ಇರ್ಫಾನ್ ಖಾನ್ ತಂದೆ ಅವರನ್ನು ” ಪಠಾಣರ ಮನೆಯಲ್ಲಿ ಬ್ರಾಹ್ಮಣ ಹುಟ್ಟಿದ್ದಾನೆ” ಅಂತ ಏಕೆ ಅನ್ನುತ್ತಿದರು ಗೊತ್ತೇ?
ಇಂದು ನಮಗೆಲ್ಲ ಗೊತ್ತಿರುವ ಸುದ್ಧಿ ಏನೆಂದರೆ ಬಾಲಿವುಡ್ ಹಾಗೂ ಹಾಲಿವುಡ್ ನಟಿ ಇರ್ಫಾನ್ ಖಾನ್ ಅವರು ನಮ್ಮನ್ನು ಬಿಟ್ಟು ಅಗಲಿದ್ದಾರೆ. ಇಂತ ಒಬ್ಬ ಶ್ರೇಷ್ಠ ಹಾಗೂ ಸಾಮಾನ್ಯ ನಟನೆಂದು ಹೆಸರು ವಾಸಿ ಯಾಗಿದ್ದರು. ಇವರು ತಮ್ಮ ಜೀವನದಲ್ಲಿ ತುಂಬಾ ನೋವು ನಲಿವು ಗಳನ್ನು ದಾಟಿ ಯಶಸ್ಸಿನ ಮೆಟ್ಟಿಲು ಹತ್ತಿದ್ದಾರೆ.
ಇರ್ಫಾನ್ ಖಾನ್ ಅವರ ಜನ್ಮ 1967 ರಲ್ಲಿ ಜಯಪುರದಲ್ಲಿ ಅಲ್ಲಿಯ ಒಬ್ಬ ಮುಸ್ಲಿಮ ಪಠಾಣ್ ಮನೆಯಲ್ಲಿ ಆಯಿತು. ಇವರ ನಿಜವಾದ ಹೆಸರು ಸಾಹಬಜಾದೆ ಇರಫಾನ್ ಅಲಿ ಖಾನ್ ಇದೆ. ಇವರ ತಂದೆ ಟಾಯರ್ ಉದ್ಯೋಗ ಮಾಡುತ್ತಿದ್ದರು. ತಮ್ಮ ಮನೆಯ ಪರಸ್ಥಿತಿಯನ್ನು ಅರಿತು ಇವರು ಶಿಕ್ಷಣದ ಕಡೆಗೆ ತುಂಬಾ ಒತ್ತುಕೊಟ್ಟರು. ಹೀಗೆ ಶಿಕ್ಷಣ ಪಡೆಯುತ್ತಾ ವಿದೇಶದಲ್ಲಿ ಸಹ ಶಿಕ್ಷಣ ಪಡೆದರು ಕೊನೆಗೂ ತಮ್ಮ ಬಳಿಯಲಿದ್ದ ಕೌಶಲ್ಯ ಉಪಯೋಗ ಮಾಡಿಕೊಂಡು ಬಾಲಿವುಡ್ ಗೆ ಪಾದಾರ್ಪಣೆ ಮಾಡಿದರು. ತದನಂತರ ಅವರು ಅಭಿನಯದ ಎಷ್ಟೋ ಚಿತ್ರಗಳು ಸುಪರ ಹಿಟ್ ಆದವು. ಅಲ್ಲದೆ ಅವರ ನಟನೆಯನ್ನು ಕಂಡು ಹಾಲಿವುಡ್ ಸಿನಿಮಾ ನಿರ್ದೇಶಕ ತಂಡವು ಸಹ ಅವರಿಗೆ ಹಾಲಿವುಡ್ ಚಿತ್ರಗಳಲ್ಲಿ ಅಭಿನಯ ಮಾಡಿದರು. ಹೀಗೆ ತಮ್ಮ ಜೇವನ ಪರ್ಯಂತ ಸತತ ಪ್ರಯತ್ನ ಪಡುತ್ತಾ ಮೇಲೆ ಬಂದಿದ್ದರು. ಅಂತ ಒಬ್ಬ ಉತ್ತಮ ಕಲಾಕಾರ ನಮ್ಮನ್ನಗಲಿ ಶೂನ್ಯದಲ್ಲಿ ಲೀನವಾಗಿದ್ದಾರೆ.

ಇರ್ಫಾನ್ ಖಾನ್ ಅವರು ಮುಸ್ಲಿಂ ಧರ್ಮದಲ್ಲಿ ಜನಿಸಿದರು ಸಹ ಅವರು ಶುದ್ಧ ಶಾಖಾಹಾರಿ ಅಂದ್ರೆ ಸಸ್ಯಾಹಾರಿ ಯಾಗಿದ್ದರು. ಅದುದರಿಂದ ಅವರ ತಂದೆ ಇವರನ್ನು ‘ಪಠಾಣರ ಮನೆಯಲ್ಲಿ ಬ್ರಾಹ್ಮಣ ಹುಟ್ಟಿದ್ದಾನೆ” ಎಂದು ಅವರನ್ನು ಅವಾಗ ಅವಾಗ ಉದ್ಗಾರ ಮಾಡುತ್ತಿದ್ದರಂತೆ.