ಇತ್ತ ಡಿಜೆ ಮುಂದೆ ಮೈಮರೆತು ಕುಣಿಯುತ್ತ ನಿಂತ ಮದುಮಗ; ಅತ್ತ ತಂದೆ ತನ್ನ ಮಗಳ ಮದುವೆ ಮಾಡಿದ ಬೇರೆ ವರನ ಜೊತೆಗೆ…

ದಿನಾಂಕ ಏಪ್ರಿಲ್ 22, ಮುಹೂರ್ತ ಮಧ್ಯಾಹ್ನ 4 ಗಂಟೆಗೆ. ಕಲ್ಯಾಣ ಮಂಟಪ ರೆಡಿ, ಎರಡು ಕಡೆಯ ಬೀಗರು, ಬಿಜ್ಜರು ಉಪಸ್ಥಿತ, ಮದುಮಗಳು ಸಹ ಮದುವೆಗಾಗಿ ಮೇಕಪ್ ಮಾಡಿಕೊಂಡು ಪತಿಯ ಜೊತೆಗಿನ ಸುಂದರ ಕನಸುಗಳೊಂದಿಗೆ ತಯಾರ್, ಎಲ್ಲ ಕಡೆಗೂ ವಿಜೃಂಭಣೆಯ, ಸಂತೋಷದ ವಾತಾವರಣ. ಆದರೆ ಮದುಮಗನೇ ತುಂಬಾ ತಡವಾಗಿ ಮದುಮಗಳ ಊರಿಗನಲ್ಲಿದ್ದ ಕಲ್ಯಾಣ ಮಂಟಪಕ್ಕೆ ಬಂದ. ಅಷ್ಟೇ ಅಲ್ಲ ಎಣ್ಣೆ ಹೊಡಿಯುವ ಮಿತ್ರರೊಂದಿಗೆ ಡಿಜೆ ಮುಂದೆ ಕುಣಿಯುತ್ತ ನಿಂತನು. ಇತ್ತ ಕಡೆ ಮದುಮಗಳ ತಂದೆ ಮುಹೂರ್ತ ಮೀರಿ ಹೋಗುತ್ತಿದ್ದುದನ್ನು ನೋಡಿ ಬೇಸತ್ತು ಭಾವಿ ಅಳಿಯನ ದಾರಿ ಕಾಯದೆ ಸಂಬಂಧಿಕರಲ್ಲಿಯೇ ಇದ್ದ ಬೇರೆ ಹುಡುಗನನ್ನು ತಯಾರು ಮಾಡಿ ತನ್ನ ಮಗಳ ಮದುವೆ ಮಾಡಿಬಿಟ್ಟ. ಇದನ್ನು ಕೇಳಿದ ಮೊದಲ ಮದುಮಗ ಮತ್ತು ಆತನ ಮಿತ್ರರು ಮದುವೆಯಲ್ಲಿ ಜಗಳ, ಗದ್ದಲ ಕಾಯಲು ಶುರು ಮಾಡಿದರು. ಆಗ ವಧುವಿನ ಸಂಬಂಧಿಕರು ಕೂಡಿ ವರನ ಕಡೆಯವರಿಗೆ ಚೆನ್ನಾಗಿ ಮೈ ಥಳಿಸಿ ಅಲ್ಲಿಂದ ಓಡಿಸಿ ಕಳುಹಿಸಿದ್ದಾರೆ. ಈ ಎಲ್ಲ ಘಟನೆಯೂ ಒಂದು ಚಲನಚಿತ್ರದಲ್ಲಿಯ ಕಥೆಯಂತೆ ನಡೆದು ಹೋಗಿದೆ.

ಪ್ರಸ್ತುತ ಘಟನೆ ಮಹಾರಾಷ್ಟ್ರದ ಬುಲಢಾಣಾ ಜಿಲ್ಲೆಯ ಮಲ್ಕಾಪೂರ್ ನಲ್ಲಿ ನಡೆದಿದೆ. ಮದುವೆಯ ಎಲ್ಲ ತಯಾರಿಯಾಗಿತ್ತು. ಮದುಮಗಳು ತನ್ನ ಭಾವಿ ಪತಿಯ ದಾರಿ ಕಾಯುತ್ತಾ ಕುಳಿತಿದ್ದರೆ, ಇತ್ತ ಭಾವಿಪತಿ ಮುಹೂರ್ತ ಮೀರಿ ಹೋಗಿದ್ದರೂ ಎಣ್ಣೆ ಹೊಡೆದ ಗೆಳೆಯರ ಜೊತೆಗೆ ರಾತ್ರಿ ಎಂಟಕ್ಕೆ ಕುಣಿಯುತ್ತ ಕುಣಿಯುತ್ತ ಬಂದನು. ಆಗ ಹುಡುಗಿಯ ಕಡೆಯವರು ಇಷ್ಟೊಂದು ತಡವಾಗಲು ಕಾರಣವೇನು ಎಂದು ಕೇಳಿದಾಗ, ಇಬ್ಬರೂ ಬೀಗರಲ್ಲಿ ವಾದ-ವಿವಾದ ಶುರುವಾಗಿ ಜಗಳ ಹೊಡೆದಾಟದಲ್ಲಿ ರೂಪಾಂತರವಾಯಿತು. ಅದಕ್ಕೆ ವಧುವಿನ ಕಡೆಯವರು ವರನ ಕಡೆಯವರಿಗೆ ಚೆನ್ನಾಗಿ ಮೈ ಮೈ ಥಳಿಸಿ ಬಂದ ದಾರಿಗೆ ಸುಂಕವಿಲ್ಲದಂತೆ ಮರಳಿ ಕಳುಹಿಸಿದ್ದಾರೆ. ತದನಂತರ ವಧುವಿನ ತಂದೆ ತಮ್ಮದೇ ಸಂಬಂಧದಲ್ಲಿಯ ಹುಡುಗನೊಬ್ಬನ ಜೊತೆಗೆ ಅದೇ ಮದುವೆಯ ಮಂಟಪದಲ್ಲಿ ತನ್ನ ಮಗಳಿಗೆ ಮದುವೆ ಮಾಡಿ ಕೊಟ್ಟಿದ್ದಾನೆ.

ಮುಹೂರ್ತ ಮೀರಿದ್ದರೂ ಮದುಮಗ ಎಣ್ಣೆಯಲ್ಲಿ ಮಿಂದ ಮಿತ್ರರ ಜೊತೆಗೆ ಕುಣಿಯುತ್ತ ನಿಂತ ಕಾರಣಕ್ಕಾಗಿ ಈ ಎಲ್ಲ ಮೇಲಿನ ಘಟನೆ ನಡೆದುಹೋಯಿತು. ವಧುವಿನ ಕಡೆಯವರ ರುದ್ರಾವತಾರವನ್ನು ನೋಡಿ ವರನ ಕಡೆಯವರು ತುಟಿಪಿಟಕ್ಕೆನ್ನದೆ ಅಲ್ಲಿಂದ ಕಾಲ್ಕಿತ್ತಿದ್ದಾರೆ. ವರನು ಸಹ ಅರಿಶಿಣ ಮೈಯಿಂದಲೇ ತನ್ನೂರಿಗೆ ಖಾಲಿ ಖಾಲಿ ಮರಳಿದ್ದಾನೆ. ನಡೆದ ಈ ಘಟನೆ ನಿಜಕ್ಕೂ ಸರಿಯಲ್ಲ. ಮದುವೆಯಂತಹ ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಮೋಜು-ಮಸ್ತಿ ಯಾವುದಕ್ಕೂ ಒಂದು ಮಿತಿ ಇರಬೇಕು. ಈ ರೀತಿಯ ಬೇಸರದ ಘಟನೆಗಳು ಬೇರೆಡೆಗೆ ಮತ್ತು ಹುಡುಗಿಯ ಜೊತೆಗೆ ನಡೆಯದಂತೆ ಎಲ್ಲರೂ ಸಾಮಾಜಿಕ ಪ್ರಜ್ಞೆಯನ್ನು ಹೊಂದಬೇಕು.