ಇಂಟರ್ನೆಟ್ ಕನೆಕ್ಟ್ ಆಗದೆ ಇದ್ದಾಗ ಗೂಗಲ್ ‘ಕ್ರೋಮ್ ಬ್ರೌಸರ್’ ನಲ್ಲಿ ಈ ಚಿಕ್ಕ ಡೈನೋಸಾರ್ ಏಕೆ ಬರುತ್ತೆ..?

ಎಷ್ಟೇ ಬೆಲೆಬಾಳುವ ಮೊಬೈಲ್ ಇದ್ದರೂ ಒಂದು ವೇಳೆ ನೆಟ್ವರ್ಕ್ ಇಲ್ಲದೆ ಹೋದರೆ ಮೊಬೈಲ್ ಯಾವುದೇ ಉಪಯೋಗಕ್ಕೆ ಬರುವುದಿಲ್ಲ. ಮೊಬೈಲ್ನಲ್ಲಿ ನೆಟ್ವರ್ಕ್ ಇದ್ದರೇನೇ ಅದರ ಮಜಾ ಬರುವುದು. ಲ್ಯಾಪ್ಟಾಪ್ ಅಥವಾ ಮೊಬೈಲ್ನಲ್ಲಿ ನೆಟ್ ಸರ್ಫಿಂಗ್ ಮಾಡುವಾಗ ಒಂದು ವೇಳೆ ಇಂಟರ್ನೆಟ್ ಕನೆಕ್ಷನ್ ಇಲ್ಲದಿದ್ದಾಗ ಗೂಗಲ್ ಕ್ರೋಮ್ ಬ್ರೌಸರ್’ನಲ್ಲಿ ಚಿಕ್ಕ ಡೈನೋಸರ್ ಕಾಣುತ್ತದೆ. ಈ ಡೈನಾಸೋರ್ ಯಾಕೆ ಬರುತ್ತೆ ಅಥವಾ ಆ ಸಮಯದಲ್ಲಿ ಡಿಸ್ಪ್ಲೇ ಮೇಲೆ ಅದು ಯಾಕೆ ಕಾಣುತ್ತೆ ಎಂಬ ಪ್ರಶ್ನೆ ಎಷ್ಟೋ ಸಲ ಮೂಡಿರಬಹುದು ಅಲ್ವಾ?

ಈ ಪ್ರಶ್ನೆಗೆ ಉತ್ತರವನ್ನು ನಾವು ಈ ಲೇಖನದಲ್ಲಿ ತಂದಿದ್ದೇವೆ. ಗೂಗಲ್ ಪ್ರತಿಯೊಂದು ಕೆಲಸವನ್ನು ತುಂಬಾ ವಿಚಾರ ಪೂರ್ವಕವಾಗಿ ನಿರ್ವಹಿಸುತ್ತದೆ. ಹಾಗೆ ಈ t-rex ಆಟವು ಸಹಿತ ಇದರದೇ ಒಂದು ಭಾಗವಾಗಿದೆ. ಯಾವುದೇ ಕಾರಣಗಳಿಂದ ಇಂಟರ್ನೆಟ್ ಕನೆಕ್ಟ್ ಆಗದೇ ಇದ್ದಲ್ಲಿ ಅಥವಾ ಇಂಟರ್ನೆಟ್ ಸೇವೆ ನಿಂತರೆ ಆ ಸಮಯದಲ್ಲಿ ಈ ಡೈನೋಸರ್ ಆಟ ಪ್ರಾರಂಭವಾಗುತ್ತದೆ. ಇಂಟರ್ನೆಟ್ ಇಲ್ಲದಿದ್ದಾಗ ಅಥವಾ ನಿಂತು ಹೋದಾಗ ನೀವು ಮಾಡುತ್ತಿರುವ ಆನ್ಲೈನ್ ಕೆಲಸಗಳು ಸಹಿತ ಅಲ್ಲೇ ನಿಂತುಬಿಡುತ್ತವೆ.

ಆಗ ಈ ಡೈನಾಸರ್ ಎಲ್ಲರಿಗೂ ಶಿಲಾಯುಗದ ನೆನಪನ್ನು ಮಾಡಿಕೊಡುತ್ತವೆ. ಯಾಕೆಂದರೆ ಹಿಂದಿನ ಕಾಲದಲ್ಲಿ ಇಂಟರ್ನೆಟ್ ವೈಫೈ ದಂತಹ ಯಾವುದೇ ರೀತಿಯ ಸೌಲಭ್ಯಗಳಿರಲಿಲ್ಲ. ಆದ್ದರಿಂದ ಹಳೆಯ ಕಾಲದ ನೆನಪನ್ನು ಮಾಡಿಕೊಡುವ ಸಲುವಾಗಿ ಇಂಟರ್ನೆಟ್ ಆಟ ನಿಂತಾಗ ಈ ಡೈನೋಸಾರ್ ಬ್ರೌಸರ್ ಮೇಲೆ ಕಂಡುಬರುತ್ತದೆ.

ಈ ಗೇಮ್ ಅನ್ನು 2014 ರ ಸುಮಾರಿಗೆ ಗೂಗಲ್ ಪೇಜ್ ಮೇಲೆ ಅಪ್ಲೋಡ್ ಮಾಡಲಾಗಿದೆ. ಈ ಬಗ್ಗೆ ಇದ್ದ ಮಾಹಿತಿಯು ತುಂಬಾ ರೋಚಕವಾಗಿದೆ.

ಗೂಗಲ್ ಮಾಹಿತಿಯ ಪ್ರಕಾರ ಈ ಆಟ ತುಂಬಾ ಜನಪ್ರಿಯವಾಗಿದೆ. ಹೀಗಾಗಿ ಅನೇಕ ದೊಡ್ಡ ದೊಡ್ಡ ಕಂಪನಿಗಳು ನೆಟ್ ಇಲ್ಲದೆ ಇದ್ದಾಗ ಬ್ರೌಸರ್’ನಲ್ಲಿ ಈ ಆಟ ಅಥವಾ ಗೇಮ್ ಕಾಣಿಸದಂತೆ ಗೂಗಲ್ ಗೆ ಡಿಮಾಂಡ್ ಮಾಡಿವೆ ಅಂತೆ. ಇದಕ್ಕೆ ಕಾರಣವು ಉಂಟು. ಯಾಕೆಂದರೆ ಗೂಗಲ್ ಕೊಟ್ಟ ಮಾಹಿತಿಯ ಪ್ರಕಾರ ಪ್ರತಿ ತಿಂಗಳು ಈ ಆಟ ಆಡುವವರ ಸಂಖ್ಯೆ 270 ದಶಲಕ್ಷವಿದೆಯಂತೆ.

ಈ ಆಟದ ಜನಪ್ರಿಯತೆಯನ್ನು ಕಂಡು ಗೂಗಲ್ ಒಂದು ಸಂಕೇತ ಸ್ಥಳವನ್ನೇ ಜಾರಿ ಗೊಳಿಸಿ ಆಡುಗರಿಗೆ ವ್ಯವಸ್ಥೆ ಮಾಡಿದೆ. ಇಲ್ಲಿ ಇಂಟರ್ನೆಟ್ ಕನೆಕ್ಷನ್ ಇದ್ದಾಗಲೂ ಸಹಿತ ಈ ಆಟವನ್ನು ಆಡಬಹುದು.

https://elgoog.im/t-rex/

ಹಾಗಾದರೆ ಫ್ರೆಂಡ್ಸ್ ಆಡಿ, ಮತ್ತು ಮಜಾ ಮಾಡಿ.