ಈತ ಮೊಸಳೆಯ ಬಾಯಿಗೆ ಕೈ ಹಾಕಿ ಮಜಾ ಮಾಡುತ್ತಿದ್ದ, ಅಷ್ಟರಲ್ಲಿ ಮೊಸಳೆ ಮಾಡಿದ್ದೇನು? ನೋಡಿ ವೈರಲ್ ವಿಡಿಯೋ!

ಇಂದಿನ ಸಾಮಾಜಿಕ ಜಾಲತಾಣಗಳಲ್ಲಿ ಅನೇಕ ವಿಡಿಯೋಗಳು ವೈರಲ್ ಆಗುತ್ತಿವೆ. ಇಂದಿನ ಪ್ರತಿಯೊಬ್ಬ ನೆಟ್ಟಿಗರು ವಿಡಿಯೋ ಇಷ್ಟ ಪಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಇಂದು ಎಲ್ಲವೂ ಸಾಧ್ಯವಾಗುತ್ತದೆ. ನಾವು ಏನೇ ಕಲಿಯಬೇಕಾದರು ಸಹ ಈ ಮಾಧ್ಯಮದಿಂದ ಸಾಧ್ಯವಾಗುವದು. ಸದ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೋ ತುಂಬಾ ವೈರಲ್ ಆಗುತ್ತಿದೆ.

ಈ ವೈರಲ್ ವಿಡಿಯೋ ಒಂದು ಪ್ರಾಣಿ ಸಂಗ್ರಾಲಯದಲ್ಲಿಯ ವಿಡಿಯೋ ಆಗಿದೆ. ಪ್ರಸ್ತುತ ವಿಡಿಯೋದಲ್ಲಿ ನೀರಿನ ಹೊರಗೆ ಬಂದು ಆರಾಮವಾಗಿ ಬಾಯಿ ತೆರದು ಕುಳಿತಿರುವ ಮೊಸಳೆಯ ಬಾಯಲ್ಲಿ ಒಬ್ಬ ವ್ಯಕ್ತಿ ಕೈ ಹಾಕಿ ಮೇಲಿಂದ ಮೇಲೆ ಅದಕ್ಕೆ ನೋವು ಉಂಟು ಮಾಡುತ್ತಿರುತ್ತಾನೆ. ಮೊದಲು ಸ್ವಲ್ಪ ಕೈ ಹಾಕಿ ಅದರ ಬಾಯನ್ನು ಉಜ್ಜುವ ನಾಟಕ ಮಾಡುತ್ತಾನೆ. ಅದನ್ನು ನೋಡಿದ ಮೊಸಳೆ ಏನು ಮಾಡದೆ ಸುಮ್ಮನೆ ಇರುತ್ತದೆ.

ಎರಡನೆಯ ಬಾರಿ ಈ ವ್ಯಕ್ತಿ ಮೊಸಳೆಯ ಬಾಯಲ್ಲಿ ಕೈ ಹಾಕಿ ಅದರ ಗಂಟಲನ್ನು ಒತ್ತುವ ಪ್ರಯತ್ನ ಮಾಡುತ್ತಾನೆ ಆದರೂ ಸಹಿತ ಮೊಸಳೆ ಸುಮ್ಮನೀರುತ್ತದೆ. ಆದರೆ ಕೊನೆಗೆ ಆ ವ್ಯಕ್ತಿ ಜೋರಾಗಿ ಒತ್ತಿ ಅದರ ಗಂಟಲಲ್ಲಿ ಕೈ ಹಾಕುವ ಸಾಹಸ ಮಾಡುತ್ತಾನೆ ಇದರಿಂದ ರೊಚ್ಚಿಗೆದ್ದ ಮೊಸಳೆ ಆತನ ಕೈಯನ್ನು ತನ್ನ ದೈತ್ಯಾ#ಕಾರಾದ ಹಲ್ಲಿನಿಂದ ಬಾಯಲ್ಲಿ ಹಿಡಿಯುತ್ತದೆ. ಆ ವ್ಯಕ್ತಿಯ ಅದೃಷ್ಟ ಚೆನ್ನಾಗಿತ್ತೋ ಗೊತ್ತಿಲ್ಲ, ಆತನ ಪ್ರಯತ್ನದಿಂದ ಮೊಸಳೆ ಬೇಗನೆ ಆತನ ಕೈಯನ್ನು ಬಿಡುತ್ತದೆ. ಬಿಟ್ಟ ತಕ್ಷಣ ಆ ವ್ಯಕ್ತಿಯ ಕೈಯಿಂದ ರ#ಕ್ತ ಹರಿಯುತ್ತದೆ.

ವಿಡಿಯೋ ನೋಡಿ

ಇದನ್ನು ಗಮನಿಸಿದ ಅಲ್ಲಿದ್ದ ಬೇರೆ ವ್ಯಕ್ತಿ ಈ ಮೊಸಳೆಯ ಕಡೆಗೆ ನೀರನ್ನು ಚೆಲ್ಲುವ ಪ್ರಯತ್ನ ಮಾಡುತ್ತಾನೆ. ವ್ಯಕ್ತಿಯ ಅದೃಷ್ಟ ಚೆನ್ನಾಗಿದ್ದರಿಂದ ಆತನ ಕೈ ಉಳಿಯಿತು ಇಲ್ಲದಿದ್ದರೆ ಆತನ ಕೈ ಮೊಸಳೆಯ ಆಹಾರ ವಾಗುತ್ತಿತ್ತು. ನಾವು ಸಾಕಿರುವ ಪ್ರಾಣಿಗಳಿಗೆ ಎಷ್ಟೇ ಆತ್ಮೀಯತೆ ತೋರಿದರು ಸಹ ಕೆಲವೊಮ್ಮೆ ಅವುಗಳು ತಮ್ಮ ನಿಜ ಸ್ವರೂಪವನ್ನು ತೋರಿಯೇ ಬಿಡುತ್ತವೆ ಅನ್ನೋದಕ್ಕೆ ಈ ವಿಡಿಯೋನೆ ಸಾಕ್ಷಿ.