ಇವನೆಂಥ ಪೊಲೀಸ್ ರಿ? ಮಗನಿಗೆ ಜೈಲಿನಿಂದ ಬಿಡಿಸಿಕೊಡಲು ತಾಯಿಯಿಂದ ಮಾಡಿಸಿಕೊಂಡನು ಮಸಾಜ್! ವಿಡಿಯೋ ವೈರಲ್…

ಪೊಲೀಸರು ಪ್ರತಿಯೊಂದು ಕೆಲಸಕ್ಕೆ ಲಂಚ ತೆಗೆದುಕೊಳ್ಳುವ ವಿಷಯವೇನು ಹೊಸದಲ್ಲ. ಲಂಚ ತೆಗೆದುಕೊಳ್ಳುವ ಕೆಲವೇ ಪೊಲೀಸರಿಂದ ಒಳ್ಳೆಯ ಪೊಲೀಸರು ಸಹ ಎಷ್ಟೋ ಸಲ ಅವಮಾನಕ್ಕೆ ಈಡಾಗುತ್ತಾರೆ. ಈಗ ಇಲ್ಲೊಬ್ಬ ಪೋಲೀಸ್ ಬೇರೆಯೇ ಕಾರಣದಿಂದ ಸೋಶಿಯಲ್ ಮೀಡಿಯಾದಲ್ಲಿಯ ನೇಟಿಜನ್ಸ್ ಗಳ ಕೋಪಕ್ಕೆ ಗುರಿಯಾಗಿದ್ದಾನೆ.

ಪ್ರಸ್ತುತ ಘಟನೆ ಬಿಹಾರದಿಂದ ವರದಿಯಾಗಿದೆ. ಇಲ್ಲಿಯ ಒಬ್ಬ ಪೊಲೀಸ್ ಅಧಿಕಾರಿಯ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಪೊಲೀಸ್ ಅಧಿಕಾರಿಯು ಜೈಲಿನಿಂದ ಮಗನಿಗೆ ಮುಕ್ತ ಮಾಡಿಸಿ ಕೊಡುವ ಸಲುವಾಗಿ ಅರ್ಧ ನಗ್ನ ಅವಸ್ಥೆಯಲ್ಲಿ ಕುಳಿತು ಆತನ ತಾಯಿಯಿಂದ ಬಲವಂತವಾಗಿ ಮಸಾಜ್ ಮಾಡಿಸಿಕೊಳ್ಳುತ್ತಿದ್ದಾನೆ. ಈ ಸಂಪೂರ್ಣ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಪೊಲೀಸ್ ನಿರೀಕ್ಷಕನ ಹೆಸರು ಶಶಿಭೂಷಣ ಸಿನ್ಹಾ ಇದ್ದು ಮಹಿಳೆಯ ಅಸಹಾಯಕತೆಯ ಲಾಭ ಪಡೆಯುತ್ತಿದ್ದಾನೆ. ಈ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿ ಬೆಡ್ ಮೇಲೆ ಕುಳಿತು ಫೋನ್ನಲ್ಲಿ ಮಾತನಾಡುತ್ತಿದ್ದಾನೆ. ಆತನ ಎದುರಿಗೆ ಇನ್ನೊಬ್ಬಳು ಮಹಿಳೆ ಕುಳಿತಿರುವುದು ವಿಡಿಯೋದಲ್ಲಿ ಕಂಡುಬರುತ್ತಿದೆ.

ಈ ಸಂಪೂರ್ಣ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ನಂತರ ಪ್ರಕರಣದ ತನಿಖೆ ಶುರುವಾಗಿದ್ದು ಆರೋಪಿ ಶಶಿಭೂಷಣ ಸಿನ್ಹಾಗೆ ಆಗಿಂದಾಗ ಅಮಾನತ್ತಿನ ಆದೇಶ ನೀಡಲಾಗಿದೆ..

ನೋಡಿ ಈ ವಿಡಿಯೋ…