ಇಶಾ ಅಂಬಾನಿಯ ಗೋಲ್ಡನ್ ಡ್ರೆಸ್; ಬೆಲೆ ಕೇಳಿದರೆ ತಲೆ ಸುತ್ತುತ್ತೆ!

ಅಂಬಾನಿ ಕುಟುಂಬದ ಮಗಳಾದ ಇಶಾ ಅಂಬಾನಿ ತನ್ನ ಕುಟುಂಬದ ಇತರೆ ಸದಸ್ಯರ ಹಾಗೇ ಡೌನ್ ಟು ಅರ್ತ್ ಆಗಿರಲು ಅಥವಾ ಅಹಂ ಇಲ್ಲದೇ ಬದುಕುವುದನ್ನು ಬಯಸುತ್ತಾರೆ. ತನ್ನ ಬಳಿ ಕೋಟ್ಯಂತರ ರೂಪಾಯಿಗಳ ಆಸ್ತಿ ಹಾಗೂ ಐಶ್ವರ್ಯ ಇದ್ದರೂ ಕೂಡಾ ಇಶಾ ಅಂಬಾನಿ ಅದರ ಹಮ್ಮು ಬಿಮ್ಮನ್ನು ಮಾತ್ರ ಎಲ್ಲೂ ಕೂಡಾ ಪ್ರದರ್ಶನ ಮಾಡದೇ ನಡೆದುಕೊಳ್ಳುವುದನ್ನು ನಾವು ನೋಡಬಹುದು. ಇದೇ ಕಾರಣದಿಂದಾಗಿ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ದಂಪತಿಯ ಮುದ್ದಿನ ಮಗಳಾದ ಇಶಾ ಅಂಬಾನಿ ಅವರನ್ನು ಕೂಡಾ ಜನರು ಬಹಳ ಇಷ್ಟ ಪಡುತ್ತಾರೆ. ಇಶಾ ತನ್ನ ಉನ್ನತ ಜೀವನ ಶೈಲಿ, ಸ್ನೇಹ ಪ್ರವೃತ್ತಿ ಮಾತ್ರವೇ ಅಲ್ಲದೇ ತನ್ನ ಸ್ಟೈಲ್ ಮತ್ತು ವಸ್ತ್ರ ವಿನ್ಯಾಸದಿಂದ ಕೂಡಾ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ.

ಇದೇ ಕಾರಣದಿಂದ ಇಶಾ ಅಂಬಾನಿ ತೊಡುವ ಡ್ರೆಸ್ ಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆಯುತ್ತಿರುತ್ತದೆ. ಹಾಗೂ ಇಶಾ ಅವರ ಫೋಟೋಗಳು ವೈರಲ್ ಆಗುತ್ತಾ ಇರುತ್ತವೆ. ಇಂತಹುದೇ ಒಂದು ಸುದ್ದಿ ಇಶಾ ಅವರ ಗೋಲ್ಡನ್ ಡ್ರೆಸ್ ಕುರಿತಾಗಿ ಹೊರ ಬಂದಿದ್ದು, ಬಹಳ ಅದ್ದೂರಿಯಾಗಿರುವ ಈ ಡ್ರೆಸ್ ಅನ್ನು ಸಾಮಾನ್ಯ ಜನರು ಖರೀದಿ ಮಾಡುವುದು ಅಸಾಧ್ಯ ಎಂದೇ ನಾವು ಹೇಳಬಹುದು‌. ಇಶಾ ಅವರ ಈ ಗೋಲ್ಡನ್ ಡ್ರೆಸ್ ಅನ್ನು ಒಂದು ಇವೆಂಟ್ ಗಾಗಿ ದೇಶದ ಸುಪ್ರಸಿದ್ಧ ವಿನ್ಯಾಸಕಾರರಲ್ಲಿ ಒಬ್ಬರಾಗಿರುವ
ಆ್ಯಮಿ ಪಟೇಲ್ ಅವರು ಆಯ್ಕೆ ಮಾಡಿದ್ದರು ಎನ್ನಲಾಗಿದೆ. ಸಿಲ್ಕ್ ಲೈನ್ ಕೂಡಾ

ಆ್ಯಮಿ ಪಟೇಲ್ ಸುಂದರಿಯಾದ ಇಶಾ ಅವರಿಗಾಗಿ ಈ ಸುಂದರ ಗೋಲ್ಡನ್ ಹಳದಿ ಬಣ್ಣದೊಂದಿಗೆ ಗೋಲ್ಡನ್ ಶೇಡ್ ಇರುವ ಈ ವಿಶೇಷ ಡ್ರೆಸ್ ಅನ್ನು ಡಿಸೈನ್ ಮಾಡಿದ್ದರು. ಪೂರ್ತಿ ಡ್ರೆಸ್ ಮೇಲೆ ಹೂವಿನ ಪ್ರಿಂಟ್ ಇದೆ‌‌. ಇದು ಡಾರ್ಕ್ ಗೋಲ್ಡನ್ ಮತ್ತು ಬ್ರೌನ್ ಕಲರ್ ಗಳ ಮಿಕ್ಸ್ ನಂತೆ ಕಾಣುತ್ತದೆ. ಡ್ರೆಸ್ ಗೆ ಬಳಸಲಾದ ಬಟ್ಟೆಯು ಹೊಳೆಯುವಂತೆ ಇದ್ದು, ಅದರಿಂದಾಗಿಯೇ ಡ್ರೆಸ್ ಮತ್ತಷ್ಟು ಆಕರ್ಷಣೆಯನ್ನು ಪಡೆದುಕೊಂಡಿತ್ತು. ಬಂಗಾರದ ಬಣ್ಣದ ಈ ಡ್ರೆಸ್ ನಲ್ಲಿ ವೀ ಕಟ್ ಇರುವ ನೆಕ್ ಲೈನ್ ( ಕುತ್ತಿಗೆ ಭಾಗದ ಲೈನ್) ಇದ್ದು ಡ್ರೆಸ್ ಗೆ ಒಂದು ಬೋಲ್ಡ್ ನೆಸ್ ಅನ್ನು ನೀಡುವಲ್ಲಿ ಯಶಸ್ವಿಯಾಗಿತ್ತು.

ಈ ಡ್ರೆಸ್ ರಫಲ್ ವಿನ್ಯಾಸವನ್ನು ಸಹ ಅದರ ಮೇಲೆ ಹೊಂದಿದ್ದು, ಈ ವಿನ್ಯಾಸವು ಕಂಠರೇಖೆಯಿಂದ ( ನೆಕ್ ಲೈನ್) ಪ್ರಾರಂಭವಾಗುವ ರೀತಿಯಲ್ಲಿ ಡ್ರೆಸ್ ಮೇಲೆ ಡಿಸೈನ್ ಮಾಡಲಾಗಿದ್ದು, ಅದು ಹಾಗೇ ನೇರವಾಗಿ ಉಡುಪಿನ ಮೇಲಿಂದ ಸಾಗಿ ಅದರ ಕೆಳಭಾಗವನ್ನು ತಲುಪುತ್ತದೆ. ಈ ರಫಲ್ಸ್ ವಿನ್ಯಾಸ ಕೂಡಾ ಉಡುಪಿನ ಅಂದವನ್ನು ದುಪ್ಪಟ್ಟು ಮಾಡಿತ್ತು. ಈ ಡ್ರೆಸ್ ನಲ್ಲಿ ಪೂರ್ಣ ತೋಳುಗಳು ( ಫುಲ್ ಸ್ಲೀವ್ಸ್), ಕೆಳಭಾಗದಲ್ಲಿ ಒಂದು ವಿಭಿನ್ನವಾದ ವಿನ್ಯಾಸ ಮತ್ತು ಸೀಳು ವಿನ್ಯಾಸವನ್ನು ನಾವು ನೋಡಬಹುದಾಗಿದೆ. ಸಿಲ್ಕ್ ಲೈನ್ ಕೂಡಾ ಇರುವ ಈ ಡ್ರೆಸ್ ನ ಹೊಳಪು ಹೀಗಿತ್ತು ಎನ್ನುವುದಾದರೆ ಅದು ಇಶಾ ತೊಟ್ಟ ಆಭರಣಗಳಿಗಿಂತ ಹೆಚ್ಚು ಹೊಳೆದಿದೆ.

ಆ್ಯಮಿ ಪಟೇಲ್ ಇಶಾ ಗಾಗಿ ಆಯ್ಕೆ ಮಾಡಿದ್ದ ಈ ಡ್ರೆಸ್ ಅಂತರರಾಷ್ಟ್ರೀಯ ಖ್ಯಾತಿ ಡಿಸೈನರ್ ಮಿನಕ್ ಲುಲ್ಲಿಯರ್ ನ ಸ್ಪ್ರಿಂಗ್ ಕಲೆಕ್ಷನ್ 2020 ಯಲ್ಲೊಂದು ಎನ್ನಲಾಗಿದೆ. ಈ ಅಪರೂಪದ ಡಿಸೈನ್ ನ ಗೋಲ್ಡನ್ ಡ್ರೆಸ್ ಅನ್ನು ಖರೀದಿ ಮಾಡಲು ಡಿಸೈನರ್ ನ ವೆಬ್ಸೈಟ್ ನಲ್ಲಿ ಲಭ್ಯವಿದೆ. ಇದರ ಬೆಲೆ ಬರೋಬ್ಬರಿ 3,26,000 ರೂಪಾಯಿಗಳಾಗಿದ್ದು, ಸಾಮಾನ್ಯರು ಇದನ್ನು ಖರೀದಿ ಮಾಡುವುದು ಅಸಾಧ್ಯವೇ ಸರಿ.