‘ಈ’ ಐಡಿಯಾ ಯೂಸ್ ಮಾಡಿ ‘ಅವರು’ ನನ್ನನ್ನು ಒನ್ ಡೇ ತಂಡದಿಂದ ಹೊರ ಹಾಕಿದರು – ರಾಹುಲ್ ದ್ರಾವಿಡ್

ಭಾರತದ ಮಹಾನ್ ಬ್ಯಾಟ್ಸ್ಮನ್ ಎಂದೇ ಖ್ಯಾತಿ ಪಡೆದ ‘ದ ವಾಲ್’ ರಾಹುಲ್ ದ್ರಾವಿಡ್ ಇವರು ತಮ್ಮ ಸಂಯಮ, ಜಿದ್ದು, ಸಾತತ್ಯತೆ ಇವುಗಳ ಉತ್ತಮ ಉದಾಹರಣೆ ಎಂದೇ ಹೇಳಬಹುದು. ಇವರ ಕರಿಯರ್ ತುಂಬಾ ದೊಡ್ಡದಿದೆ. ತಮ್ಮ ಕ್ರಿಕೆಟ್ ಜೀವನದಲ್ಲಿ ಅನೇಕ ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದು ಕೊಂಡಿದ್ದಾರೆ. ಇಷ್ಟೆಲ್ಲ ದಾಖಲೆಗಳನ್ನು ಮಾಡುವಾಗ ಅನೇಕ ಏರುಪೇರುಗಳನ್ನು ನೋಡಿದ್ದಾರೆ. ಇದರಲ್ಲಿ ಒಂದು ಇವರ ಕಷ್ಟದ ಕಾಲವೆಂದರೆ 1998 ರಲ್ಲಿ ಭಾರತದ ಏಕದಿನ ತಂಡದಲ್ಲಿಂದ ಕೈ ಬಿಡುವದು.

ಆ ಸಮಯದ ಟೀಮ್ ಸೆಲೆಕ್ಷನ್ ಬೋರ್ಡ್ ರಾಹುಲ್ ಅವರಿಗೆ ಟೆಸ್ಟ್ ಆಟಗಾರನೆಂದೇ ಬಿಂಬಿಸಿದ್ದರು. ಹೀಗಾಗಿ ಇದೇ ಕಾರಣವನ್ನು ಮುಂದೆ ಮಾಡಿ ಏಕದಿನ ಪಂದ್ಯಗಳಿಗೆ ರಾಹುಲ್ ಅವರ ಬ್ಯಾಟಿಂಗ್ ಅನುಕೂಲವಿಲ್ಲವೆಂದು ಹೇಳಿ ತಂಡದಿಂದ ಕೈ ಬಿಟ್ಟರು.

ಅದಾದನಂತರ ಎರಡನೆಯ ವರ್ಷದಲ್ಲಿಯೇ ಅಂದ್ರೆ 1999 ರಲ್ಲಿ ಮತ್ತೆ ತಂಡದಲ್ಲಿ ದ್ರಾವಿಡ್ ಅವರ ಮರು ಆಯ್ಕೆಯಾಯಿತು. ಅದೇ ವರ್ಷ ಇಂಗ್ಲೆಂಡನಲ್ಲಿ ವಿಶ್ವ ಕಪ್ ಟೂರ್ನಿ ನಡೆಯುವದಿತ್ತು. ಆ ಟೂರ್ನಿಯಲ್ಲಿ ರಾಹುಲ್ ಅವರು ಇಡೀ ವಿಶ್ವ ಕಪ್ ಟೂರ್ನಿಯಲ್ಲೇ ಎಲ್ಲರಿಗಿಂತಲೂ ಹೆಚ್ಚು ರನ್ ಗಳನ್ನು ಸೇರಿಸಿ ಸೆಲೆಕ್ಷನ್ ಬೋರ್ಡ್ ಮತ್ತು ತಮ್ಮ ಮೇಲೆ ಟೀಕೆ ಮಾಡುವವರಿಗೆ ತಮ್ಮ ಬ್ಯಾಟ್ ನಿಂದಲೇ ಉತ್ತರ ಕೊಟ್ಟರು.

ಈ ವಿಷಯವನ್ನು ರಾಹುಲ್ ಅವರು
ಇತ್ತೀಚೆಗೆ ಭಾರತದ ಮಾಜಿ ಬ್ಯಾಟ್ಸ್ಮನ್ ಡಬ್ಲ್ಯೂ.ವಿ. ರಾಮನ್ ಅವರ ಜೊತೆಗಿನ ವಿಶೇಷ ಸಂದರ್ಶನದಲ್ಲಿ ನೆನಪಿಸಿಕೊಂಡಿದ್ದಾರೆ.

1998 ರ ಸಮಯದಲ್ಲಿ ಒಂದು ವರ್ಷ ಕ್ರಿಕೆಟ್ ನಿಂದ ಹೊರಗಿದ್ದಾಗ ಮರಳಿ ಟೀಮ್ ನಲ್ಲಿ ಬರಲು ತುಂಬಾ ಪ್ರಯತ್ನ ಪಡಬೇಕಾಯಿತು. ಮುಖ್ಯವಾಗಿ ನನಗೆ ದೊರೆತ ಕೋಚಿಂಗ್ ಸಹ ಹಾಗೆಯೇ ಇತ್ತು. ಬಾಲ್ ಯಾವತ್ತೂ ಕೆಳಗಿನಿಂದಲೇ ಹೊಡೆಯಬೇಕು, ಹವೆಯಲ್ಲಿ ಹೊಡೆಯಲೇಬಾರದು ಹೀಗೆ.

ಒಂದು ವರ್ಷದ ಮಟ್ಟಿಗೆ ಟೀಮ್ ನಿಂದ ಹೊರಗುಳಿದರೂ ಸಹಿತ ದ್ರಾವಿಡ್ ಅವರು ಒನ್ ಡೇ ಪಂದ್ಯದಲ್ಲಿ 10,000 ರನ್ ಗಳ ಮೈಲಿಗಲ್ಲನ್ನು ದಾಟಿದ ಭಾರತದ ಮೂರನೆಯ ಬ್ಯಾಟ್ಸ್ಮನ್ ಆದರು. ಇವರಿಗಿಂತ ಮೊದಲು ಸುನಿಲ್ ಗಾವಸ್ಕರ್ ಮತ್ತು ಸಚಿನ್ ತೆಂಡೂಲ್ಕರ್ ಅವರು ಈ ಸ್ಥಾನದಲ್ಲಿದ್ದರು.

ರೀಟಾಯರ್ಡ್ ಆದ ನಂತರ ಏನು ಮಾಡಬೇಕೆಂಬ ತುಮುಲದಲ್ಲಿದ್ದಾಗ ಮಾಜಿ ನಾಯಕ ಕಪಿಲ್ ದೇವ್ ಅವರು ನನಗೆ ಈ ಐಡಿಯಾ ಕೊಟ್ಟರು. ಅವರ ಸಲಹೆಯಿಂದ ಈಗ ನನಗೆ ಹೊಸ ದಿಕ್ಕು ಸಿಕ್ಕಿತು. ಈಗ ಕ್ರಿಕೆಟ್ ಪ್ರಶಿಕ್ಷಕನಾದೆನು, ಎಂದು ಡಬ್ಲ್ಯೂ.ವಿ. ರಾಮನ್ ಅವರ ಜೊತೆಗಿನ ಸಂದರ್ಶನದಲ್ಲಿ ಹೇಳಿದರು.