ಈ “ಒಂದು” ಕಾರಣದಿಂದ ಸುಶಾಂತ್ ನಿರಾಕರಿಸಿದ್ದರು 15 ಕೋಟಿ ರೂಪಾಯಿಗಳ ಜಾಹೀರಾತು.!!

ಕಳೆದ ಅನೇಕ ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ವಿವಿಧ ಪ್ರಶ್ನೆಗಳು ಉದ್ಭವವಾಗುತ್ತಿವೆ. ಅದರಲ್ಲಿಯ ಒಂದು ವಿಷಯ ಫೆಯರ್’ನೆಸ್ ಕ್ರೀಮ್ ಕುರಿತು. ಈ ಸಂಗತಿ ಸಾಮಾನ್ಯ ಜನರಿಂದ ಹಿಡಿದು ಅನೇಕ ದಿಗ್ಗಜರು ಇದರ ವಿವಾದದಲ್ಲಿದ್ದಾರೆ. ಈ ಸಂದರ್ಭದಲ್ಲಿ ಮತ್ತೊಂದು ಸುದ್ದಿ ಬೆಳಕಿಗೆ ಬಂದಿದೆ. ಇದನ್ನು ಕೇಳಿ ಸುಶಾಂತ್ ಸಿಂಗ್ ರಜಪೂತ್ ಅವರ ಅಭಿಮಾನಿಗಳು ಖುಷಿ ಪಡುವರು. ಸುಶಾಂತ್ ಸಿಂಗ್ ರಜಪೂತ್ ಅವರು ಫೆಯರ್ ನೆಸ್ ಕ್ರೀಮ್ ನ ಜಾಹೀರಾತನ್ನು ಮಾಡಲು ನಿರಾಕರಿಸಿದ್ದರಂತೆ.

ಈ ಜಾಹೀರಾತಿನ ಸಲುವಾಗಿ ಅವರಿಗೆ 15 ಕೋಟಿ ರೂಪಾಯಿಗಳ ಆಫರ್ ಕೊಟ್ಟಿದ್ದರಂತೆ. ಆದರೆ ಸುಶಾಂತ್ ಸಿಂಗ್ ಅವರು ಈ ಕುರಿತು ಜಾಹಿರಾತು ಮಾಡಲು ನಿರಾಕರಿಸಿದ್ದರಂತೆ. ಸುಶಾಂತ್ ಅವರ ಹೊರತುಪಡೆಸಿ ಫೆಯರ್ ನೆಸ್ ಕ್ರೀಮ್ ಕಂಪೆನಿಯೊಂದಿಗೆ ಅನೇಕ ಕಲಾವಿದರು ಜೊತೆಗೂಡಿದ್ದಾರೆ. ಆ ಪಟ್ಟಿಯಲ್ಲಿ ಕಂಗನಾ ರಣಾವತ್, ಅನುಷ್ಕಾ ಶರ್ಮಾ, ಅಭಯ್ ದೇವೋಲ್, ಪ್ರಿಯಾಂಕ ಚೋಪ್ರಾ, ಸ್ವರಾ ಭಾಸ್ಕರ್, ರಣಬೀರ್ ಕಪೂರ್, ಕಲ್ಕಿ ಕೋಚೆಲಿನ್ ಮತ್ತು ರಣದೀಪ್ ಹುಡ್ಡಾ ಇವರ ಸಮಾವೇಶವಿದೆ.

ಇಲ್ಲಿ ಒಂದು ವಿಷಯ ಮಾತ್ರ ತುಂಬಾ ವಿಚಾರ ಮಾಡುವಂತದ್ದಾಗಿದೆ ಅದೇನೆಂದರೆ, ಸುಶಾಂತ್ ಅವರಿಗೆ ಈ ಜಾಹಿರಾತು ಮಾಡುವ ಸಲುವಾಗಿ 15 ಕೋಟಿ ರೂಪಾಯಿಗಳ ಆಫರ್ ಕೊಡಲಾಗಿತ್ತು, ಆದರೂ ಸುಶಾಂತ್ ಅವರು ಏನನ್ನು ವಿಚಾರ ಮಾಡದೆ ಈ ದೊಡ್ಡ ಮೊತ್ತದ ಆಫರ್’ನ್ನು ನಿರಾಕರಿಸಿದರು. ಸುಶಾಂತ್ ಅವರು ಈ ಕುರಿತು ಹೇಳಿದ್ದೇನೆಂದರೆ, ನಾವು ಇತರರಿಗೆ ಸ್ಪೋರ್ತಿಯಾಗಬೇಕೆ ಹೊರೆತು ಯಾವುದೇ ನಕಾರಾತ್ಮಕ ಸಂದೇಶ ನೀಡಬಾರದು, ಯಾವುದೇ ಜಾಹಿರಾತು ಮಾಡುವದಕ್ಕಿಂತ ಮುಂಚೆ ಅದು ಜನರಿಗೆ ಒಳ್ಳೆಯ ಸಂದೇಶ ನೀಡುವದಿದ್ದರೆ ಸಲೀಸಾಗಿ ಮಾಡಬೇಕು ಹೊರೆತು ಅದು ಜನರಿಗೆ ತಪ್ಪಾದ ಮಾಹಿತಿ ನೀಡುವ ಜಾಹೀರಾತು ಇದ್ದರೆ ಅದನ್ನು ಮಾಡಬಾರದು ಎಂಬುದೇ ನನ್ನ ಅನಿಸಿಕೆಯಾಗಿದೆ.

ಆದ್ದರಿಂದಲೇ ಅವರು ಫೆಯರ್ ನೆಸ್ ಕ್ರೀಮ್ ಕಂಪನಿಯ ಜಾಹೀರಾತಿನ ಕೆಲಸ ಮಾಡಲು ನಿರಾಕರಿಸಿದರು. ಸುಶಾಂತ್ ಅವರು ಒಂದು ದೊಡ್ಡ ಕನಸನ್ನೇ ಕಟ್ಟಿಕೊಂಡಿದ್ದರು. ಸುಶಾಂತ್ 34 ನೇ ವಯಸ್ಸಿನಲ್ಲಿ ಯಾವುದೇ ಸುಳ್ಳು ಭರವಸೆಗಳಿಲ್ಲದೆ ಸಾಕಷ್ಟು ಸಾಧನೆ ಮಾಡಿದ್ದರು. ಅವರ ಈ ಪರಿಶ್ರಮ ಕಿರುಪರದೆಯಿಂದ ದೊಡ್ಡ ಪರದೆಯವರೆಗಿನ ಪ್ರವಾಸ ತುಂಬಾ ಅಭಿಮಾನಾಸ್ಪದವಾಗಿತ್ತು.

ಗೆಳೆಯರೇ ನಿಮಗೆ ಈ ಲೇಖನ ಇಷ್ಟವಾದರೆ ಲೈಕ್ ಮಾಡಿ ಮತ್ತು ನಿಮ್ಮ ಇನ್ನಿತರ ಗೆಳೆಯರೊಂದಿಗೆ ಶೇರ್ ಮಾಡಿ ಹಾಗೆ ನಿಮ್ಮ ಪ್ರತಿಕ್ರಿಯೆ ಕಾಮೆಂಟ್ ಮೂಲಕ ನಮಗೆ ತಿಳಿಸಿ.