ಈ ಅಜ್ಜಿಯ ಟಶನ್ ಮುಂದೆ ನ್ಯಾಷನಲ್ ಕ್ರಶ್ ರಶ್ಮಿಕಾಳು ಸಹ ಬೆಚ್ಚಿಬಿದ್ದಾಳು! ನೋಡಿ ಈ ವೈರಲ್ ವಿಡಿಯೋ…
‘ಸಾಮಿ ಸಾಮಿ’ ಈ ಪುಷ್ಪ ಚಿತ್ರದಲ್ಲಿಯ ರಶ್ಮಿಕಾ ಮಂದಣ್ಣ ಅವರ ಹಾಡಿನ ಮೇಲೆ ಸಿನಿರಂಗದ ನಟ ನಟಿಯರಿಂದ ಹಿಡಿದು ಸರ್ವಸಾಮಾನ್ಯ ಹುಡುಗಿಯರು ಸಹಿತ ಡಾನ್ಸ್ ಮಾಡಿ ತಮ್ಮ ಹವ್ಯಾಸವನ್ನು ಪೂರ್ಣಗೊಳಿಸಿ ಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಂತೂ ಈ ಹಾಡಿನ ಮೇಲೆ ಡಾನ್ಸ್ ಗಳ ಮಳೆಯೇ ಸುರಿಯುತ್ತಿದೆ. ಹಾಗೆ ನೋಡಲಾಗಿ ಈ ಹಾಡು ಚಿತ್ರ ಪ್ರದರ್ಶನಕ್ಕೂ ಮೊದಲೇ ಎಲ್ಲರನ್ನೂ ಹುಚ್ಚು ಮಾಡಿತ್ತು. ಈ ಹಾಡಿನಲ್ಲಿಯ ರಶ್ಮಿಕಾ ಅವರ ಅಭಿನಯ ಯುವವರ್ಗಕ್ಕಂತೂ ಹುಚ್ಚು ಹಿಡಿಸಿ ಬಿಟ್ಟಿದೆ. ಸದ್ಯ ಈ ಹಾಡಿನ ಕ್ರೇಜ್ ಕಡಿಮೆಯಾಗುವ ಹೆಸರೇ ತೆಗೆದುಕೊಳ್ಳುತ್ತಿಲ್ಲ. ಕಾರಣ ಈ ಹಾಡಿನ ಮೇಲೆ ಈಗ ಸುಮಾರು 80 ವರ್ಷದ ಅಜ್ಜಿಯು ಸಹ ಹೆಜ್ಜೆ ಹಾಕಿದ್ದಾರೆ. ಹೀಗಾಗಿ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ತುಂಬಾ ವೈರಲ್ ಆಗುತ್ತಿದೆ.
ಹಾಗೆ ನೋಡಲಾಗಿ ಈ ಅಜ್ಜಿಯು ಇನ್ಸ್ಟಾಗ್ರಾಮ್ ನಲ್ಲಿ ತುಂಬಾ ಚಿರಪರಿಚಿತರಾಗಿದ್ದಾರೆ. ಹಳ್ಳಿಯಲ್ಲಿ ವಾಸಿಸುವ ಈ ಅಜ್ಜಿಗೆ ಆಕೆಯ ಮೊಮ್ಮಗಳು ತುಂಬಾ ಪ್ರಸಿದ್ಧಿಯನ್ನು ತಂದುಕೊಟ್ಟಿದ್ದಾಳೆ. ಅಜ್ಜಿ ಮತ್ತು ಮೊಮ್ಮಗಳು ಇನ್ಸ್ಟಾಗ್ರಾಮ್ ನಲ್ಲಿ ಯಾವತ್ತು ಏನಾದರೂ ಹೊಸದೊಂದು ವಿಡಿಯೋ ಶೇರ್ ಮಾಡುತ್ತಲೇ ಇರುತ್ತಾರೆ. ಇನ್ಸ್ಟಾಗ್ರಾಮ್ ನಲ್ಲಿ ಬಿಂದಾಸ್ ಮುಲಗಿ ಹೆಸರಿನ ಅಕೌಂಟ್ ನಿಂದ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಸಾಮಿ ಸಾಮಿ ಈ ಹಾಡಿನ ಮೇಲೆ ಡಾನ್ಸ್ ಮಾಡೆಂದು ಮೊಮ್ಮಗಳು ಅಜ್ಜಿಗೆ ಒಂದೇಸಮನೆ ಗೋಳು ಹೊಯ್ದುಕೊಳ್ಳುತ್ತಾಳೆ. ಮೊದಮೊದಲು ಬೇಡ ಬೇಡ ಎಂದು ನಂತರ ಒಮ್ಮೆಲೆ ಅಜ್ಜಿಯು ತನ್ನ ಟಶನ್ ತೋರಿಸುತ್ತಾಳೆ. ಅಜ್ಜಿಯ ಡ್ಯಾನ್ಸ್ ಗೆ ನೇಟಿಜನ್ಸ್ ಗಳು ತುಂಬಾ ಫಿದಾ ಆಗಿದ್ದಾರೆ.
ವಿಡಿಯೋ ನೋಡಿ
ಇನ್ಸ್ಟಾಗ್ರಾಮ್ ನಲ್ಲಿ ಅಪ್ಲೋಡ್ ಮಾಡಿದ ನಂತರ ಈ ವಿಡಿಯೋಗೆ ಕೆಲವೇ ಗಂಟೆಗಳಲ್ಲಿ ಸಾಕಷ್ಟು ಲೈಕ್ಸ್ ಗಳು ಬಂದಿವೆ. ನೇಟಿಜನ್ಸ್ ಗಳು ಅಜ್ಜಿ ಮತ್ತು ಮೊಮ್ಮಗಳ ಈ ಜೋಡಿಗೆ ತುಂಬಾ ಲೈಕ್ ಮಾಡುತ್ತಿದ್ದಾರೆ. ಮೊಮ್ಮಗಳ ಹೆಸರು ಗೌರಿ ಪವಾರ್ ಇದ್ದು ಇನ್ಸ್ಟಾಗ್ರಾಮ್ ಜೊತೆಗೆ ಯೂಟ್ಯೂಬ್ನಲ್ಲಿಯೂ ಈಕೆ ಚಾನೆಲ್ ಒಂದನ್ನು ನಡೆಸುತ್ತಾಳೆ. ಈ ಕೆಲಸದಲ್ಲಿ ಗೌರಿಗೆ ಆಕೆಯ ಅಜ್ಜಿಯ ಸಹಾಯ ತುಂಬಾ ಆಗುತ್ತದೆ.