ಇವರು ನೋಡಿ ಜಗತ್ತಿನ ಏಕೈಕ ‘ಹಿಂದೂ ಶೇಖ್’! ಅವಶ್ಯಕತೆ ಬಿದ್ದಾಗ ಅರಬ್ ಸುಲ್ತಾನರೂ ಇವರಿಂದ ಪಡೆಯುತ್ತಾರೆ ‘ಎರವಲು ಹಣ!’

ಶೇಖ್ ಈ ಶಬ್ದ ಕೇಳಿದ ನಂತರ ನಮ್ಮ ಕಣ್ಣ ಮುಂದೆ ಬಂದು ನಿಲ್ಲೋ ವ್ಯಕ್ತಿಯಂದರೆ, ಮುಸ್ಲಿಂ ರಾಷ್ಟ್ರಗಳಲ್ಲಿ ಇರುವ ಆಗರ್ಭ ಶ್ರೀಮಂತ ವ್ಯಕ್ತಿ. ನಿಜವಾಗಿಯೂ ಶೇಖ್ ಇದೊಂದು ಗೌರವದ ಪದವಿಯಾಗಿದೆ.

ಅರಬ್ ದೇಶಗಳಲ್ಲಿ ವಾಸಿಸುವ ಶ್ರೀಮಂತರಿಗೆ ಅಥವಾ ಅಲ್ಲಿಯ ಅತ್ಯುನ್ನತ ಹುದ್ದೆಯಲ್ಲಿ ಕೆಲಸ ಮಾಡುವವರಿಗೆ ಈ ಪದವಿಯನ್ನು ಕೊಡಲಾಗುತ್ತದೆ. ಅದೇ ಪ್ರಕಾರ ಒಮಾನ್ ದೇಶದಲ್ಲಿ ಹಿಂದೂ ವ್ಯಕ್ತಿಯೊಬ್ಬರಿಗೆ ಈ ಶೇಖ್ ಎನ್ನುವ ಪದವಿಯನ್ನು ಕೊಡಲಾಗಿದೆ.

ಮೂಲತ: ಗುಜರಾತಿನವರಾದ ಕನಕ ಖೀಮಜಿಭಾಯಿ ಇವರು ಜಗತ್ತಿನ ಒಬ್ಬರೇ ಒಬ್ಬರು ಹಿಂದು ಶೇಖ್ ಆಗಿದ್ದಾರೆ. ಇವರಿಗೆ ಒಮಾನ್ ನ ಸುಲ್ತಾನರು ಈ ಪದವಿಯನ್ನು ಗೌರವದಿಂದ ನೀಡಿದ್ದಾರೆ. ಒಮಾನಿನ ರಾಜಮನೆತನದ ಜೊತೆಗೆ ಖೀಮಜಿಭಾಯಿಯವರು ಅತ್ಯಂತ ನಿಕಟ ಸಂಬಂಧವನ್ನು ಹೊಂದಿದ್ದಾರೆ.

ಕನಕ ಖೀಮಜಿ ಅವರ ಅಜ್ಜ ರಾಮದಾಸ್ ಖೀಮಜಿ 1870 ರಲ್ಲಿ ವ್ಯಾಪಾರಕ್ಕಾಗಿ ಓಮನ್ ಗೆ ಹೋಗಿದ್ದರು. ಅಲ್ಲಿ ಅವರು ಉಪ್ಪು, ಮೆಣಸಿನಕಾಯಿ, ಸುಗಂಧ ದ್ರವ್ಯ, ರೇಷ್ಮೆ ಬಟ್ಟೆಗಳನ್ನು, ಮತ್ತು ಮಸಾಲೆ ಪದಾರ್ಥಗಳನ್ನು ಮಾರಾಟ ಮಾಡುತ್ತಿದ್ದರು. ಅಲ್ಲಿಂದ ಖರ್ಜೂರ ಮತ್ತು ಇನ್ನಿತರ ಪದಾರ್ಥಗಳನ್ನು ಭಾರತದಲ್ಲಿ ಮಾರಾಟ ಮಾಡುತ್ತಿದ್ದರು. ಈ ಮಾರಾಟದಲ್ಲಿ ಅವರಿಗೆ ತುಂಬಾ ಲಾಭವಾಯಿತು.

ಅನೇಕ ವರ್ಷಗಳ ವರೆಗೆ ಮಾರಾಟ ಮಾಡಿದ ನಂತರ ದೊರೆತ ಲಾಭದಿಂದ ರಾಮದಾಸ್ ಗ್ರೂಪ್ ಆಫ್ ಕಂಪನಿ ಹೆಸರಿನ ಸ್ವಂತದ ಕಂಪನಿಯೊಂದು ಓಪನ್ ಮಾಡಿದರು. ಕೆಲವೇ ದಿನಗಳಲ್ಲಿ ಈ ಕಂಪನಿಯು ತುಂಬಾ ವಿಸ್ತಾರವಾಯಿತು. ಭಾರತದಲ್ಲಿ ದೊರೆಯುವ ವಸ್ತುಗಳನ್ನು ಒಮಾನ್ ಗೆ ಆಯಾತ ಮಾಡಿಕೊಳ್ಳುವುದು, ಇಲ್ಲಿಯ ವಸ್ತುಗಳನ್ನು ಭಾರತಕ್ಕೆ ನಿರ್ಯಾತ ಮಾಡಿ ಮಾರಾಟ ಮಾಡುವುದು ಕಂಪನಿಯ ಮುಖ್ಯ ಉದ್ದೇಶವಾಗಿತ್ತು. ದಿನದಿಂದ ದಿನಕ್ಕೆ ಈ ಕಂಪನಿಯು ಒಮಾನ್ ನಲ್ಲಿ ತನ್ನ ಬೇರುಗಳನ್ನು ಬಿಡಲು ಶುರು ಮಾಡಿತು. ಜೊತೆಗೆ ಕಂಪನಿಯಲ್ಲಿ 70 ರಿಂದ 80 ಪ್ರತಿಶತ ಸ್ಥಾನಿಕರಿಗೆ ಕೆಲಸವನ್ನು ನೀಡಿದರು. ಅದೇ ಸಮಯದಲ್ಲಿ ರಾಮದಾಸ್ ಅವರು ಅಲ್ಲಿಯ ಸುಲ್ತಾನನ ಜೊತೆಗೆ ತುಂಬಾ ಒಳ್ಳೆಯ ಸಂಬಂಧವನ್ನು ಹೊಂದಿಕೊಂಡಿದ್ದರು. ಅಷ್ಟೇ ಅಲ್ಲ ಅವರು ಅಲ್ಲಿ ಫೈನಾನ್ಸರ್ ಆಗಿ ಸುಲ್ತಾನ್ ರಾಜಮನೆತನದವರಿಗೆ ಸಹಾಯವನ್ನು ಸಹಿತ ಮಾಡಿದ್ದರು. ಈ ಸಂಬಂಧವು ಮೂರು ತಲೆಮಾರುಗಳಿಂದ ಸೌಹಾರ್ದಯುತವಾಗಿ ನಡೆದುಕೊಂಡು ಬಂದಿದೆ.

ಸದ್ಯ ಕನಕ ಖೀಮಜಿಯವರು ಮೂರನೇ ತಲೆಮಾರಿನ ಸಾಕ್ಷಿಯಾಗಿದ್ದಾರೆ. ಒಮಾನ್ ನಲ್ಲಿ ತುಂಬಾ ಪ್ರತಿಷ್ಠಿತ ವ್ಯಕ್ತಿಯಾಗಿದ್ದಾರೆ. ರಾಮದಾಸ್ ಗ್ರೂಪ್ ಆಫ್ ಕಂಪನಿ ಒಮಾನ್ ನಲ್ಲಿ ಈಗ ಸರಿಯಾಗಿ ತನ್ನ ಬೇರುಗಳನ್ನು ಬಿಟ್ಟಿದೆ.

ಇವರು ತಾವು ಮಾಡುತ್ತಿರುವ ವ್ಯಾಪಾರದೊಂದಿಗೆ ಅಲ್ಲಿ ಅನೇಕ ಸಂಘ-ಸಂಸ್ಥೆಗಳ ಅಧ್ಯಕ್ಷರಾಗಿಯೂ ಕೆಲಸ ಮಾಡುತ್ತಾರೆ. ಓಮನ್ ದೇಶದ ವ್ಯಾಪಾರವು ಬೇರೆ ದೇಶಗಳ ಜೊತೆಗೆ ಯಾವ ರೀತಿ ಹೆಚ್ಚಿಗೆ ಮಾಡಬಹುದು, ಮತ್ತು ವ್ಯಾಪಾರದ ಮುಖಾಂತರ ವಿಕಾಸ ಹೇಗೆ ಸಾಧ್ಯ ಎಂಬುದರ ಬಗ್ಗೆ ಹಾಗೂ ವ್ಯಾಪಾರದಲ್ಲಿ ಯಾವ ಹೆಜ್ಜೆಗಳನ್ನು ಇಡುವುದರಿಂದ ಒಮಾನ್ ಗೆ ಲಾಭಕಾರಿಯಾಗಿದೆ ಎಂಬುದರ ಬಗ್ಗೆ ಅಲ್ಲಿಯ ಸುಲ್ತಾನ್ ಮತ್ತು ದೊಡ್ಡ ದೊಡ್ಡ ವ್ಯಾಪಾರಿಗಳಿಗೆ ಮಾರ್ಗದರ್ಶನ ಮಾಡುತ್ತಾರೆ.