ಈತನು ಸಹಜವಾಗಿ ಬಾರಿಸಿದ ಹೊಸದಾದ ಬ್ಯಾಕ್ ಶಾಟ್ ಒಮ್ಮೆ ನೋಡಿ ಈ ವೈರಲ್ ವಿಡಿಯೋದಲ್ಲಿ..! RCB ಯಲ್ಲಿ ಮೊದಲು ಈತನನ್ನು ಸೇರಿಸೋಣ ಎನ್ನುವಿರಿ…

ಭಾರತದಲ್ಲಿ ಕ್ರಿಕೆಟ್ ಹುಚ್ಚು ಇರುವುದು ಅಷ್ಟಿಷ್ಟಲ್ಲ. ಇಲ್ಲಿ ಈ ಆಟವು ಒಂದು ಧರ್ಮವಾಗಿ ಬಿಟ್ಟಿದೆ. ಅಷ್ಟೊಂದು ಜನಪ್ರಿಯ ಆಟ ಕ್ರಿಕೆಟ್ ಆಗಿದೆ. ರಾಷ್ಟ್ರೀಯ ಆಟ ಹಾಕಿ ಇದ್ದರೂ ಎಲ್ಲೆಡೆ ಆಡುವುದು ಮಾತ್ರ ಕ್ರಿಕೆಟ್. ಹೀಗಾಗಿ ಈ ದೇಶದಲ್ಲಿ ಕ್ರಿಕೆಟ್ ಪ್ರತಿಭೆಗಳಿಗೆ ಕಡಿಮೆ ಇಲ್ಲ. ಈಗ ಇದೇ ರೀತಿಯ ಒಬ್ಬ ಕ್ರಿಕೆಟ್ ಪ್ರತಿಭೆಯನ್ನು ಇಲ್ಲಿಯ ವಿಡಿಯೋದಲ್ಲಿ ನೋಡಬಹುದು.

ಈತನು ಆಡಿದ ಈ ಶಾಟ್ ನೋಡಿದಾಗ ನೋಡುಗರಿಗೆ ತುಂಬಾ ಆಶ್ಚರ್ಯವಾಗುತ್ತದೆ. ಏಕೆಂದರೆ ಅಷ್ಟೊಂದು ಸಲೀಸಾಗಿ, ಸಹಜವಾಗಿ ಆಡಿದ ಈ ಹೊಸ ಶಾಟ್ ಕ್ರಿಕೆಟ್ ರಸಿಕರಿಗೆ ಮಂತ್ರಮುಗ್ಧ ಮಾಡುತ್ತದೆ.

ವಿಡಿಯೋದಲ್ಲಿ ಕಾಣುವ ಹಾಗೆ ಬ್ಯಾಟ್ಸ್ಮನ್ ಸಜ್ಜಾಗಿ ಬಾಲಿನ ದಾರಿ ಕಾಯುತ್ತಿದ್ದಾನೆ. ಅಷ್ಟರಲ್ಲಿ ಬಾಲ್ ಲೆಗ್ ಸ್ಟಂಪ್ ಮೇಲೆ ಬೀಳುತ್ತಲೇ ಬ್ಯಾಟ್ಸ್ಮನ್ ತನ್ನ ವರಸೆಯನ್ನು ಸಂಪೂರ್ಣವಾಗಿ ಬದಲಿಸಿ ಒಂದೇ ಕೈಯಿಂದ ಬ್ಯಾಟ್ ನ್ನು ಸಂಪೂರ್ಣವಾಗಿ ಬ್ಯಾಕ್ ಸೈಡ್ ತಿರುಗಿಸಿ ಅದ್ಭುತವಾದ ಶಾಟ್ ಹೊಡೆದಿದ್ದಾನೆ. ಸರಿಯಾದ ಟೈಮಿಂಗ್ ನಿಂದಾಗಿ ಬಾಲ್ ನೇರ ಬೌಂಡ್ರಿ ಗೆರೆ ದಾಟಿ ಹೋಗಿದೆ.

ವಿಡಿಯೋ ನೋಡಿ

 

View this post on Instagram

 

A post shared by @deff_cricket

ಈ ವಿಡಿಯೋ ಕ್ರಿಕೆಟ್ ರಸಿಕರಿಗೆ ತುಂಬಾ ತುಂಬಾ ಇಷ್ಟವಾಗಿದೆ. ಪ್ರಸ್ತುತ ವಿಡಿಯೋವನ್ನು ಇಲ್ಲಿಯವರೆಗೆ 41.2 ಮಿಲಿಯನ್ ಜನರು ನೋಡಿದ್ದಲ್ಲದೆ, 3 ಮಿಲಿಯನ್ ಗಿಂತಲೂ ಹೆಚ್ಚು ಜನರು ಲೈಕ್ ಮಾಡಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನ deff_cricket ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.