ಈ ಆನೆಯು ದಾಟಿ ಆಚೆಗೆ ಹೋಗಲು ಯತ್ನಿಸುವ ಪ್ರಯತ್ನಕ್ಕೆ ಯಶಸ್ಸು ಲಭಿಸುವುದೇ? ಉತ್ತರಕ್ಕಾಗಿ ನೋಡಿ ಈ ವೈರಲ್ ವಿಡಿಯೋ…!
ವನ್ಯಪ್ರಾಣಿಗಳ ಜಗತ್ತು ನಿಜಕ್ಕೂ ಅದ್ಭುತ ಮತ್ತು ಅದಮ್ಯ. ಇಲ್ಲಿ ಕ್ಷಣ ಕ್ಷಣಕ್ಕೂ ಸಾವು ಬದುಕಿನ ಹೋರಾಟ ನಡೆದೇ ಇರುತ್ತದೆ. ನಿಸರ್ಗವು ಎಲ್ಲ ಪ್ರಾಣಿಗಳಿಗೆ ತಕ್ಕಂತೆ ಬುದ್ಧಿ ಮತ್ತು ಶಕ್ತಿಯನ್ನು ದಯಪಾಲಿಸಿದೆ. ಈ ಪ್ರಾಣಿಗಳ ಬಗ್ಗೆ ಗೊತ್ತಿಲ್ಲದ ಅನೇಕ ಕುತೂಹಲಕರವಾದ ಸಂಗತಿಗಳು ಸೋಶಿಯಲ್ ಮೀಡಿಯಾ ಮುಖಾಂತರ ಈಗೀಗ ನಮ್ಮೆದುರು ಬರುತ್ತಿವೆ. ಅವುಗಳ ಬುದ್ಧಿ ಮತ್ತು ಶಕ್ತಿಯ ಬಗ್ಗೆ ನಮಗೆ ಪರಿಚಯವಾಗುತ್ತಿದೆ.
ಈಗ ಆನೆಯ ಇದೇ ರೀತಿಯ ವಿಡಿಯೋ ಒಂದು IFS ಅಧಿಕಾರಿಯಾದ ಸುಧಾ ರಾಮೇನ್ ಅವರು ತಮ್ಮ ಟ್ವೀಟರ್ ಅಕೌಂಟ್ ಮುಖಾಂತರ ಶೇರ್ ಮಾಡಿದ್ದಾರೆ. ಇಲ್ಲಿ ಆನೆಯು ತನ್ನ ಭಾರವಾದ ದೇಹವನ್ನು ಹೊತ್ತು ಅಲ್ಲಿ ಹಾಕಿರುವ ಎತ್ತರದ ಕಬ್ಬಿಣದ ಬ್ಯಾರಿಕೇಡ್ ನ್ನು ದಾಟುವ ಹರಸಾಹಸ ಮಾಡಿದೆ. ಆನೆಯ ಮಾಡುತ್ತಿರುವ ಈ ಪ್ರಯತ್ನವನ್ನು ನೋಡಿದಾಗ ಅಯ್ಯೋ ಪಾಪ ಎಂದು ಮನಸ್ಸಿಗೆ ನೋವಾಗುತ್ತದೆ. ಆದರೆ ಕೊನೆಗೆ ಆನೆಯು ಈ ಪ್ರಯತ್ನದಲ್ಲಿ ಸಫಲವಾಗೇ ಆಗುತ್ತದೆ. Nothing can actually block your way.. keep going! #Elephant ಎಂಬ ಕ್ಯಾಪ್ಶನ್ ಜೊತೆಗೆ ಸುಧಾ ಮ್ಯಾಡಮ್ ಅವರು ಈ ವಿಡಿಯೋ ಶೇರ್ ಮಾಡಿದ್ದಾರೆ. ಈ ದೃಶ್ಯವು ಬಂಡೀಪುರ ಅಭಯಾರಣ್ಯದಿಂದ ಸೆರೆ ಹಿಡಿಯಲಾಗಿದೆ.
ವೀಡಿಯೋ ನೋಡಿ
Nothing can actually block your way.. keep going! #Elephant
— Sudha Ramen 🇮🇳 (@SudhaRamenIFS) November 17, 2021
Somewhere near Bandipur video via @BoskyKhanna pic.twitter.com/W1FFWxj6i4
ನಿಜಕ್ಕೂ ಅದ್ಭುತವಾದ ಈ ವಿಡಿಯೋ ಆಗಿದೆ. ಆನೆಯು ಇದರಲ್ಲಿ ಸಫಲತೆ ಹೇಗೆ ಪಡೆದಿದೆ ನೋಡಿ ಈ ವಿಡಿಯೋದಲ್ಲಿ…