ಇಲ್ಲದ ಸಲ್ಲದ ಆಟ ಮಾಡಲು ಹೋದರೆ ಆಗೋದು ಹೀಗೆಯೇ ಫಜೀತಿ! ಯುವತಿಯ ಬಿಲ್ಡಪ್ ಕೊಟ್ಟಿತು ಕೈ! ವಿಡಿಯೋ ಆಯ್ತು ತಮಾಷೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಹಾಸ್ಯದ ವಿಡಿಯೋಗಳು ನೋಡಿ ಕೆಲವೊಮ್ಮೆ ನಕ್ಕು ನಕ್ಕು ಸುಸ್ತಾಗುತ್ತದೆ. ಸದ್ಯ ನಿಮಗಾಗಿ ಇದೇ ರೀತಿಯ ತಮಾಷೆ ವಿಡಿಯೋ ಒಂದು ತಂದಿದ್ದೇವೆ. ಪ್ರಸ್ತುತ ವಿಡಿಯೋದಲ್ಲಿಯ ಯುವತಿಯ ಆಟ ತಮಾಷೆಗೆ ಗುರಿಯಾಗಿದೆ.

ವಿಡಿಯೋದಲ್ಲಿ ಕಂಡು ಬರುವ ದೃಶ್ಯದ ಪ್ರಕಾರ, ಹೊಲದಲ್ಲಿಯ ಕೃಷಿ ಹೊಂಡದಲ್ಲಿ ತುಂಬಿ ನಿಂತ ನೀರು ಕಂಡು ಬರುತ್ತಿದೆ. ಕೃಷಿ ಹೊಂಡದ ದಿನ್ನೆಗೆ ಸರಿಯಾಗಿ ಕಾರೊಂದನ್ನು ಹಿಮ್ಮುಖವಾಗಿ ತಂದು ನಿಲ್ಲಿಸಿದ್ದಾರೆ. ಯುವತಿಯೊಬ್ಬಳು ಕಾರಿನ ಹಿಂಬದಿಯ ಮೇಲೆ ನಿಂತು ಕೃಷಿ ಹೊಂಡದಲ್ಲಿ ಜಂಪ್ ಮಾಡುವ ತಯಾರಿಯಲ್ಲಿದ್ದಾಳೆ. ಈ ಸಂದರ್ಭದಲ್ಲಿ ಆಕೆ ಸ್ವಲ್ಪ ಜಾಸ್ತಿಯಾಗಿಯೇ ಬಿಲ್ಡಪ್ ಕೊಡುತ್ತಿದ್ದಾಳೆ. ಅದೇ ಸಂದರ್ಭದಲ್ಲಿ ಒಂದು ಇನ್ಸಿಡೆಂಟ್ ನಡೆಯುತ್ತದೆ ಹಾಗೂ ವಿಡಿಯೋ ನೋಡುವ ಎಲ್ಲರಿಗೂ ಬಿದ್ದು ಬಿದ್ದು ನಗುವ ಅವಕಾಶ ಮಾಡಿಕೊಡುತ್ತಾಳೆ. ಆಕೆ ಕೃಷಿ ಹೊಂಡದಲ್ಲಿ ಜಂಪ್ ಮಾಡುವ ಮೊದಲೇ ಕಾಲುಗಳು ಜಾರಿ ಮುಖ ಕೆಳಗೆ ಮಾಡಿ ಕಾರಿನ ಹಿಂಬದಿಯ ಗ್ಲಾಸ್ ಮೇಲೆ ಬಿದ್ದು ಜಾರುತ್ತಾ ನೀರಿನಲ್ಲಿ ಬಿದ್ದುಬಿಡುತ್ತಾಳೆ.

ವೀಡಿಯೋ ನೋಡಿ

 

View this post on Instagram

 

A post shared by کیمیامرادی (@tlevika)

ಈ ತಮಾಷೆಯ ವಿಡಿಯೋ ಇನ್ಸ್ಟಾಗ್ರಾಮ್ ನಲ್ಲಿ tlevika ಹೆಸರಿನ ಐಡಿಯಿಂದ ಶೇರ್ ಮಾಡಲಾಗಿದ್ದು, ಪ್ರಸ್ತುತ ವಿಡಿಯೋ ಇಲ್ಲಿಯವರೆಗೆ 37 ಸಾವಿರಕ್ಕೂ ಹೆಚ್ಚಿಗೆ ವೀಕ್ಷಣೆಯನ್ನು ಪಡೆದಿದೆ. ಹಾಗೂ ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ಲೈಕ್ ಮಾಡಿದ್ದಾರೆ.