“ಇನ್ನೊಬ್ಬ ಆಲ್ ರೌಂಡರ್ ಹುಡುಕಿ!” ಕೊಹ್ಲಿಗೆ ಶಾಕ್ ಕೊಟ್ಟ ಹಾರ್ದಿಕ್ ಪಾಂಡ್ಯ!
ಸದ್ಯ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಮೊದಲ ಎರಡು ಪಂದ್ಯಗಳಲ್ಲಿ ಭಾರತ ಸೋತು ಮುಖಭಂಗವನ್ನು ಅನುಭವಿಸಿದೆ. ಮೊದಲ ಪಂದ್ಯದ ಸೋಲಿನ ನಂತರ ವಿರಾಟ್ ಕೊಹ್ಲಿ ಅವರು ಹಾರ್ದಿಕ್ ಪಾಂಡ್ಯ ಅವರ ಬೌಲಿಂಗ್ ಭಾರತೀಯ ತಂಡಕ್ಕೆ ಲಭಿಸಲಿಲ್ಲವೆಂದು ಸೋಲಿಗೆ ಕಾರಣ ಕೊಟ್ಟರು.
ಇದೇ ವಿಷಯಕ್ಕೆ ಅನುಸರಿಸಿ ಹಾರ್ದಿಕ ಪಾಂಡ್ಯ ಅವರು ವಿರಾಟ್ ಅವರಿಗೆ ದೊಡ್ಡ ಶಾಕ್ ನ್ನೇ ನೀಡಿದ್ದಾರೆ. ತಂಡದಲ್ಲಿ ಎರಡನೆಯ ಆಲ್ ರೌಂಡರ್ ನ್ನು ಶೋಧಿಸಿ ಎಂದು ಸ್ಪಷ್ಟ ಶಬ್ದಗಳಲ್ಲಿ ನಾಯಕ ವಿರಾಟ್ ಮತ್ತು ಆಯ್ಕೆ ಸಮಿತಿಗೆ ಹೇಳಿದ್ದಾರೆ. ಇದು ಎಲ್ಲರಿಗೂ ದೊಡ್ಡ ಶಾಕ್ ಆಗಿದೆ. ಇದಕ್ಕೆ ಕಾರಣ ಹಾರ್ದಿಕ ಅವರು ತಮ್ಮ ಸೊಂಟ ನೋವಿನಿಂದಾಗಿ ಬಾಲಿಂಗ್ ಮಾಡುತ್ತಿಲ್ಲ. ಕಳೆದ ಐಪಿಎಲ್ ಆವೃತ್ತಿಯಲ್ಲಿ ಮಾತ್ರ ಹಾರ್ದಿಕ ಅವರು ಮುಂಬೈ ತಂಡದ ವತಿಯಿಂದ ಬರೀ ಬ್ಯಾಟಿಂಗ್ ಮಾಡಿದ್ದಾರೆ. ಸದ್ಯ ಅವರು ತಮ್ಮ ಬೌಲಿಂಗ್ ಸ್ಪೀಡ್ ಮತ್ತು ಎಕ್ಷನ್ ಮೇಲೆ ಅಭ್ಯಾಸ ಮಾಡುತ್ತಿದ್ದಾರೆ. ಇದೇ ಸಮಯದಲ್ಲಿ ವಿರಾಟ್ ಅವರು ಆಸ್ಟ್ರೇಲಿಯಾ ವಿರುದ್ಧದ ಮೊದಲ ಕ್ರಿಕೆಟ್ ಪಂದ್ಯದಲ್ಲಿ ಸೋಲಿನ ಕಹಿ ಅನುಭವಿಸಿದ ನಂತರ ಸುದ್ದಿಗೋಷ್ಠಿಯಲ್ಲಿ ಹಾರ್ದಿಕ ಅವರು ಬೌಲಿಂಗ್ ಮಾಡದಿರುವುದು ಸೋಲಿಗೆ ಕಾರಣವಾಯಿತು ಎಂದರು.

ಈಗ ಹಾರ್ದಿಕ್ ಅವರು ಆರನೇಯ ಬೌಲಿಂಗ್ ಸಲುವಾಗಿ ಬೇರೆ ಆಲ್-ರೌಂಡರ್ ಯಾರಾದರೂ ಇದ್ದರೆ ಅವರ ಬಗ್ಗೆ ವಿಚಾರ ಮಾಡಬೇಕು ಎಂದು ಹೇಳಿದ್ದಾರೆ. ಈ ಸಂದರ್ಭದಲ್ಲಿ ತಮ್ಮ ಸೋದರನಾದ ಕೃನಾಲ್ ಪಾಂಡ್ಯ ಅವರ ಹೆಸರು ತೆಗೆದುಕೊಳ್ಳುವುದನ್ನು ಮರೆತಿಲ್ಲ. ಆಯ್ಕೆ ಸಮಿತಿಯು ಕೃಣಾಲ್ ಅವರ ವಿಚಾರ ಮಾಡಬಹುದಾಗಿದೆ. ಇಲ್ಲವಾದರೆ ಬೇರೆ ಯಾರಾದರೂ ಇದ್ದರೆ ಅವರ ವಿಚಾರವನ್ನು ಸಹಿತ ಆಯ್ಕೆ ಸಮಿತಿ ಮಾಡಬಹುದು. ಒಂದು ವೇಳೆ ಯಾವುದೇ ಮಾರ್ಗ ವಿಲ್ಲದಿದ್ದರೆ
ಕೃನಾಲ್ ಯಾವತ್ತು ತಯಾರಿದ್ದಾರೆ ಎಂದು ಹೇಳಿದರು.
ಮುಂಬರುವ ಐಸಿಸಿ ಟಿ-20 ವರ್ಲ್ಡ್ ಕಪ್ ತಯಾರಿ ಈಗಾಗಲೇ ಶುರುವಾಗಿದೆ. ಈ ದೊಡ್ಡ ಟೂರ್ನಮೆಂಟ್ ನಲ್ಲಿ ನನ್ನ ಬ್ಯಾಟಿಂಗ್ ಮತ್ತು ಬೌಲಿಂಗ್ ಹೇಗಿರಬೇಕು ಯಾವ ರೀತಿಯಾಗಿರಬೇಕು ಇದರ ಮೇಲೆ ನಾನು ಜಾಸ್ತಿ ಒತ್ತು ಕೊಡುತ್ತಿದ್ದೇನೆ. ಒಟ್ಟಿನಲ್ಲಿ ನನ್ನ ಪ್ರದರ್ಶನವು ಚೆನ್ನಾಗಿರಬೇಕೆಂಬ ಉದ್ದೇಶದಿಂದ ಈಗ ಪರಿಶ್ರಮವನ್ನು ತೆಗೆದುಕೊಳ್ಳುತ್ತಿದ್ದೇನೆ ಎಂದು ಹಾರ್ದಿಕ್ ಅವರು ಈ ಸಂದರ್ಭದಲ್ಲಿ ಉಚ್ಛರಿಸಿದ್ದಾರೆ.