‘ಇದೊಂದು’ ಕಾರಣದಿಂದ ಭಾರತೀಯ ಕ್ರಿಕೆಟ್ ತಂಡದ ನಾಯಕತ್ವ ತ್ಯಜಿಸಿದ ಸಚಿನ್ ತೆಂಡೂಲ್ಕರ್!

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಸರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಅಂತಾರಾಷ್ಟ್ರೀಯ ಕ್ರಿಕೇಟ್ ನಲ್ಲಿ ಶತಕಗಳ ಶತಕ ಬಾರಿಸಿದ ಏಕಮೇವ ಕ್ರಿಕೇಟ್’ ಆಟಗಾರರಾಗಿದ್ದಾರೆ. ಎಲ್ಲಕ್ಕಿಂತ ಹೆಚ್ಚು ಟೆಸ್ಟ್ ರನ್’ಗಳು, ಎಲ್ಲಕ್ಕಿಂತ ಹೆಚ್ಚು ಟೆಸ್ಟ್ ಶತಕಗಳು, ಎಲ್ಲಕ್ಕಿಂತ ಹೆಚ್ಚ ಏಕದಿನ ಪಂದ್ಯದ ರನ್’ಗಳು, ಎಲ್ಲಕ್ಕಿಂತ ಹೆಚ್ಚು ವನ್ ಡೇ ಶತಕ ಮತ್ತು ಎಲ್ಲಕ್ಕಿಂತ ಹೆಚ್ಚು ಅಂತರರಾಷ್ಟ್ರೀಯ ರನ್’ ಗಳು ಹೀಗೆ ಅನೇಕ ದಾಖಲೆಗಳು ಸಚಿನ ಹೆಸರಿನಲ್ಲಿವೆ.

ಸಚಿನ್ ಅವರು 1996 ರಿಂದ 2000 ದ ವರೆಗೆ ಭಾರತೀಯ ಕ್ರಿಕೇಟ್ ಸಂಘದ ನಾಯಕರಾಗಿದ್ದರು. ಒಬ್ಬ ಆಟಗಾರನೆಂದು ಯಶಸ್ಸು ಪಡೆದುಕೊಂಡ ಸಚಿನ್ ಅವರು ಒಬ್ಬ ಕ್ಯಾಪ್ಟನ್ ಎಂದು ಯಶಸ್ಸು ಪಡೆಯಲಿಲ್ಲ. ನಾಯಕ ಪಟ್ಟದ ಜವಾಬ್ದಾರಿಯಿಂದ ಅವರ ಬ್ಯಾಟಿಂಗ್ ಮೇಲೆ ತುಂಬಾ ವಿಪರೀತ ಪರಿಣಾಮವಾಗಲು ಶುರುವಾಯಿತು. ಈ ಕಾರಣದಿಂದಾಗಿ ಸಚಿನ್ ಅವರು ಖುದ್ದಾಗಿ ಆಯ್ಕೆ ಸಮಿತಿಗೆ ಸಂಘದ ನೇತೃತ್ವ ವಹಿಸಲಾರೆನು ಎಂದು ತಿಳಿಸಿದರು.

ನಂತರ ಆಯ್ಕೆ ಸಮಿತಿಯ ಅಧ್ಯಕ್ಷರಾದ ಚಂದು ಬೋರ್ಡೆ ಹೇಳಿದರು, ” ನಾವು ಸಚಿನ್ ರನ್ನು ಸಂಘದ ನಾಯಕನನ್ನಾಗಿ ಆಸ್ಟ್ರೇಲಿಯಾಗೆ ಪಂದ್ಯವಾಡಲು ಕಳುಹಿಸಿದ್ದೇವು, ಈ ಪ್ರವಾಸದಲ್ಲಿ ಸಂಘದ ನೇತೃತ್ವವೇನೋ ಉತ್ತಮವಾಗಿ ನಿರ್ವಹಿಸಿದರು ಆದರೆ ಅಲ್ಲಿಂದ ಮರಳಿ ಬಂದ ಮೇಲೆ ಅವರು ನೇತೃತ್ವ ವಹಿಸಲು ನಿರಾಕರಿಸಿದರು. ತಮ್ಮ ಬ್ಯಾಟಿಂಗ್ ಕಡೆ ಹೆಚ್ಚು ಗಮನವಹಿಸುವದಕ್ಕಾಗಿ ನೇತೃತ್ವವನ್ನು ನಿರಾಕರಿಸಿದರು’ ಎಂದು ಹೇಳಿದರು.

ತದನಂತರ ಬೋರ್ಡೆ ಯವರು ಸಚಿನ್ ಗೆ ಹೇಳಿದ್ದೇನೆಂದರೆ, ” ಬೇರೆ ನಾಯಕನನ್ನು ಆಯ್ಕೆ ಮಾಡುವವರೆಗೆ ನೀನೇ ನೇತೃತ್ವ ವಹಿಸು ಎಂದರೂ ಕೂಡಾ ಅವರು ಕೇಳಲೇ ಇಲ್ಲ. ಅವರು ಟೀಮ್ ನೇತೃತ್ವ ಮಾಡುವದನ್ನು ಬಿಟ್ಟೆ ಬಿಟ್ಟರು. ನಾವು ಅವರನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದ ಕಾರಣ ನಮ್ಮ ಮೇಲೆ ಟೀಕೆಯೂ ಸಹ ಆಯಿತು. 2000 ರಲ್ಲಿ ಮ್ಯಾಚ್ ಫಿಕ್ಸಿಂಗ್ ಎಂಬ ಗಾಳಿ ಸಹ ಹರಡಿತ್ತು. ಅದರ ನಂತರ ನಾವು ಸೌರವ್ ಗಾಂಗೂಲಿಯವರನ್ನು ಸಂಘದ ಕ್ಯಾಪ್ಟನ್ ಮಾಡಿದೆವು”.

ಸಚಿನ್ ಅವರು 73 ಏಕದಿನ ಪಂದ್ಯ ಹಾಗೂ 25 ಟೆಸ್ಟ್ ಪಂದ್ಯಗಳಲ್ಲಿ ಸಂಘದ ನೇತೃತ್ವ ವಹಿಸಿದ್ದರು. ಇದರಲ್ಲಿ ಕೇವಲ 23 ಏಕದಿನ ಪಂದ್ಯ ಮತ್ತು 4 ಟೆಸ್ಟ್ ಪಂದ್ಯಗಳಲ್ಲಿ ಮಾತ್ರ ಭಾರತಕ್ಕೆ ಗೆಲುವು ಸಿಕ್ಕೀತು. ಸಚಿನ್ ಅವರ ನಾಯಕತ್ವದಲ್ಲಿ ಪಾಕಿಸ್ತಾನದ ವಿರುದ್ಧ 11 ಪಂದ್ಯಗಳಲ್ಲಿ ಸೋಲು ಉಂಟಾಗಿದೆ.