ಈ ಆರು ಜನ ರಿಯಲ್ ಲೈಫ್ ಪೋಲಿಸ್ ಅಧಿಕಾರಿಗಳ ಮುಂದೆ ಎಲ್ಲಾ ಸಿನಿಮಾ ನಟರು ಕೂಡಾ ಸಪ್ಪೆ ಎನಿಸಿಬಿಡುತ್ತಾರೆ! ಫೋಟೋ ನೋಡಿ
ಸಿನಿಮಾಗಳಲ್ಲಿ ಖಡಕ್ ಪೋಲಿಸ್ ಆಫೀಸರ್ ಗಳು ಅವರ ಹಾವ ಭಾವ, ಅವರ ಆ್ಯಕ್ಷನ್ ಸೀನ್ ಗಳು, ಅವರ ಕಟ್ಟು ಮಸ್ತಾದ ದೇಹ, ಖಡಕ್ ಡೈಲಾಗ್ ನೋಡಿ ಆ ಪಾತ್ರಗಳಲ್ಲಿ ಮಿಂಚಿದ ನಟರ ಅಭಿಮಾನಿಗಳಾಗುತ್ತಾರೆ ಅನೇಕ ಪ್ರೇಕ್ಷಕರು. ಈಗಾಗಲೇ ಭಾರತೀಯ ಸಿನಿಮಾ ರಂಗದಲ್ಲಿ ಹಲವು ನಟರು ತಮ್ಮ ಪೋಲಿಸ್ ಪಾತ್ರಗಳಿಂದಲೇ ತಮ್ಮನ್ನು ತಾವು ಗುರ್ತಿಸಿಕೊಂಡಿದ್ದು, ಆ ಪಾತ್ರಗಳ ಮೂಲಕ ವಿಶೇಷ ಮೆಚ್ಚುಗೆಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ ನಾವಿಂದು ನಿಮಗೆ ಕೆಲವು ರಿಯಲ್ ಲೈಫ್ ನಲ್ಲೂ ಯಾವುದೇ ಸಿನಿಮಾ ನಾಯಕರಿಗೆ ಕಡಿಮೆ ಇಲ್ಲ ಎನ್ನುವಂತೆ ಇರುವ ಪೋಲಿಸ್ ಅಧಿಕಾರಿಗಳ ಪರಿಚಯವನ್ನು ಮಾಡಿಕೊಡಲಿದ್ದೇವೆ. ಅವರನ್ನು ನೋಡಿದರೆ ಸಿನಿಮಾ ನಟರ ಬದಲು ಈ ರಿಯಲ್ ಲೈಫ್ ಕಾಪ್ಸ್ ಗಳ ಅಭಿಮಾನಿಗಳಾದರೂ ಆಶ್ಚರ್ಯ ಇಲ್ಲ.

೧. ಸಚಿನ್ ಅತುಲ್ ಕರ್ : ಸಚಿನ್ ಅವರು ಸೆಲೆಬ್ರಿಟಿ ಅಥವಾ ನಟ ಅಲ್ಲದ ಕಾರಣ ಅವರು ಲೋಕಪ್ರಿಯ ಅಥವಾ ಜನಪ್ರಿಯತೆಯನ್ನು ಪಡೆದಿಲ್ಲ. ಆದರೆ ಸಚಿನ್ ಅವರ ಮಸ್ತ್ ಲುಕ್ ಹಾಗೂ ಸದೃಢವಾದ ದೇಹ ಪ್ರತಿಯೊಬ್ಬರೂ ಅವರತ್ತ ನೋಡುವಂತೆ ಮಾಡುತ್ತದೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿಗಳ ಬಳಗವಿದೆ. ಐಪಿಎಸ್ ಅಧಿಕಾರಿಗಳಲ್ಲಿ ಅತ್ಯಂತ ಅಂದಗಾರನಾದ ಪೋಲಿಸ್ ಅಧಿಕಾರಿ ಎಂಬ ಹೆಗ್ಗಳಿಕೆ ಕೂಡಾ ಅವರದ್ದಾಗಿದೆ. ಇವರು ಮಧ್ಯಪ್ರದೇಶದವರಾಗಿದ್ದು, 22 ನೇ ವಯಸ್ಸಿಗೆ ಪೋಲಿಸ್ ಅಧಿಕಾರಿಯಾದವರು.

೨. ರೂಬಲ್ ದನ್ ಖಡ್ : ದೆಹಲಿ ಪೋಲಿಸ್ ಇಲಾಖೆಯಲ್ಲಿ ಕಾನ್ಸ್‌ಟೇಬಲ್ ಆಗಿರುವ ಇವರು ಒಮ್ಮೆ ತಮ್ಮ ಕಟ್ಟುಮಸ್ತಾದ ಬಾಡಿಯನ್ನು ತೋರಿಸದ ಮೇಲೆ ಸಿಕ್ಕಾಪಟ್ಟೆ ಫೇಮಸ್ ಆದರು. ಇವರ ಜನಪ್ರಿಯತೆ ಯಾವ ಮಟ್ಟಕ್ಕೆ ಹೋಯಿತೆಂದರೆ ರಿಯಾಲಿಟಿ ಶೋ ರೋಡೀಸ್ 4 ನಲ್ಲಿ ಭಾಗವಹಿಸಲು ಅವಕಾಶವನ್ನು ಪಡೆದುಕೊಂಡಿದ್ದರು. ರೋಡಿಸ್ ಶೊ ನಲ್ಲಿ ತಮ್ಮ ಕ್ರಿಯಾಶೀಲತೆ ಹಾಗೂ ಉತ್ತಮ ಸ್ಪರ್ಧಿಯಾಗಿ ದೊಡ್ಡ ಮಟ್ಟದ ಹೆಸರನ್ನು ಇವರು ತಮ್ಮದಾಗಿಸಿಕೊಂಡರು ಹಾಗೂ ಜನಪ್ರಿಯತೆ ತಮ್ಮದಾಗಿಸಿಕೊಂಡರು.

೩. ಕಿಶೋರ್ ಡಾಂಗೆ: ಮಹಾರಾಷ್ಟ್ರದ ಜಾಲ್ನಾ ನಿವಾಸಿ ಇವರು. ಬಡತನದಲ್ಲೇ ಬೆಳೆದ ಇವರು ತಮ್ಮ ದೃಢ ನಿಶ್ಚಯ ಮತ್ತು ಕಠಿಣವಾದ ಶ್ರಮದಿಂದ ಪೋಲಿಸ್ ಅಧಿಕಾರಿಯಾದವರು. ಕಿಶೋರ್ ಡಾಂಗೆ ಅವರಿಗೆ ಕೂಡಾ ಸೋಶಿಯಲ್ ಮೀಡಿಯಾ ದಲ್ಲಿ ದೊಡ್ಡ ಅಭಿಮಾನಿಗಳ ಬಳಗವೇ ಇದೆ. ಅದು ಮಾತ್ರವೇ ಅಲ್ಲದೇ ಕಿಶೋರ್ ಅವರು ಫಿಟ್ನೆಸ್ ನಲ್ಲಿ ಹಲವು ದಾಖಲೆಗಳನ್ನು ಕೂಡಾ ಮಾಡಿದ್ದಾರೆ ಎನ್ನುವುದು ಅನೇಕರಿಗೆ ತಿಳಿದೇ ಇಲ್ಲ. ಮಿಸ್ಟರ್ ಮಹಾರಾಷ್ಟ್ರ, ಮಿಸ್ಟರ್ ಮರಾಠಾವಾಡಾ ಎನ್ನುವ ಪ್ರಶಸ್ತಿಗಳನ್ನು ಕೂಡಾ ಪಡೆದಿದ್ದಾರೆ.

೪. ಮೋತಿಲಾಲ್ ದಯಾಮಾ: 2012 ರಲ್ಲಿ ಇವರು ಪೋಲಿಸ್ ಇಲಾಖೆಗೆ ಕಾನ್ಸ್‌ಟೇಬಲ್ ಆಗಿ ಇಟ್ಟವರು.
ತಮ್ಮ ಕಟ್ಟುಮಸ್ತಾದ ಬಾಡಿಯಿಂದಲೇ ಅವರು ಅನೇಕರಿಗೆ ಪ್ರೇರಣೆ ಆದವರು ಮೋತಿಲಾಲ್. ಇವರು ಇಂದೋರ್ ನ ಪೋಲಿಸ್ ಇಲಾಖೆಯಲ್ಲಿ ತಮ್ಮ ಸೇವೆಯನ್ನು ಸಲ್ಲಿಸುತ್ತಿದ್ದಾರೆ. ಇವರು ಕೂಡಾ ಮೂಲತಃ ಗ್ರಾಮವೊಂದರಿಂದ ಬಂದವರು. ಇವರು 201೦-11ರಲ್ಲಿ ಗಾರ್ಡ್ ಆಪ್ ಆನರ್ ಜೊತೆಗೆ ಆರ್ ಡಿಸಿ ರಿಟರ್ನ್ ಆಗಿದ್ದಾರೆ. ಕೆಡೆಟ್ ಕೋರ್ಸ್ ನ ಸಿ ಸರ್ಟಿಫಿಕೇಟ್ ಹೋಲ್ಡರ್ ಕೂಡಾ ಆಗಿದ್ದಾರೆ ಮೋತಿಲಾಲ್.

೫. ತೇಜಿಂದರ್ ಸಿಂಗ್: ಇವರು ಬಾಡಿ ಬಿಲ್ಡಿಂಗ್ ನಲ್ಲಿ ಮೊದಲಿನಿಂದಲೂ ಕೂಡಾ ದೊಡ್ಡ ಹೆಸರನ್ನು ಮಾಡಿದ್ದವರು. ದೇಶ ಸೇವೆಯನ್ನು ಮಾಡುವ ಆಸೆ ಹಾಗೂ ಗುರಿಯೊಂದಿಗೆ ಅವರು 2006 ರಲ್ಲಿ ಭಾರತೀಯ ಪೋಲಿಸ್ ಸೇವೆಗೆ ಸೇರಿಕೊಂಡರು. ಅವರ ಕಟ್ಟುಮಸ್ತಾದ ದೇಹ ಅನೇಕರಿಗೆ ಸ್ಪೂರ್ತಿ ಆಗಿರುವುದು ಕೂಡಾ ನಿಜ. ಪೋಲಿಸ್ ಅಧಿಕಾರಿಯಾಗುವವರು ಹೀಗೆ ಹುರಿಗೊಳಿಸಿದ ದೇಹವನ್ನು ಹೊಂದಿರಬೇಕು ಎನ್ನುವುದು ತೇಜಿಂದರ್ ಸಿಂಗ್ ಅವರ ಅಭಿಪ್ರಾಯವಾಗಿದ್ದು, ತಮ್ಮ ಬಾಡಿ ಫಿಟ್ನೆಸ್ ಗೆ ಅವರು ಹೆಚ್ಚಿನ ಗಮನವನ್ನು ಸದಾ ನೀಡುತ್ತಾರೆ.

೬. ನವೀನ್ ಕುಮಾರ್ : ಇವರು ಪೋಲಿಸ್ ಇಲಾಖೆಯಲ್ಲಿ ಡೆಪ್ಯುಟಿ ಕಮೀಷನರ್ ಆಗಿದ್ದಾರೆ. 2013 ರಲ್ಲಿ ಮಿಸ್ಟರ್ ಹರಿಯಾಣ ಎನ್ನುವ ಪ್ರಶಸ್ತಿ ಕೂಡಾ ಪಡೆದಿದ್ದಾರೆ ನವೀನ್ ಕುಮಾರ್ ಅವರು. ಅವರು ಬಾಡಿ ಬಿಲ್ಡ್ ಮಾಡುವುದಕ್ಕೆ ಬಹಳ ಶ್ರಮವಹಿಸಿರುವುದಾಗಿ ಹೇಳುತ್ತಾರೆ ಹಾಗೂ ಕನಿಷ್ಠ ಎಂಟು ಗಂಟೆಗಳ ಕಾಲ ವ್ಯಾಯಾಮ ಮಾಡುತ್ತಿದ್ದೆ ಎಂದು ಕೂಡಾ ಹೇಳಿದ್ದಾರೆ. ಈಗಲೂ ಕೂಡಾ ಫಿಟ್ನೆಸ್ ಗೆ ಸಾಕಷ್ಟು ಮಹತ್ವ ನೀಡುವ ಅವರು ಸೋಶಿಯಲ್ ಮೀಡಿಯಾ ದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಪಡೆದಿದ್ದಾರೆ ಕೂಡಾ.
ಈಗ ಹೇಳಿ ತೆರೆಯ ಮೇಲಿನ ರೀಲ್ ಪೋಲಿಸ್ ರಿಗಿಂತ ರಿಯಲ್ ಲೈಫ್ ನ ಈ ಪೋಲಿಸ್ ಅಧಿಕಾರಿಗಳು ಯಾವುದೇ ಕಾರಣಕ್ಕೂ ಕೂಡಾ ಅವರಿಗಿಂತ ಕಡಿಮೆ ಇಲ್ಲ ಎಂದು. ನಿಜಕ್ಕೂ ಪೋಲಿಸ್ ಹುದ್ದೆಗೆ ಹುರಿಗೊಳಿಸಿದ ದೇಹ ಹಾಗೂ ಕಠಿಣ ಶ್ರಮ ಪಡುವ ಈ ಅಧಿಕಾರಿಗಳು ಅನೇಕರಿಗೆ ಸ್ಪೂರ್ತಿ ಆಗಿರುವುದು ಇದೇ ಕಾರಣದಿಂದ ಎನ್ನುವುದು ಒಪ್ಪಲೇ ಬೇಕಾದ ವಿಷಯವಾಗಿದೆ.