ಇದೇನು ಗನ್ನೋ? ಇಲ್ಲ ಆಟಿಗೆ ಸಮಾನೋ? ಗನ್ನನ್ನು ಆಟಿಗೆ ಸಾಮಾನಿನಂತೆ ಆಡಿಸುತ್ತಿರುವ ಬಹದ್ದೂರ ಸೈನಿಕನ ವಿಡಿಯೋ ವೈರಲ್.

ಪ್ರತಿಯೊಂದು ಕೆಲಸದಲ್ಲಿ ಪರ್ಫೆಕ್ಷನ್ ಅನ್ನೋದು ತುಂಬಾ ಮುಖ್ಯವಾಗಿರುತ್ತದೆ. ಕೆಲಸ ಯಾವುದೇ ಇರಲಿ ಅದನ್ನು ತುಂಬು ಮನಸ್ಸಿನಿಂದ ಮಾಡಿದಾಗ ಅದರ ಮೇಲೆ ಸಂಪೂರ್ಣವಾಗಿ ಹಿಡಿತವನ್ನು ಸಾಧಿಸಬಹುದು. ಇದಕ್ಕೆ ತಕ್ಕ ಉದಾಹರಣೆಯನ್ನು ನೀಡುವ ವಿಡಿಯೋ ಒಂದು ನಿಮಗಾಗಿ ತಂದಿದ್ದೇವೆ. ಈ ವಿಡಿಯೋ ನೋಡಿದ ನಂತರ ನಿಮ್ಮ ಹುಬ್ಬೇರುವದು 100 % ನಿಜ.

ಪ್ರಸ್ತುತ ವಿಡಿಯೋದಲ್ಲಿಯ ವ್ಯಕ್ತಿಯನ್ನು ಗಮನಿಸಿದಾಗ ಪ್ರಥಮ ನೋಟದಲ್ಲಿಯೇ ಈ ವ್ಯಕ್ತಿ ಡಿಫೆನ್ಸ್ ನಲ್ಲಿ ಡ್ಯೂಟಿ ಮಾಡುತ್ತಾನೆ ಎಂಬುದು ತಿಳಿದು ಬರುತ್ತದೆ. ನಿಮ್ಮ ಸಂಶಯ ನಿಜವೇ ಆಗಿದೆ. ಈ ವ್ಯಕ್ತಿಯು ತನ್ನ ಗನ್ನಿನ ಜೊತೆಗೆ ಆಡುತ್ತಿರುವ ಆಟ ನೋಡುಗರಿಗೆ ಮಂತ್ರಮುಗ್ಧ ಮಾಡಿ ಬಿಡುತ್ತದೆ. ಕೈಯಲ್ಲಿರುವ ಗನ್ ನಿಜಕ್ಕೂ ಒಂದು ಆಟಿಗೆ ಸಾಮಾನಿನಂತೆ ಗರಗರ ಆಡಿಸುತ್ತಿದ್ದಾನೆ, ಅದು ತುಂಬಾ ಈಜಿಯಾಗಿ. ಪ್ರಸ್ತುತ ವಿಡಿಯೋದಲ್ಲಿ ವ್ಯಕ್ತಿ ತೋರಿಸುತ್ತಿರುವ ಕೈಚಳಕ ತುಂಬಾ ಅದ್ಭುತವಾಗಿದೆ ಎಂದೇ ಹೇಳಬಹುದು. ದೊಡ್ಡದಾಗಿ ಕಂಡು ಬರುತ್ತಿರುವ ಗನ್ ಹೇಗೆ ಬೇಕೋ ಹಾಗೆ ತನ್ನ ಮನಸ್ಸಿಗೆ ಬಂದ ಹಾಗೆ ಪ್ಲಾಸ್ಟಿಕ್ ಗನ್ ತರ ಆಡಿಸುತ್ತಿದ್ದಾನೆ. ವಿಡಿಯೋ ನೋಡುವಾಗ ಇದೇನು ಗನ್ನಾ ಇಲ್ಲ ಆಟಿಗೆ ಸಾಮಾನಾ ಎಂಬ ಪ್ರಶ್ನೆ ನೋಡುಗರಿಗೆ ಹುಟ್ಟುವುದು ನಿಜ.

ನೋಡಿ ಈ ವಿಡಿಯೋ…

 

View this post on Instagram

 

A post shared by Ankita R. (@ankita_18110)

ಪ್ರಸ್ತುತ ಈ ಗನ್ ತಿರುಗಿಸುವ ಸೈನಿಕನ ಅದ್ಭುತವಾದ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ankita_18110 ಐಡಿಯಿಂದ ಶೇರ್ ಮಾಡಲಾಗಿದೆ. ಈ ವಿಡಿಯೋ ಇಲ್ಲಿಯವರೆಗೆ ಸಾವಿರಾರು ಜನರಿಗೆ ಮೋಡಿ ಮಾಡಿದೆ. ಹಾಗೂ ಅಷ್ಟೇ ಜನರು ವಿಡಿಯೋಗೆ ಲೈಕ್ಸ್ ಗಳನ್ನು ನೀಡಿದ್ದಾರೆ.