ಇದ್ದ ಕೆಲಸ ಸ್ವಲ್ಪ ಬದಿಗಿಟ್ಟು ಈ ಪುಟ್ಟ ಮಗುವಿನ ನಾಟಕ ಒಮ್ಮೆ ನೋಡಿ…ಸೂಪರ್ ಎನ್ನುವಿರಿ.
ಸೋಶಿಯಲ್ ಮೀಡಿಯಾದಲ್ಲಿ ದಿನಕ್ಕೆ ಅನೇಕ ರೀತಿಯ ವಿಡಿಯೋಗಳು ನೋಡಲು ಸಿಗುತ್ತವೆ. ಈ ವಿಡಿಯೋಗಳಲ್ಲಿ ಮಕ್ಕಳ ವಿಡಿಯೋಗಳಂತೂ ತುಂಬಾ ವಿಶೇಷವಾಗಿರುತ್ತವೆ. ಈಗ ಒಂದು ಪುಟ್ಟ ಮಗುವಿನ ವೀಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನಂತರ ನಿಜಕ್ಕೂ ಮೈಂಡ್ ಫ್ರೆಶ್ ಆಗುವುದು.
ವಿಡಿಯೋದಲ್ಲಿ ತಂದೆ ಮತ್ತು ಮಗು ಆಕ್ಟಿಂಗ್ ಮಾಡುತ್ತಿದ್ದಾರೆ. ತಂದೆ ತನ್ನ ಪುಟ್ಟ ಮಗುವಿನ ಮುಂದೆ ಕರಾಟೆ ಆಡುವ ರೀತಿಯಲ್ಲಿ ಆಕ್ಷನ್ ಮಾಡುತ್ತಿದ್ದಾನೆ. ಮಗು ತನ್ನ ತಂದೆ ಮಾಡುವ ಆಕ್ಷನ್ ಕಡೆಗೆ ತುಂಬಾ ಗಮನವಿಟ್ಟು ನೋಡುತ್ತಾನೆ. ತಂದೆ ಆಕ್ಷನ್ ಮಾಡುವಾಗ ಕೊನೆಯಲ್ಲಿ ಫೈಟ್ ಮಾಡಿದ ಹಾಗೆ ಮಾಡುತ್ತಾನೆ. ಆಗ ಮಗು ಆ ಏಟು ತನಗೆ ಬಿದ್ದ ಹಾಗೆ ಹಿಂದೆ ವಾಲಿ ಮೆತ್ತನೆಯ ಹಾಸಿಗೆಯ ಮೇಲೆ ಒಮ್ಮೆಲೆ ಬಿದ್ದು ಬಿಡುತ್ತಾನೆ. ಈ ದೃಶ್ಯ ನೋಡಲು ತುಂಬಾ ವಿಶೇಷವೆನಿಸುತ್ತದೆ. ಪುಟ್ಟ ಮಕ್ಕಳು ಎಷ್ಟೊಂದು ಚೂಟಿ ಆಗಿರುತ್ತವೆ ಎಂಬುದು ತಿಳಿದುಬರುತ್ತದೆ. ನೋಡಲು ಈ ಮಗು ಆರು ತಿಂಗಳದ್ದು ಇರಬೇಕು. ಆದರೆ ನಾಟಕ ಮಾಡುವುದರಲ್ಲಿ ಮಾತ್ರ ಅಪ್ಪನಿಗೆ ಮೀರಿಸುತ್ತಾನೆ ಎನ್ನುವಂತಿದೆ.
ನೋಡಿ ಈ ವಿಡಿಯೋ…
View this post on Instagram
ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ankita_18110 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.