ಇವರೇ ನೋಡಿ ಅತಿಹೆಚ್ಚು ಸಂಭಾವನೆ ಪಡೆಯುವ ಟಾಪ್ 7 ಗೀತರಚನೆಕಾರರು! ಒಂದು ಹಾಡಿಗೆ ಇವರು ಪಡೆಯುವ ಹಣ ಕೇಳಿದರೆ ತಲೆ ಗಿರ್ರ್ ಎನ್ನುತ್ತೆ!

ವಿಶ್ವದಲ್ಲಿ ಭಾರತೀಯ ಚಿತ್ರರಂಗ ಎಂದರೆ ಜನ ಬಾಲಿವುಡ್ ನತ್ತ ನೋಡುವಷ್ಟರ ಮಟ್ಟಕ್ಕೆ ಇಂದು ಬಾಲಿವುಡ್ ಬೆಳೆದು ನಿಂತಿದೆ. ಬಾಲಿವುಡ್ ಸಿನಿಮಾಗಳು ಸಾಕಷ್ಟು ಹೆಸರು ಮಾಡಲು ಕಾರಣ ಈ ಸಿನಿಮಾಗಳು ಹಾಡುಗಳು, ಆ ಹಾಡುಗಳ ಸಾಹಿತ್ಯ ಮತ್ತು ಸಿನಿಮಾದಲ್ಲಿನ ಅತ್ಯುತ್ತಮ ಎನಿಸುವಂತಹ ಸಂಭಾಷಣೆಗಳು ಎಂಬುದನ್ನು ಯಾರೂ ಕೂಡಾ ನಿರಾಕರಿಸುವಂತಿಲ್ಲ. ಆದರೆ ಸಂಭಾಷಣೆಗಿಂತ ಹೆಚ್ಚು ಹಾಡುಗಳದ್ದೇ ಕಾರುಬಾರು.

ಹಾಡುಗಳ ಅವಧಿ ಮೂರ್ನಾಲ್ಕು ನಿಮಿಷಗಳೇ ಆದರೂ ಅವು ಕೇಳುಗನ ಮನಸ್ಸಿನ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರುತ್ತದೆ. ಆಗಾಗ ಜನ ಈ ಅದ್ಭುತ ಹಾಡುಗಳ ಸಾಲುಗಳನ್ನು ಕೂಡಾ ತಮ್ಮಲ್ಲಿ ತಾವು ಹಾಡಿಕೊಂಡು ಖುಷಿ ಪಡುವುದು ಕೂಡಾ ಉಂಟು. ಇಂತಹ ಅದ್ಬುತ ಸಾಹಿತ್ಯವನ್ನು ಸಂಯೋಜನೆ ಮಾಡುವ ಗೀತಕಾರರ ಸಂಭಾವನೆ ಕೂಡಾ ಇಂದಿನ ದಿನಗಳಲ್ಲಿ ದೊಡ್ಡ ಮೊತ್ತದಲ್ಲೇ ಇದೆ. ಹೀಗೆ ದೊಡ್ಡ ಮೊತ್ತದ ಸಂಭಾವನೆ ಪಡೆಯುವ ಕೆಲವು ಗೀತ ರಚನೆಕಾರರ ಬಗ್ಗೆ ನಾವು ತಿಳಿಯೋಣ ಬನ್ನಿ.

1 ) ಗುಲ್ಜಾರ್

: ಗುಲ್ಜಾರ್ ಸಾಹೇಬ್ ಎಂದೇ ಭಾರತೀಯ ಚಿತ್ರರಂಗದಲ್ಲಿ ಪ್ರಸಿದ್ಧರಾದ ಈ ಹಿರಿಯ ಸಾಹಿತಿ ಚಿತ್ರರಂಗಕ್ಕೆ ಒಂದು ಅಮೂಲ್ಯ ರತ್ನವಿದ್ದಂತೆ. ಒಂದು ಅವರು ಬಹಳ ಒಳ್ಳೆಯ ಹಾಡುಗಳನ್ನು ಬರೆದಿದ್ದಾರೆ. ಒಂದಕ್ಕಿಂತ ಮತ್ತೊಂದು ಮನಮೋಹಕ ಎನ್ನುವಂತಹ ಸಾಹಿತ್ಯ.‌ ಗುಲ್ಜಾರ್ ಸಾಹೇಬ್ ಅವರ ಪ್ರತಿಭೆಯ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ. ಗುಲ್ಜಾರ್ ಅವರು ಹಾಡು ಬರೆಯಲು ಒಂದು ಹಾಡಿಗೆ15–20 ಲಕ್ಷ ರೂಪಾಯಿ ಸಂಭಾವನೆ ಪಡೆಯುತ್ತಾರೆ.‌ ವಿಧಿಸುತ್ತಾರೆ, ಇದು ಆಸ್ಕರ್ ಪ್ರಶಸ್ತಿ ವಿಜೇತ ಗೀತರಚನೆಕಾರರಿಗೆ ಬಹಳ ಕಡಿಮೆ ಶುಲ್ಕ ಎಂದರೆ ತಪ್ಪಾಗಲಾರದು.

2 ) ಜಾವೇದ್ ಅಖ್ತರ್:

ಜಾವೇದ್ ಅಖ್ತರ್ ಬಾಲಿವುಡ್ ಬಹು ಖ್ಯಾತ ಗೀತರಚನೆಕಾರ. ಇವರ ಮಗ ನಟ, ನಿರ್ಮಾಪಕ ಕೂಡಾ. ಜಾವೇದ್ ಅಖ್ತರ್ ಅವರ ಪ್ರತಿಭೆಯ ಅರಿವು ಅವರ ಹಾಡು ಕೇಳಿದವರಿಗಿದೆ. ತನ್ನ ಹಾಡುಗಳಿಗಾಗಿ ಅವರು ಹಲವಾರು ಫಿಲ್ಮ್‌ಫೇರ್ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದ್ದಾರೆ. ಪದಗಳ ಮೇಲೆ, ಭಾಷೆಯ ಮೇಲೆ ಅದ್ಭುತ ಹಿಡಿತ ಇರುವ ಇವರು ಒಂದು ಹಾಡಿಗೆ 10 ರಿಂದ 15 ಲಕ್ಷ ರೂಪಾಯಿಗಳ ಸಂಭಾವನೆ ಪಡೆಯುತ್ತಾರೆ.

3 ) ಪ್ರಸೂನ್ ಜೋಷಿ:

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್‌ನ ಅಧ್ಯಕ್ಷರಾದ ನಂತರ, ಪ್ರಸೂನ್ ಜೋಶಿ ಅವರು ಜಾಡುಗಳನ್ನು ಬರೆಯುತ್ತಿಲ್ಲ. ಆದರೆ ಅವರು ಕೂಡಾ ಬಾಲಿವುಡ್ ನ ಅತ್ಯಂತ ಪ್ರತಿಭಾವಂತ ಗೀತರಚನೆಕಾರರಲ್ಲಿ ಒಬ್ಬರು.‌ ಅವರು ಹಾಡುಗಳ ಜೊತೆಗೆ, ಜಾಹೀರಾತುಗಳಲ್ಲಿ ಬರೆದ ಟ್ಯಾಗ್ ಲೈನ್ ಕೂಡಾ ಸಿಕ್ಕಾಪಟ್ಟೆ ಫೇಮಸ್. ಸಿಬಿಎಫ್‌ಸಿಯ ಅಧ್ಯಕ್ಷರಾಗುವ ಮೊದಲು, ಪ್ರಸೂನ್ ಜೋಶಿ ಒಂದು ಹಾಡಿಗೆ ಸುಮಾರು 8-10 ಲಕ್ಷ ಶುಲ್ಕ ಸಂಭಾವನೆ ಪಡೆಯುತ್ತಿದ್ದರು.

4 ) ಇರ್ಷಾದ್ ಕಾಮಿಲ್ :

ಇವರು ಬಾಲಿವುಡ್‌ನ ಟಾಪ್ ಗೀತ ರಚನಾಕಾರರ ಸಾಲಿನಲ್ಲಿ ಹೆಸರನ್ನು ಪಡೆದವರು. 2004 ರಲ್ಲಿ ಚಮೆಲಿ ಚಿತ್ರದೊಂದಿಗೆ ಇವರು ಗೀತ ರಚನೆಕಾರರಾಗಿ ವೃತ್ತಿಜೀವನವನ್ನು ಪ್ರಾರಂಭಿಸಿದರು. ಕೆಲವೇ ವರ್ಷಗಳಲ್ಲಿ ಅತ್ಯುತ್ತಮ ಹಾಡುಗಳನ್ನು ನೀಡಿ ಗಮನಸೆಳೆದರು. ಅವರ ಹಾಡುಗಳು ಸಿನಿಮಾದ ಪ್ರಮುಖ ಆಕರ್ಷಣೆಗಳಾಗಿದ್ದು ಕೂಡಾ ನಿಜ.
ಇರ್ಷಾದ್ ಕಾಮಿಲ್ ಅವರು ಪ್ರತಿ ಹಾಡಿಗೆ ಸುಮಾರು 8-9 ಲಕ್ಷ ರೂ. ಸಂಭಾವನೆ ಪಡೆಯುತ್ತಾರೆ.

5 ) ಅಮಿತಾಭ್ ಭಟ್ಟಾಚಾರ್ಯ:

ಇವರು ಬಾಲಿವುಡ್ ನಲ್ಲಿ ಗಾಯಕನಾಗಿ ಹೆಸರನ್ನು ಗಳಿಸಲು ಬಯಸಿದ್ದರು
ಆದರೆ ವಿಧಿ ಲಿಖಿತ ಬೇರೆಯೇ ಆಗಿತ್ತು. ಗಾಯಕನಾಗ ಬಯಸಿದ್ದ ಅಮಿತಾಬ್ ಇಂದು ಬಾಲಿವುಡ್ ನ ಜನಪ್ರಿಯ ಗೀತರಚನೆಕಾರನಾಗಿ ತನ್ನದೇ ಆದ ಹೆಸರನ್ನು ಮಾಡಿದ್ದಾರೆ. ಅತ್ಯುತ್ತಮ ಗೀತ ರಚನೆಗಾಗಿ ಇವರು ಪ್ರತಿಷ್ಠಿತ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಕೂಡಾ ಪಡೆದಿದ್ದಾರೆ.‌ ಅಮಿತಾಭ್ ಭಟ್ಟಾಚಾರ್ಯ ಅವರು ಹಾಡೊಂದನ್ನು ಬರೆಯಲು ಸುಮಾರು 7-8 ಲಕ್ಷ ಶುಲ್ಕ ಸಂಭಾವನೆ ಪಡೆಯುತ್ತಾರೆ.‌

6 ) ಸ್ವಾನಂದ್ ಕಿರ್ಕಿರೆ:

ಇವರೊಬ್ಬ ಬಹುಮುಖ ಪ್ರತಿಭಾವಂತ. ಹಿನ್ನೆಲೆ ಗಾಯಕ, ಸಹಾಯಕ ನಿರ್ದೇಶಕ, ಸಂಭಾಷಣೆ ಬರಹಗಾರ ಮತ್ತು ಗೀತ ರಚನೆಕಾರ ಆಗಿರುವ ಇವರ ಸಾಧನೆ ಅದ್ವಿತೀಯ. ಸೂಪರ್ ಹಿಟ್ ಸಿನಿಮಾ ತ್ರೀ ಈಡಿಯಟ್ಸ್‌ನ “ಬೆಹ್ತಿ ಹವಾ ಸಾ ಥಾ ವೋ” ಮತ್ತು ಅಮೀರ್ ಅವರ ಪಿಕೆ ಚಲನಚಿತ್ರದಲ್ಲಿ ಕೂಡಾ ಹಾಡುಗಳನ್ನು ಬರೆದಿದ್ದಾರೆ. ಒಂದು ಹಾಡನ್ನು ಬರೆಯಲು ಸ್ವಾನಂದ್ ಸುಮಾರು 6 ​​ರಿಂದ 7 ಲಕ್ಷ ರೂಪಾಯಿಗಳನ್ನು ಸಂಭಾವನೆ ಪಡೆಯುತ್ತಾರೆ.

7 ) ಜೈದೀಪ್ ಸಾಹ್ನಿ:

ಅವರ ಹೆಸರು ಕೇಳಿದಾಗ ಕೇಳುವ ನಿಮಗೆ ಯಾವುದೇ ಹಾಡು ನೆನಪಗಾದೇ ಇರಬಹುದು. ಆದರೆ ಅವರು ಬರೆದಿರುವ ಹಾಡು ಮಾತ್ರ ಸ್ಪೂರ್ತಿ ಹಾಗೂ ರೋಮಾಂಚನಕಾರಿ ಎಂಬುದು ನಿಜ. ಜೈದೀಪ್ ಅವರು ಚಕ್ ದೇ ಇಂಡಿಯಾ, ರಬ್ ನೆ ಬನಾ ದಿ ಜೋಡಿ ಮತ್ತು ಅಂಧಾಧುನ್ ನಂತಹ ಹಿಟ್ ಸಿನಿಮಾಗಳಿಗೆ ಹಾಡುಗಳನ್ನು ಬರೆದಿದ್ದಾರೆ. ಇವರು ಒಂದು ಹಾಡಿಗೆ 5 ಲಕ್ಷ ರೂ ಸಂಭಾವನೆ ಪಡೆಯುತ್ತಾರೆ.