ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋ#ಟ; ಜೀವ ಉಳಿಸಿಕೊಳ್ಳಲು ಓಡುತ್ತಿರುವ ಜನರು, ಭ#ಯಾನಕ ವಿಡಿಯೋ ವೈರಲ್
ಜಗತ್ತಿನಲ್ಲಿಯೇ ಜ್ವಾಲಾಮುಖಿ ದೇಶ ಎಂದು ಕರೆಯಲ್ಪಡುವ ಇಂಡೋನೇಷ್ಯಾ ದಲ್ಲಿಯ ಜಾವಾ ದ್ವೀಪದಲ್ಲಿ ಎಲ್ಲಕ್ಕಿಂತ ದಟ್ಟವಾದ ಜನಸಂಖ್ಯೆ ಹೊಂದಿದ ಪ್ರದೇಶವಾಗಿದೆ. ಕೆಲವು ದಿವಸಗಳ ಹಿಂದೆ ಜಾವಾ ದಲ್ಲಿ ಒಂದು ದೊಡ್ಡ ಜ್ವಾಲೆಯು ಉದ್ರೇಕಗೊಂಡಿದೆ. ಈ ಜ್ವಾಲೆಯ ರೌದ್ರ ಅವತರಾದ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾನೇ ವೈರಲ್ ಆಗುತ್ತಿದೆ.
ಪ್ರಸ್ತುತ ವಿಡಿಯೋದಲ್ಲಿ ಜ್ವಾಲೆಯ ಭ#ಯಾನಕವಾದ ಅವತಾರವನ್ನು ನಾವು ಕಾಣಬಹುದು. ಈ ಜ್ವಾಲಾಮುಖಿ ಸ್ಪೋಟ ವಾದ ನಂತರ ಅಲ್ಲಿಯ ಜನರು ತಮ್ಮ ಜೀವವನ್ನು ಉಳಿಸಿಕೊಳ್ಳಲು ತಮ್ಮ ಜೀವದ ಹಂಗು ತೊರೆದು ಅಲ್ಲಿಂದ ಓಡಲು ಪ್ರಯತ್ನ ಮಾಡುತ್ತಿರುವ ಪ್ರಸಂಗ ಈ ವಿಡಿಯೋದಲ್ಲಿ ಕಾಣಬಹುದು.
ಜ್ವಾಲೆಯ ಸ್ಫೋ#ಟದಿಂದಾಗಿ ಆಕಾಶದಿಂದ ಬೂದಿ, ಮಣ್ಣು ಮತ್ತು ಕಲ್ಲುಗಳು ಬಿಳುತ್ತಿರುವದು ನಾವು ಕಾಣಬಹುದು. ಅದರಿಂದ ಹೊರಬರುವ ಬೂದಿ ಮತ್ತು ಧೂಳಿನ ಪದರವು ಎಷ್ಟು ದಟ್ಟವಾಗಿದೆಯೆಂದರೆ ಇಡೀ ಜಾವಾ ದ್ವೀಪವು ಇಡೀ ಹಗಲಿನಲ್ಲೇ ರಾತ್ರಿಯ ರೂಪ ತಾಳಿರುವದು ನಾವು ಸ್ಪಷ್ಟವಾಗಿ ಕಾಣಬಹುದು. ಸ್ಫೋ#ಟದ ನಂತರ ಹಲವಾರು ದಿನಗಳವರೆಗೆ, ಜ್ವಾಲಾಮುಖಿಯಿಂದ ಬೂದಿ ಮತ್ತು ಹೊಗೆ ಹೊರಹೊಮ್ಮುತ್ತವೆ ಇದರಿಂದಾಗಿ ಬೂದಿ ಪದರಗಳು ಹತ್ತಿರದ ಹಳ್ಳಿಗಳ ಮನೆಗಳ ಮೇಲೆ ಸಂಗ್ರಹಗೊಳ್ಳುತ್ತವೆ. ಈ ಜ್ವಾಲಾಮುಖಿ ಸ್ಫೋಟದ ನಂತರ, ಮಳೆಯಿಂದಾಗಿ ಈ ಪ್ರದೇಶದಲ್ಲಿ ಇಲ್ಲಿದ್ದ ಬೂದಿ ನೀರಿನಲ್ಲಿ ಹರಿದುಕೊಂಡು ಒಂದು ಸ್ಥಳದಲ್ಲಿ ಬಂದು ನಿಲ್ಲುತ್ತದೆ. ಇದರಿಂದಾಗಿ ಈ ಪ್ರಮಾಣದ ಜ್ವಾಲೆಯು ಪದೇ ಪದೇ ನಿರ್ಮಾಣವಾಗಲು ಮುಖ್ಯ ಕಾರಣವಾಗುತ್ತದೆ. ಇಂಡೋನೇಷ್ಯಾ ಸರ್ಕಾರವು ರಕ್ಷಣಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ ಮತ್ತು ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ ಎಂಬ ವರದಿಗಳಿವೆ.
ವಿಡಿಯೋ ನೋಡಿ
Evacuations around Mount Semuru due to volcanic eruption and pyroclastic flow on the island of Java
— Scott Duncan (@ScottDuncanWX) December 4, 2021
🎥 via @PRB_BNPB pic.twitter.com/sOry4hKkPH
ಈ ಅ#ನಾಹುತದಿಂದ ನಾಗರಿಕರಲ್ಲಿ ಭ#ಯದ ವಾತಾವರಣ ನಿರ್ಮಾಣವಾಗಿದ್ದು, ಇಂಡೋನೇಷ್ಯಾ ಅಧ್ಯಕ್ಷರು (ಇಂಡೋನೇಷ್ಯಾ ಪ್ರೆಸಿಡೆಂಟ್) ಬದುಕುಳಿದವರನ್ನು ಭೇಟಿ ಮಾಡಿ ಧೈರ್ಯ ತುಂಬಿದ್ದಾರೆ. ಏತನ್ಮಧ್ಯೆ, ಬೂದಿ ಮತ್ತು ಹೊಗೆಯಿಂದಾಗಿ ಪ್ರದೇಶದ ಎಲ್ಲಾ ವಿಮಾನಯಾನ ಸೇವೆಯನ್ನು ಬಂದ್ ಮಾಡಲಾಗಿದೆ.
The scale of the consequences of the eruption of the #Semeru volcano (Indonesia, 5.12.2021) pic.twitter.com/4u5yAJCD6P
— Aleksander Onishchuk (@Brave_spirit81) December 5, 2021
ಇಂಡೋನೇಷ್ಯಾ ಈ ದೇಶ ಪೆಸಿಫಿಕ್ ರಿಂಗ್ ಆಫ್ ಫೈರ್‌ನಲ್ಲಿರುವ ದೇಶವಾಗಿದೆ. ಇಂಡೋನೇಷ್ಯಾದಲ್ಲಿ ಜಗತ್ತಿನಲ್ಲಿಯೇ ಎಲ್ಲಕ್ಕಿಂತ ಹೆಚ್ಚು ಅಂದರೆ ಶೇಕಡಾ 50 ರಷ್ಟು ಜ್ವಾಲೆಗಳಿದ್ದು ಅದರಲ್ಲಿ ಸುಮಾರು 130 ಕ್ಕೂ ಹೆಚ್ಚು ಸಕ್ರಿಯ ಜ್ವಾಲಾಮುಖಿಗಳಿವೆ. ಈ ಸಂಖ್ಯೆ ಇತರ ದೇಶಗಳಿಗಿಂತ ಹೆಚ್ಚನ ಪ್ರಮಾಣದಲ್ಲಿ ಇದ್ದುದ್ದರಿಂದ ಆಗಾಗ್ಗೆ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭೂಕಂಪಗಳು ಸಹ ಸಂಭವಿಸುತ್ತವೆ. ಜಗತ್ತಿನ ಶೇ. 75ರಷ್ಟು ಭೂಕಂಪಗಳು ಈ ಪ್ರದೇಶದಲ್ಲಿ ಸಂಭವಿಸುತ್ತವೆ.