‘ಈ’ ಐಎಎಸ್ ಯುವತಿಯ ಎಂಟ್ರಿ ನೋಡಿದರೆ ಮೈ ಜುಂ ಎನ್ನುತ್ತೆ!
ಭಾರತೀಯ ಕುಟುಂಬಗಳಲ್ಲಿ ಹೆಣ್ಣು ಮಗು ಜನ್ಮಕ್ಕೆ ಬಂದರೆ ಹೆಚ್ಚು-ಕಡಿಮೆ ಎಲ್ಲರೂ ಬೇಸರವನ್ನೇ ವ್ಯಕ್ತಪಡಿಸುತ್ತಾರೆ. ಕಾಲಕ್ಕೆ ತಕ್ಕಂತೆ ಈಗೀಗ ಯುವಪೀಳಿಗೆಯ ವಿಚಾರಗಳಲ್ಲಿ ಸ್ವಲ್ಪ ಬದಲಾವಣೆಯಂತೂ ಕಂಡುಬರುತ್ತಿದೆ, ನಿಜಕ್ಕೂ ಇದು ಒಂದು ಒಳ್ಳೆಯ ಬದಲಾವಣೆಯಂದೇ ಹೇಳಬಹುದು. ಹಳೆಯ ಜನರ ಮತ್ತು ಅವರ ವಿಚಾರಗಳ ಪ್ರಕಾರ ಹೆಣ್ಣು ಮಗು ಯಾರಿಗೂ ಬೇಡವಾಗಿರುತ್ತದೆ. ಇದಕ್ಕೆ ಹೇಳುವ ಒಂದೇ ಒಂದು ಕಾರಣ ವಂಶದ ಕುಡಿಯನ್ನು ಮುಂದುವರಿಸುವುದು ಹೇಗೆ? ವಂಶದ ದೀಪವನ್ನು ಮುಂದೆವರೆಸಿಕೊಂಡು ಹೋಗಲು ಗಂಡು ಮಗನೇ ಬೇಕೆಂದು ಜನರ ತಿಳುವಳಿಕೆ ಮತ್ತು ಪ್ರಬಲವಾದ ನಂಬಿಕೆಯಾಗಿದೆ.
ಆದರೆ ಹೆಣ್ಣುಮಕ್ಕಳಿಗೂ ಸಹಿತ ಸರಕಾರ ಈಗ ಸಾಕಷ್ಟು ಅವಕಾಶಗಳನ್ನು ನೀಡುತ್ತಿದೆ. ಇದರಲ್ಲಿ ಮೀಸಲಾತಿ ಮತ್ತು ಹಕ್ಕುಗಳು ಶಾಮೀಲಾಗಿವೆ. ಈಗ ಹುಡುಗಿಯರು ಯಾವುದೇ ಕ್ಷೇತ್ರದಲ್ಲಿ ಹುಡುಗರಿಗೆ ಸಮಾನವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸುತ್ತಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲಿ ನಮಗೆ ಹುಡುಗಿಯರು ಹುಡುಗರ ಹಾಗೆ ಕೆಲಸ ಮಾಡುತ್ತಿರುವದನ್ನು ನೋಡುತ್ತಿದ್ದೇವೆ. ಹುಡುಗಿಯರು ಬೇರೆ ಬೇರೆ ಫೀಲ್ಡ್ ಗಳಲ್ಲಿ ದೊಡ್ಡ ದೊಡ್ಡ ಜವಾಬ್ದಾರಿಗಳನ್ನು ಹೊತ್ತು ಕೆಲಸ ಮಾಡುತ್ತಿದ್ದಾರೆ. ಇದೇ ರೀತಿಯ ಒಬ್ಬರು ಐಎಎಸ್ ಆಗಿ ದೇಶದ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸುತ್ತಿರುವ ಮಹಿಳೆಯ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳುವ.
ಈ ಐಎಎಸ್ ಮಹಿಳೆಯ ಹೆಸರು ಸ್ಮಿತಾ ಸಬರವಾಲ್. ಇವರ ಈ ಕೆಳಗಿನ ವಿಡಿಯೋವನ್ನು ನೋಡಿದಾಗ ನೋಡುಗರಿಗೆ ನಿಜಕ್ಕೂ ಹೆಮ್ಮೆಯೆನಿಸುತ್ತದೆ. ಈ ವಿಡಿಯೋದಲ್ಲಿ ಈ ಮಹಿಳೆಗೆ ಎಲ್ಲರೂ ಸಲ್ಯೂಟ್ ನೀಡುತ್ತಿದ್ದಾರೆ. ಇವರು ಸ್ವಾಭಿಮಾನದಿಂದ ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ಅವರ ತೊಟ್ಟ ಉಡುಪುಗಳನ್ನು ನೋಡಿದರೆ ತಮ್ಮ ಕೆಲಸಕ್ಕೆ ತಮ್ಮ ಕ್ಷೇತ್ರಕ್ಕೆ ಸರಿ ಹೊಂದಿಕೊಂಡಿರತಕ್ಕಂಥ ಮತ್ತು ಒಪ್ಪುವಂತಹ ಉಡುಪುಗಳನ್ನೇ ತೊಟ್ಟು ಕೊಂಡಿದ್ದಾರೆ. ಇದರ ಮೇಲಿಂದ ಅವರ ಸಾಮಾಜಿಕ ಭಾವನೆಗಳ ಬಗ್ಗೆ ಇರುವ ಜ್ಞಾನವು ಗೊತ್ತಾಗುತ್ತದೆ. ಸ್ಮಿತಾ ಇವರು ತೆಲಂಗಾಣದಲ್ಲಿ ಐಎಎಸ್ ಆಫೀಸರ್ ಆಗಿದ್ದಾರೆ. ಇವರು ನೋಡಲು ಎಷ್ಟೊಂದು ಸುಂದರವಾಗಿದ್ದರೋ ಅಷ್ಟೇ ಬುದ್ಧಿವಂತರೂ ಕೂಡ ಇದ್ದಾರೆ.

ಒಬ್ಬಳು ಮಹಿಳೆಗೆ ಪುರುಷ ಇನ್ಸಪೆಕ್ಟರ್ರ್ ಸೆಲ್ಯೂಟ್ ಹೊಡೆಯುತ್ತಾರೆ ಎಂದರೇ ಯಾವ ಮಹಿಳೆಗೆ ಬೇಡವೆನಿಸುತ್ತಿದೆ ನೀವೇ ಹೇಳಿ. ಅವರ ತಂದೆ-ತಾಯಿಗೂ ಎಷ್ಟೊಂದು ಗರ್ವ, ಅಭಿಮಾನ ಮೂಡುತ್ತಿರಬಹುದು. ತಮ್ಮ ಮಗಳು ಎತ್ತರದ ಸ್ಥಾನದಲ್ಲಿ ದೇಶದ ಸೇವೆಯನ್ನು ಮಾಡುತ್ತಿದ್ದಾರೆಂದರೆ ತಂದೆ-ತಾಯಿಗೆ ಇದು ಅಭಿಮಾನದ ವಿಷಯವೇ ಸರಿ.
ಸ್ಮಿತಾ ಅವರ ಮೊದಲ ಪೋಸ್ಟಿಂಗ್ ಚಿತ್ತೂರ್ ನಲ್ಲಿ ಸಬ್ ಪೊಲೀಸ್ ಎಂದು ಆಗಿತ್ತು. ಜನಸಾಮಾನ್ಯರ ಕಲ್ಯಾಣಕ್ಕಾಗಿ ಅನೇಕ ಪ್ರಾಜೆಕ್ಟ್ ಗಳನ್ನು ಕೈಗೆತ್ತಿಕೊಂಡರು. ಇದಕ್ಕಾಗಿ ಅವರಿಗೆ ಪ್ರೈ ಮಿನಿಸ್ಟರ್ ಎಕ್ಸಲೆಂಟ್ ಅವಾರ್ಡ್ ಸಹಿತ ಸಿಕ್ಕಿದೆ.
ಇಂದು ಸ್ಮಿತಾ ಅವರು ತೆಲಂಗಾಣದ ಉಪಮುಖ್ಯ ಮಂತ್ರಿಗಳ ಸೆಕ್ರೆಟರಿ ಎಂದು ಕೆಲಸ ಮಾಡುತ್ತಿದ್ದಾರೆ. ಇವರು ದೇಶದ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಮನೆಯ ಜವಾಬ್ದಾರಿಯನ್ನು ಸಹಿತ ನಿರ್ವಹಿಸುತ್ತಾರೆ. ಇವರ ಮದುವೆಯಾಗಿ ಒಂದು ಹುಡುಗ ಮತ್ತು ಒಂದು ಹುಡುಗಿ ಹೀಗೆ ಸುಂದರ ಕುಟುಂಬವಿದೆ. ಇವರು ಐಪಿಎಸ್ ಆಫೀಸರ್ ಆದ ಅಕುಲ್ ಸಬರವಾಲ್ ಜೊತೆಗೆ ಮದುವೆಯಾಗಿದ್ದಾರೆ.
ವಿಡಿಯೋ ನೋಡಿ….