ಇನ್ಮುಂದೆ ಬ್ಯಾಂಕಿನಲ್ಲಿ ಹೆಚ್ಚು ಹಣ ಇಟ್ಟರೆ ತೊಂದರೆ ನಿರ್ಮಾಣವಾಗುವದೇ? ಹೊಸ ನಿಯಮಗಳನ್ನು ಓದಿ, ಇಲ್ಲದಿದ್ದರೆ ದೊಡ್ಡ ನಷ್ಟವಾಗುತ್ತದೆ……

ಅನೇಕರು ತಮ್ಮ ಭವಿಷ್ಯದ ಜೀವನದ ಸಲುವಾಗಿ ಹೆಚ್ಚು ಹೂಡಿಕೆ ಮಾಡುತ್ತಿದ್ದಾರೆ. ಅಲ್ಲದೆ, ಅನೇಕ ಜನರು ಹಣವನ್ನು ಉಳಿಸಲು ಬಯಸಿ ತಮ್ಮಲ್ಲಿದ್ದ ಹಣವನ್ನು ಬ್ಯಾಂಕಿನಲ್ಲಿ ಇಡುತ್ತಾರೆ. ಸದ್ಯದ ಸಮಯದಲ್ಲಿ ಅನೇಕ ಹೊಸ ಬ್ಯಾಂಕುಗಳು ನಿರ್ಮಾಣವಾಗುವದರ ಜೊತೆಗೆ ಅನೇಕ ಬ್ಯಾಂಕುಗಳು ಕೂಡಾ ಬಂದ್ ಆಗುತ್ತಿವೆ. ಬ್ಯಾಂಕಿನಲ್ಲಿ ಇಟ್ಟಿರುವ ಹಣ ಹೆಚ್ಚು ಸುರಕ್ಷಿತ ಇರುತ್ತವೆ ಎಂದು ಎಲ್ಲರೂ ಭಾವಿಸುತ್ತಾರೆ.

ಹಾಗಿದ್ದರೂ ಸಹ ಅನೇಕ ಸಾಮಾನ್ಯ ವ್ಯಕ್ತಿಗಳು ತಮ್ಮಲ್ಲಿದ್ದ ಹಣವನ್ನು ಬ್ಯಾಂಕಿನಲ್ಲಿ ಜಮಾ ಮಾಡಬೇಕೋ ಅಥವಾ ಬೇಡ ಎಂಬ ವಿಚಾರ ಸಹ ಮಾಡುತ್ತಾರೆ. ಬ್ಯಾಂಕ್‌ನಲ್ಲಿ ಹೆಚ್ಚು ಠೇವಣಿ ಇಡುವ ಬಗ್ಗೆ ಅನೇಕರಿಗೆ ಅನುಮಾನವಿದೆ. ಐದು ಲಕ್ಷಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕಿನಲ್ಲಿ ಠೇವಣಿ ಇಡಬಾರದು ಎಂಬ ನಿಯಮವಿಲ್ಲ.

ನಿಯಮಗಳ ಪ್ರಕಾರ, ಬ್ಯಾಂಕ್ ಆಕಸ್ಮಿಕವಾಗಿ ಪರರಿಯಾದರೆ ಅಥವಾ ದು#ರ್ಘಟನೆ ನಡೆದು ಬ್ಯಾಂಕ್ ಬಂದ್ ಆದರೆ ಸರ್ಕಾರವು 5 ಲಕ್ಷದವರೆಗೆ ಭದ್ರತೆಯನ್ನು ಖಾತರಿಪಡಿಸುತ್ತದೆ. ಇಂತಹ ಪರಸ್ಥಿತಿಯಲ್ಲಿ ಸರಕಾರವು ನಿಮಗೆ ಹಣವನ್ನು ನೀಡುತ್ತದೆ. ಇದರಿಂದ ಯಾವುದೇ ತೊಂದರೆ ಬರುವದಿಲ್ಲ. ಅಂದರೆ ಬ್ಯಾಂಕ್ ಬಂದ್ ಆದರೆ ಅಥವಾ ಮುಚ್ಚಿ ಹೋದರೆ ಸರ್ಕಾರ ನಿಮಗೆ ಐದು ಲಕ್ಷ ರೂಪಾಯಿ ನೀಡುತ್ತದೆ. ಇದರಿಂದ ಬ್ಯಾಂಕ್ ನಲ್ಲಿ 5 ಲಕ್ಷಕ್ಕಿಂತ ಹೆಚ್ಚು ಹಣ ಇಡಬಾರದು ಎಂಬ ಭಾವನೆ ಜನರದ್ದು.

ನಿಮ್ಮ ಖಾತೆಯಲ್ಲಿ ನೀವು ಎಷ್ಟು ಹಣ ಸಹ ಸೇವ್ ಮಾಡಬಹುದು ಆದರೆ ಒಂದು ಷರತ್ತು ಅದೇನೆಂದರೆ ಆ ಬಂದ ಹಣದ ಸ್ತೋತ್ರವನ್ನು ನಿಮ್ಮ ಬಳಿಯಲ್ಲಿ ಇರುವದು ಅತ್ಯವಶ್ಯಕ ವಾಗಿದೆ. ಏಕೆಂದರೆ ಇನ್ ಕಮ್ ಟ್ಯಾಕ್ಸ್ ಅಧಿಕಾರಿಗಳು ಒಂದು ವೇಳೆ ನಿಮಗೆ ವಿಚಾರಿಸಿದರೆ ಅದನ್ನು ತೋರಿಸುವ ಸಲುವಾಗಿ ಹಣ ಬರುವ ಸ್ತೋತ್ರವನ್ನು ಕಾಯ್ದಿರಿಸಿ ಕೊಳ್ಳುವದು ಅತ್ಯಾವಶ್ಯಕ ಸಂಗತಿಯಾಗಿದೆ.

ನೀವು ನಿಯಮದಂತೆ ತೆರಿಗೆ ತುಂಬಿದರೆ ಮತ್ತು ನಿಮ್ಮಕಡೆ ಉತ್ಪನ್ನದ ಯೋಗ್ಯ ಪುರಾವೆ ಇದ್ದರೆ ನೀವು ಎಷ್ಟೇ ದೊಡ್ಡ ವ್ಯವಹಾರ ಮಾಡಬಹುದು. ಹಾಗೆಯೇ ಸೆವಿಂಗ್ ಖಾತೆಯಲ್ಲಿ ಹಣವಿಡುವ ಕ್ಕಿಂತ ಮುಂಚೆ ಲಾಭ-ಹಾನಿಯ ವಿಚಾರ ಮಾಡಬೇಕು ಏಕೆಂದರೆ ಬ್ಯಾಂಕಿನಲ್ಲಿ ಠೇವಣಿಗಳ ಮೇಲೆ ಬಡ್ಡಿ ತುಂಬಾ ಕಡಿಮೆ ಇರುತ್ತದೆ. ಇದರಿಂದ ನಿಮಗೆ ಬಹಳಷ್ಟು ಕಡಿಮೆ ಲಾಭವಾಗುವ ಸಾಧ್ಯತೆ ಇರುತ್ತದೆ.

ಒಂದು ವೇಳೆ ನಿಮಗೆ ಹಣದ ಲಾಭ ಬಹಳಷ್ಟು ಬೇಕಾಗಿದ್ದರೆ, ನಿಮ್ಮ ಬಳಿಯಲ್ಲಿದ ಹಣವನ್ನು ಫಿಕ್ಸ್ ದೀಪೋಸಿಟ್ ಮಾಡಿ ಅಥವಾ ಇದ್ದಂತಹ ಹಣವನ್ನು ಮ್ಯೂಚುವಲ್ ಫಂಡ್ ನಲ್ಲಿ ಹೂಡಿಕೆ ಮಾಡಿರಿ, ಹೀಗೇ ಮಾಡುವದರಿಂದ ಆ ಹಣದ ಮೇಲೆ ಹೆಚ್ಚು ಬಡ್ಡಿ ದೊರೆಯುವದು ಎಂಬುದು ಅನೇಕರ ತಿಳಿವಳಿಕೆ ಯಾಗಿದೆ. ಆದರೆ ಇದರ ಹೊರತಾಗಿ ಅನೇಕ ಪರ್ಯಾಯಗಳು ನಮ್ಮ ಕಡೆಗೆ ಉಪಲಬ್ಧವಾಗಿರುತ್ತವೆ. ಹಾಗೆಯೇ ಬ್ಯಾಂಕಿನಲ್ಲಿ ಸಹ ಹೂಡಿಕೆ ಮಾಡುವದರಲ್ಲಿ ಯಾವುದೇ ತೊಂದರೆಯಿಲ್ಲ.