ಈತ 8 ಪತ್ನಿಯೊಂದಿಗೆ ವಾಸವಾಗಿದ್ದಾನೆ, ಎಲ್ಲರೊಂದಿಗೆ ರೊಮ್ಯಾನ್ಸ್ ಮಾಡಲು ಈ ನಿಯಮ ಅಳವಡಿಸಿಕೊಂಡಿದ್ದಾನೆ, ವಿಡಿಯೋದಲ್ಲಿ ಹೇಳಿದ ಯಶಸ್ಸಿನ ರಹಸ್ಯ!!!
ಒಬ್ಬ ವ್ಯಕ್ತಿಯ ಮೂರ್ನಾಲ್ಕು ಮದುವೆಯಾಗಿರುವದು ನೀವು ಸಾಮಾನ್ಯವಾಗಿ ಕೇಳಿರಬೇಕು, ಆದರೆ ಇತ್ತೀಚಿನ ದಿನಗಳಲ್ಲಿ ಒಬ್ಬ ವ್ಯಕ್ತಿಯು 8 ಮದುವೆಗಳನ್ನು ಮಾಡಿಕೊಳ್ಳುವ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿ ಮಾಡುತ್ತಿದ್ದಾನೆ. ಈ ವ್ಯಕ್ತಿಯ ಹೆಸರು ಓಂಗ್ ಡ್ಯಾಮ್ ಸೊರೊಟ್, ಇವರು ಥೈಲ್ಯಾಂಡ್ ಮೂಲದವರು. ಸೊರೊಟ್, ವೃತ್ತಿಯಲ್ಲಿ ಟ್ಯಾಟೂ ಕಲಾವಿದ, ತನ್ನ 8 ಹೆಂಡತಿಯರೊಂದಿಗೆ ವಾಸಿಸುತ್ತಾನೆ. ಒಂದಕ್ಕಿಂತ ಹೆಚ್ಚು ಹೆಂಡತಿಯರನ್ನು ಹೊಂದುವುದು ಅವರ ನಡುವೆ ದೂರವಾಗಲು ಕಾರಣವಾಗುತ್ತದೆ ಎಂದು ನಂಬಲಾಗಿದೆ, ಆದರೆ ಈ ವ್ಯಕ್ತಿಯ ಎಲ್ಲಾ ಹೆಂಡತಿಯರು ಯಾವುದೇ ಭೇದವಿಲ್ಲದೆ ಒಂದೇ ಮನೆಯಲ್ಲಿ ಒಟ್ಟಿಗೆ ವಾಸಿಸುತ್ತಾರೆ. ಅವರೆಲ್ಲರೂ ತಮ್ಮ ಪತಿ ಓಂಗ್ ಡ್ಯಾಮ್ ಸೊರೊಟ್ ಅವರನ್ನು ತುಂಬಾ ಪ್ರೀತಿಸುತ್ತಾರೆ ಮತ್ತು ಅವರನ್ನು ವಿಶ್ವದ ಅತ್ಯುತ್ತಮ ವ್ಯಕ್ತಿ ಎಂದು ಪರಿಗಣಿಸುತ್ತಾರೆ. ಓಂಗ್ ಡ್ಯಾಮ್ ಸಹ ಅವರೆಲ್ಲರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುತ್ತಾರೆ ಎಂದು ಅವರು ನಂಬುತ್ತಾರೆ.
ಒಂದು ವರದಿಯ ಪ್ರಕಾರ, ಟ್ಯಾಟೂ ಕಲಾವಿದ ಸೊರೊಟ್ ಟಿವಿ ಕಾರ್ಯಕ್ರಮವೊಂದರಲ್ಲಿ ಸಂದರ್ಶನ ಮಾಡಿದರು, ಅದರಲ್ಲಿ ಅವರು ತಮ್ಮ ಹೆಂಡತಿಯರು ನಾಲ್ಕು ವಿಭಿನ್ನ ಬೆಡ್‌ರೂಮ್‌ಗಳಲ್ಲಿ ಮಲಗುತ್ತಾರೆ ಮತ್ತು “ತಮ್ಮ ಗಂಡನೊಂದಿಗೆ ಮಲಗಲು ಅವರ ಸರದಿಯನ್ನು ನಿರೀಕ್ಷಿಸುತ್ತಾರೆ” ಎಂದು ಸಂದರ್ಶನದಲ್ಲಿ ಹೇಳಿದರು. ಅಲ್ಲದೆ ಅವರ 8 ಹೆಂಡತಿಯರು ಪರಸ್ಪರ ಚೆನ್ನಾಗಿ ಬದುಕುತ್ತಿದ್ದಾರೆ ಎಂದು ಅವರು ಹೇಳಿದರು, ಅವರ ಈ ಸಂದರ್ಶನವನ್ನು ಯೂಟ್ಯೂಬ್‌ನಲ್ಲಿ 3 ಮಿಲಿಯನ್‌ಗಿಂತಲೂ ಹೆಚ್ಚು ಬಾರಿ ವೀಕ್ಷಿಸಲಾಗಿದೆ.
ಸೊರೊಟ್ ತನ್ನ ಹೆಂಡತಿಯರನ್ನು ಭೇಟಿಯಾದ ಕಥೆಯನ್ನು ವಿವರಿಸಿದರು. ಸೊರೊಟ್ ಪ್ರಕಾರ, ಪ್ರತಿ ಬಾರಿ ಅವರ ಮೊದಲ ನೋಟದಲ್ಲೇ ಪ್ರೀತಿ ಉಂಟಾಗಿದೆ ಅಂತೆ. ಟ್ಯಾಟೂ ಕಲಾವಿದ ಸೊರೊಟ್ ತನ್ನ ಮೊದಲ ಪತ್ನಿ ನಾಂಗ್ ಸ್ಪ್ರೈಟ್ ಅವರನ್ನು ಸ್ನೇಹಿತನ ಮದುವೆಯಲ್ಲಿ ಭೇಟಿಯಾದರು. ಅವನು ತನ್ನ ಎರಡನೇ ಹೆಂಡತಿ ನಾಂಗ್ ಎಲ್ ಅನ್ನು ಮಾರುಕಟ್ಟೆಯಲ್ಲಿ ಭೇಟಿಯಾಗಿದ್ದರು. ಕುತೂಹಲಕಾರಿ ಏನೆಂದರೆ ಇವರ ಎರಡನೆಯ ಪತ್ನಿ ನೋಂಗ್ ಎಲ್ ಅವರಿಗೆ ಸೊರೊಟ್‌ನ ಮೊದಲ ಹೆಂಡತಿಯ ಬಗ್ಗೆ ತಿಳಿದಿದ್ದರೂ, ಸಹ ಅವರು ಸಾರೋಟ್‌ನನ್ನು ಮದುವೆಯಾದರು.
ಸೊರೋಟ್ ಅವರ ಪ್ರಕಾರ ಅವರ ಮೂರನೆಯ ಹೆಂಡತಿ ಆಸ್ಪತ್ರೆಯಲ್ಲಿ ಸಿಕ್ಕಿದ್ದರಂತೆ, ಅಲ್ಲದೆ ನಾಲ್ಕನೆಯ ಹೆಂಡತಿ ಇನ್ಸ್ಟಾಗ್ರಾಮ್, ಐದನೆಯ ಹೆಂಡತಿಯನ್ನು ಫೇಸ್ಬುಕ್ನಲ್ಲಿ ಮತ್ತು ಆರನೆಯ ಹೆಂಡತಿಯೊಂದಿಗೆ ಟಿಕ್ ಟಾಕ್ ನಲ್ಲಿ ಮಾತುಕತೆ ಆಯಿತ್ತಂತೆ. ತದನಂತರ ಒಂದು ದಿನ ತನ್ನ ತಾಯಿಯೊಂದಿಗೆ ಧಾರ್ಮಿಕ ಸ್ಥಳಕ್ಕೆ ಹೋಗುವ ಸಮಯದಲ್ಲಿ ಸೊರೋಟ್ ಅವರ ತಮ್ಮ ಏಳನೆಯ ಪತ್ನಿಯನ್ನು ಭೇಟಿಯಾದರು ಮತ್ತು ಅವರ ಎಂಟನೆಯ ಪತ್ನಿಯನ್ನು ಸುಟ್ಟಿಯಲ್ಲಿ ತಿರುಗಾಡಲು ಹೋದಾಗ ಅವರನ್ನು ಭೇಟಿಯಾಗಿದ್ದರು. ವಿಶೇಷ ವೆಂದರೆ ಎಂಟನೆಯ ಪತ್ನಿಯನ್ನು ಭೇಟಿಯಾದಾಗ ಅವರ ಜೊತೆಗೆ ಇನ್ನುಳಿದ ಪತ್ನಿಯರು ಸಹ ಉಪಸ್ಥಿತರಿದ್ದರು.
ವೀಡಿಯೋ ನೋಡಿ
Man shares single home with 8 #wives, lives happily. Man in #Thailand has shocked a lot of netizens after his story of living with eight young wives under the same roof went viral on social media. pic.twitter.com/9QU3DpB7Nj
— Dr. Sandeep Seth (@sandipseth) January 30, 2022
ವರದಿಯ ಪ್ರಕಾರ, ಸೊರೊಟ್‌ನ ಯಶಸ್ವಿ ದಾಂಪತ್ಯದ ರಹಸ್ಯವೆಂದರೆ ಅವನ ಕಾಳಜಿಯುಳ್ಳ ಸ್ವಭಾವ. ಅವನ ಎಲ್ಲಾ ಹೆಂಡತಿಯರು ಅವರು “ಬಹಳ ಕಾಳಜಿಯುಳ್ಳ ಮತ್ತು ಪ್ರೀತಿಯ ವ್ಯಕ್ತಿ” ಎಂದು ಸರ್ವಾನುಮತದಿಂದ ಒಪ್ಪಿಕೊಂಡಿದ್ದಾರೆ. ಹೆಂಡತಿಯರು ಸಹ ಪ್ರತಿಯೊಬ್ಬರು ಉತ್ತಮವಾಗಿ ಅವರ ಜೊತೆಗೆ ಸಂಬಂಧ ನಡೆಸುತ್ತಾರೆ ಹೀಗಾಗಿ ಅವರ ಜೊತೆಗೆ ಯಾವುದೇ ಪ್ರಕಾರದ ಜಗಳ ನಿರ್ಮಾಣ ವಾಗುವ ಮಾತೇ ಬರುವದಿಲ್ಲ, ನಾವೆಲ್ಲರೂ ಒಟ್ಟಿಗೆಯಿಂದ ಸಂತೋಷವಾಗಿ ಇದ್ದೇವೆ ಎಂದು ಆತನ ಎಲ್ಲ ಹೆಂಡತಿಯರು ತಿಳಿಸಿದ್ದಾರೆ.