಕಾಮೆಡಿಯನ್ ಆದ ಕಪಿಲ್ ಶರ್ಮಾ ನಡೆಸಿಕೊಂಡು ದಿ ಕಪಿಲ್ ಶರ್ಮಾ ಶೋ ಗೆ ಅತಿಥಿಗಳಾಗಿ, ಕಾರ್ಯಕ್ರಮವನ್ನು ಖುಷಿಯಿಂದ ಎಂಜಾಯ್ ಮಾಡಲು ಹಾಗೂ ತಮ್ಮ ಹೊಸ ಸಿನಿಮಾಗಳ ಪ್ರಮೋಷನ್ ಮಾಡುವುದಕ್ಕಾಗಿ ಬರುವುದು ಸಾಮಾನ್ಯ. ಇದರಿಂದಾಗಿಯೇ ಈ ಶೋ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಯನ್ನು ಪಡೆದುಕೊಂಡಿದೆ. ಈ ಶೋ ಮೂಲಕ ವೀಕ್ಷಕರಿಗೆ ಹಾಸ್ಯದ ಜೊತೆಜೊತೆಗೆ ಸೆಲೆಬ್ರಿಟಿಗಳ ಜೀವನದ ಬಹಳ ಆಸಕ್ತಿಕರವಾದ ಹಾಗೂ ಹಾಸ್ಯ ಭರಿತವಾದ ಘಟನೆಗಳ ಕುರಿತಾಗಿ ಕೂಡಾ ತಿಳಿಯುತ್ತದೆ. ಪ್ರಸ್ತುತ ಕೆಲವು ದಿನಗಳಿಂದ ಈ ಶೋ ಪ್ರಸಾರವಾಗುತ್ತಿಲ್ಲವಾದರೂ, ಅತಿ ಶೀಘ್ರದಲ್ಲೇ ಶೋ ಮರಳಿ ಬರಲಿದೆ ಎನ್ನುವ ಸುದ್ದಿಗಳು ಕೂಡಾ ಹರಿದಾಡಿವೆ. ಶೋ ಪ್ರಸಾರವಾಗುತ್ತಿಲ್ಲವಾದರೂ ಈ ಹಿಂದೆ ಒಮ್ಮೆ ಶೋ ನಲ್ಲಿ ಬಾಲಿವುಡ್ ನಟ ಅಕ್ಷಯ್ ಕುಮಾರ್ ಅವರು ತಮ್ಮ ಮೊದಲ ಡೇಟಿಂಗ್ ಬಗ್ಗೆ ಹೇಳಿದ್ದ ವಿಷಯವೊಂದು ಈಗ ಮತ್ತೊಮ್ಮೆ ಸದ್ದು ಮಾಡುತ್ತಿದೆ.

ಅನ್ಯ ಸೆಲೆಬ್ರಿಟಿಗಳ ಹಾಗೆ ನಟ ಅಕ್ಷಯ್ ಕುಮಾರ್ ಕೂಡಾ ಅಂದು ತಮ್ಮ ಸಿನಿಮಾ ಪ್ರಮೋಷನ್ ಗಾಗಿ ಕಪಿಲ್ ಶೋ ಗೆ ಬಂದಿದ್ದರು. ಇವರ ಜೊತೆ ಬಾಲಿವುಡ್ ನ ಮತ್ತೋರ್ವ ಜನಪ್ರಿಯ ನಟ ರಿತೇಶ್ ದೇಶ್ ಮುಖ್ ಅವರು ಕೂಡಾ ಇದ್ದರು. ಇಬ್ಬರೂ ಸಹಾ ತಮ್ಮ ಹೌಸ್ ಫುಲ್ – 4 ಸಿನಿಮಾದ ಪ್ರಮೋಷನ್ ಗಾಗಿ ಬಂದಿದ್ದರು. ಆಗ ಕಪಿಲ್ ಶರ್ಮಾ ಅಕ್ಷಯ್ ಕುಮಾರ್ ಅವರನ್ನು, ನಿಮ್ಮ ಹುಡುಗಿ ಏನೆಂದು ಹೇಳಿ ರಿಜೆಕ್ಟ್ ಮಾಡಿದ್ದಳು ಎನ್ನುವ ಪ್ರಶ್ನೆಯನ್ನು ಕೇಳಿದ್ದಾರೆ. ಈ ಪ್ರಶ್ನೆಗೆ ಉತ್ತರ ನೀಡುತ್ತಾ ಅಕ್ಷಯ್ ಕುಮಾರ್ ಅವರು ತಮ್ಮ ಮೊದಲ ಡೇಟಿಂಗ್ ನ ಕುರಿತಾದ ಒಂದು ಆಸಕ್ತಿಕರ ವಿಷಯವನ್ನು ಹಂಚಿಕೊಂಡಿದ್ದಾರೆ.

ಅಕ್ಷಯ್ ಕುಮಾರ್ ಅವರು ತಮ್ಮ ಅನುಭವವನ್ನು ವಿವರಿಸುತ್ತಾ, ನಾನು ಬಹಳ ನಾಚಿಕೆಯ ಸ್ವಭಾವದವನಾಗಿದ್ದೆ. ಆದರೆ ಆ ಹುಡುಗಿ ನಾನು ಆಕೆಯ ಹೆಗಲ ಮೇಲೆ ಕೈ ಹಾಕಬೇಕು, ಅವಳಿಗೆ ಕಿಸ್ ಮಾಡಬೇಕು ಎಂದು ಆಸೆ ಪಟ್ಟಿದ್ದಳು. ಆದರೆ ನನ್ನಿಂದ ಅದು ಸಾಧ್ಯವಾಗಿರಲಿಲ್ಲ. ಆಗ ಆ ಹುಡುಗಿ ಕೋಪ ಮಾಡಿಕೊಂಡು ಅಲ್ಲಿಂದ ಹೊರಟು ಹೋದಳು ಎಂದು ಹೇಳಿದ್ದಾರೆ. ಅಕ್ಷಯ್ ಅವರು ತಮ್ಮ ಮೊದಲ ಡೇಟಿಂಗ್ ಕುರಿತಾಗಿ ಹೇಳಿದ ಈ ಸನ್ನಿವೇಶದ ವಿವರಣೆಯನ್ನು ಕೇಳಿ ಕಾರ್ಯಕ್ರಮದಲ್ಲಿ ಸೇರಿದ್ದ ಜನರೆಲ್ಲರೂ ಕೂಡಾ ಬಹಳ ಜೋರಾಗಿ ನಗುವುದಕ್ಕೆ ಆರಂಭಿಸಿದರು.

ಅದಾದ ನಂತರ ರಿತೇಶ್ ದೇಶ್ ಮುಖ್ ಅವರು ಅದಕ್ಕೆ ಪ್ರತಿಕ್ರಿಯೆ ನೀಡುತ್ತಾ, ಅಕ್ಷಯ್ ಅವರು ಹೇಳಿದ ಈ ಘಟನೆಯನ್ನು ಎಷ್ಟು ಜನ ನಂಬುವಿರಿ?? ಎಂದು ಕೇಳಿದರು. ಅವರ ಮಾತನ್ನು ಕೇಳಿದ ಕೂಡಲೇ ಕಾರ್ಯಕ್ರಮದಲ್ಲಿ ನೆರೆದಿದ್ದ ಜನರು ಇನ್ನಷ್ಟು ಜೋರಾಗಿ ನಗುವುದಕ್ಕೆ ಆರಂಭ ಮಾಡಿದರು. ಆಗ ಕಪಿಲ್ ಶರ್ಮಾ ಅವರು ಅಕ್ಷಯ್ ಕುಮಾರ್ ಅವರನ್ನು ಪ್ರಶ್ನೆ ಮಾಡುತ್ತಾ, ಈ ಘಟನೆಯಿಂದ ನೀವು ಏನು ಕಲಿತುಕೊಂಡಿರಿ? ಎಂದು ಕೇಳಿದರು. ಇದಕ್ಕೆ ಅಕ್ಷಯ್ ಕುಮಾರ್ ಅವರು ತಮ್ಮ ಮಾಮೂಲಿ ಸ್ಟೈಲ್ ನಲ್ಲಿ, ಈ ಘಟನೆಯ ನಂತರ ನಾನು ಸಂಪೂರ್ಣವಾಗಿ ಯೂ ಟರ್ನ್ ತೆಗೆದುಕೊಂಡೆ. ಈ ಮಾತನ್ನು ಕೇಳಿದ ಮೇಲೆ ಅಲ್ಲಿದ್ದ ಜನರು ಮತ್ತೆ ಜೋರಾಗಿ ನಗಲು ಆರಂಭಿಸಿದರು.