ಇಬ್ಬರು ಅವಳಿ ಲೇಡಿ ಇಂಜಿನಿಯರ್ ಗಳು ಮದುವೆ ಮಾಡಿಕೊಂಡರು ಒಂದೇ ಹುಡುಗನ ಜೊತೆಗೆ; ದಾಖಲಾಯಿತು ಪೊಲೀಸ್ ಕೇಸ್!

ಸೋಶಿಯಲ್ ಮೀಡಿಯಾ ಮುಖಾಂತರ ಎಲ್ಲಡೆಯೂ ಸುದ್ದಿಯಾದ ಮಹಾರಾಷ್ಟ್ರದ ಅವಳಿ IT ಸಹೋದರಿಯರು ಒಬ್ಬನೇ ವ್ಯಕ್ತಿಯ ಜೊತೆಗೆ ಮದುವೆಯಾದದ್ದು ಎಲ್ಲರಿಗೂ ಗೊತ್ತೇ ಇದೆ. ಸದ್ಯ ಈ ಮದುವೆಯು ವಿವಾದ ಒಂದನ್ನು ಹುಟ್ಟು ಹಾಕಿದ್ದು ಇದರ ವಿರುದ್ಧ ಪೋಲಿಸ್ ಕೇಸ್ ದಾಖಲಾಗಿದೆ. ಕಳೆದ ಎರಡು ಮೂರು ದಿನಗಳಿಂದ ಈ ಮದುವೆ ಜನರ ಬಾಯಿಯಲ್ಲಿ ಚರ್ಚೆಯ ವಿಷಯವಾಗಿದೆ.

ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಹುಡುಗನ ಜೊತೆಗೆ ಮುಂಬೈಯ ಇಬ್ಬರು ಅವಳಿ IT ಸಹೋದರಿಯರು ಮದುವೆಯಾದ ಸುದ್ದಿ ಕಳೆದ ಎರಡು ಮೂರು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ಗುಲ್ಲೆಬ್ಬಿಸಿದೆ. ಮದುವೆಗೆ ಸಂಬಂಧಪಟ್ಟ ವಿಡಿಯೋ ಒಂದು ತುಂಬಾನೇ ವೈರಲ್ ಆಗಿದೆ. ಈ ವಿಡಿಯೋದಲ್ಲಿ ಇಬ್ಬರು ಸಹೋದರಿಯರು ಒಬ್ಬನೇ ಗಂಡನಿಗೆ ಕೊರಳಲ್ಲಿ ಹೂಮಾಲೆಯನ್ನು ತೊಡಿಸುತ್ತಿರುವ ದೃಶ್ಯ ಕಂಡುಬರುತ್ತದೆ. ಮದುವೆಯ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದ್ದಂತೆ ಇದರ ವಿರುದ್ಧ ಪೊಲೀಸ್ ಸ್ಟೇಷನ್ ನಲ್ಲಿ ಸದ್ಯ ತಕರಾರು ದಾಖಲಾಗಿದೆ.

ವೀಡಿಯೋ ನೋಡಿ

 

View this post on Instagram

 

A post shared by Hindustan Times (@hindustantimes)

ಸೊಲ್ಲಾಪೂರಿನ ಎಸ್ ಪಿ ಶಿರೀಶ್ ಸರ್ದೇಶ್ಪಾಂಡೆ ಅವರು ಹೇಳುವ ಪ್ರಕಾರ, ಇಂಡಿಯನ್ ಪಿನಲ್ ಕೋರ್ಟ್ 494 ಆಕ್ಟ್ ಪ್ರಕಾರ ಪತಿ ಅಥವಾ ಪತ್ನಿ ಜೀವಂತವಿರುವಾಗಲೇ ವ್ಯಕ್ತಿ ಬೇರೆ ಮದುವೆ ಮಾಡಿಕೊಳ್ಳುವುದು ಕಾನೂನಿನ ಪ್ರಕಾರ ತಪ್ಪು. ಹೀಗಾಗಿ ವರ ಅತುಲ್ ಅವತಾಡೆ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಆದರೆ ನಿಮ್ಮ ಮಾಹಿತಿಗಾಗಿ ಹೇಳುವದಾದರೆ, ಪ್ರಸ್ತುತ ಮದುವೆ ಅವಳಿ ಸಹೋದರಿಯರ ಸಮ್ಮತಿಯ ಜೊತೆಗೆ ಮದುಮಕ್ಕಳಿಬ್ಬರ ಹಾಗೂ ಸಂಬಂಧಿಕರ ಸಮ್ಮತಿಯಿಂದಲೇ ನಡೆದಿದೆ. ಈ ಮದುವೆಯ ಸಂದರ್ಭದಲ್ಲಿ ಎರಡೂ ಕಡೆಯ ಸಂಬಂಧಿಕರು ಉಪಸ್ಥಿತರಿದ್ದರು.