ಇಲ್ಲಿ ಏನೇ ಆಗಲಿ, ಜಗವೇ ಮುಳುಗಲಿ! ಡಾನ್ಸ್ ಮಾತ್ರ ನಿಲ್ಲಿಸಲು ಸಾಧ್ಯವೇ ಇಲ್ಲ; ಸಖತ್ ತಮಾಷೆಯ ಸೂಪರ್ ವಿಡಿಯೋ…

ಸೋಶಿಯಲ್ ಮೀಡಿಯಾದಲ್ಲಿ ಶೇರ್ ಆಗುವ ಕೆಲವು ವಿಡಿಯೋಗಳು ನೇಟಿಜನ್ಸ್ ಗಳಿಗೆ ಕೆಲವೊಮ್ಮೆ ನಕ್ಕು ನಕ್ಕು ಸುಸ್ತಾಗಿಸಿ ಬಿಡುತ್ತವೆ. ಅಂತ ವಿಡಿಯೋಗಳನ್ನು ಮೇಲಿಂದ ಮೇಲೆ ನೋಡಿದರೂ ಬೇಸರವೆನಿಸುವುದಿಲ್ಲ. ಸದ್ಯ ಇನ್ಸ್ಟಾಗ್ರಾಮ್ ನಲ್ಲಿ ಇದೇ ರೀತಿಯ ತಮಾಷೆಯ ವಿಡಿಯೋ ಒಂದು ನೋಡಲು ಸಿಗುತ್ತಿದೆ.

ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ಸ್ಟೇಜ್ ಮೇಲೆ ಡಾನ್ಸ್ ಪರ್ಫಾರ್ಮೆನ್ಸ್ ಮಾಡುತ್ತಿರುವುದು ಕಂಡು ಬರುತ್ತಿದೆ. ಆಕೆಯ ಹಿಂದುಗಡೆ ವ್ಯಕ್ತಿಯೊಬ್ಬ ಜುಬ್ಬಾ, ಪೈಜಾಮ ಹಾಗೂ ಜಾಕೆಟ್ ಧರಿಸಿಕೊಂಡು ನಿಂತಿದ್ದಾನೆ. ಅದೇ ಸಮಯಕ್ಕೆ ಅಲ್ಲಿ ಮಹಿಳೆಯೊಬ್ಬಳು ಬಂದ ನಂತರ ಇಬ್ಬರೂ ಕೂಡಿ ಚೇರ್ ಹಾಕಿಕೊಂಡು ಕುಳಿತುಕೊಳ್ಳಲು ಮುಂದಾಗುತ್ತಾರೆ. ಆದರೆ ಚೇರ್ ನ ಹಿಂದಿನ ಎರಡು ಕಾಲಗಳು ಸರಿಯಾಗಿ ಸ್ಟೇಜ್ ಮೇಲೆ ಕುಳಿತುಕೊಳ್ಳದೆ ಹಿಂದಿನ ಬದಿಗೆ ವಾಲುವದಷ್ಟೇ ತಡ ಇಬ್ಬರು ಜೊತೆಯಲ್ಲಿ ಸ್ಟೇಜ್ ನ ಹಿಂದುಗಡೆ ಬಿದ್ದುಬಿಡುತ್ತಾರೆ.

ಪ್ರಸ್ತುತ ದೃಶ್ಯವನ್ನು ಡಾನ್ಸ್ ಮಾಡುತ್ತಿರುವ ಹುಡುಗಿಯು ನೋಡುತ್ತಾಳೆ. ಆದರೂ ಆಕೆ ತನ್ನ ಡಾನ್ಸ್ ಹಾಗೆಯೇ ಕಂಟಿನ್ಯೂ ಮಾಡುತ್ತಾಳೆ. ಇಲ್ಲಿ ಏನೇ ಆಗಲಿ ಅಥವಾ ಜಗವೇ ಮುಳಗಲಿ ನನ್ನ ಡ್ಯಾನ್ಸ್ ಮಾತ್ರ ಸದಾ ಹಾಗೆಯೇ ನಡೆಯುತ್ತಿರುತ್ತದೆ ಎಂದು ಹೇಳುವಂತೆ ಕಂಡುಬರುತ್ತಿದೆ.

ವಿಡಿಯೋ ನೋಡಿ

 

View this post on Instagram

 

A post shared by Joke University (@joke_university)

ಪ್ರಸ್ತುತ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ ಜೋಕ್ ಯುನಿವರ್ಸಿಟಿ ಹೆಸರಿನ ಪೇಜ್ ನಿಂದ ಶೇರ್ ಮಾಡಲಾಗಿದೆ. ಈ ವಿಡಿಯೋವನ್ನು ಇಲ್ಲಿಯವರೆಗೆ ಲಕ್ಷಾವಧಿ ಜನರು ನೋಡಿದ್ದು ಅಲ್ಲದೆ ಸಾಕಷ್ಟು ಜನರು ಲೈಕ್ ಮಾಡಿದ್ದಾರೆ.