‘ಈ’ ಕಾರಣಗಳಿಂದ ಗುಜರಾತಿನ ಕತ್ತೆಗಳನ್ನು ಜಗತ್ತಿನಲ್ಲಿಯೇ ‘ಉತ್ತಮವೆಂದು’ ಎಂದು ತಿಳಿಯಲಾಗುತ್ತದೆ!

ಕತ್ತೆ ಎಂದರೆ ಹುಚ್ಚ, ಪೆದ್ದ, ಮಬ್ಬ, ಅರಿವಿಲ್ಲದ, ಜ್ಞಾನವಿಲ್ಲದ ಹೀಗೆ ಇನ್ನು ಅನೇಕ ಉಪಮೆಗಳನ್ನು ನೀಡುತ್ತಾರೆ. ಆದರೆ ಇದೇ ಕತ್ತೆ ಗಂಟೆಗೆ 80 ಕಿಲೋಮೀಟರ್ ವೇಗದಲ್ಲಿ ಓಡುತ್ತದೆ ಎಂದರೆ ನಿಜವೆನಿಸುತ್ತಾ?

ಹೌದು ಗುಜರಾತಿನ ಈ ಕತ್ತೆಗಳನ್ನು ಒಮ್ಮೆ ನೋಡಿದರೆ ಮತ್ತೊಮ್ಮೆ ನೀವೆಂದಿಗೂ ಯಾರಿಗೂ ಕತ್ತೆ ಎಂದು ಬೈಯುವುದಿಲ್ಲ. ಈ ಕಾಡಿನ ಕತ್ತೆಗಳಿಗೆ ಇಂಡಿಯನ್ ವಾಯಿಲ್ಡ್ ಏಸ್ ಎಂತಲೂ ಕರೆಯುತ್ತಾರೆ.

ದಕ್ಷಿಣ ಏಷಿಯಾದಲ್ಲಿ ಅಂದರೆ ಭಾರತದಲ್ಲಿ ಈ ಕತ್ತೆಗಳ ಪ್ರಜಾತಿ ಹೆಚ್ಚಾಗಿ ಕಂಡುಬರುತ್ತದೆ. ಭಾರತದ ಜೊತೆಗೆ ಪಾಕಿಸ್ತಾನ, ಈರಾಣ, ಇಸ್ರೇಲ್, ಮಂಗೋಲಿಯ, ಟಿಬೆಟ್ ಮತ್ತು ಸೌದಿ ಅರೇಬಿಯಾದಲ್ಲಿ ಈ ಪ್ರಾಣಿಗಳು ಅತಿ ವಿರಳ ಪ್ರಮಾಣದಲ್ಲಿ ಕಂಡುಬರುತ್ತವೆ. ನಮ್ಮ ಆಫ್ರಿಕನ್ ಕತ್ತೆಗಳಿಗಿಂತಲೂ ಈ ಕತ್ತೆಗಳು ಸ್ವಲ್ಪ ಬಣ್ಣ ಮತ್ತು ಕಾಣಿಸುವದರಲ್ಲಿ ಬೇರೆಯಾಗಿರುತ್ತವೆ. ಇವುಗಳ ಬೆನ್ನಮೇಲೆ ಇರುವ ವಿಶೇಷವಾದ ಕೂದಲಿನ ಬಿಳುಪು ಬಣ್ಣದ ಪಟ್ಟೆಗಳಿಂದ ಗುರುತಿಸಲ್ಪಡುತ್ತವೆ.

ಕಚ್ಚದ ರಣದಲ್ಲಿ ಇವುಗಳ ಸಂಖ್ಯೆ ತುಂಬಾ ಹೆಚ್ಚಿದೆ. ಇದರ ಜೊತೆಗೆ ಸುರೇಂದ್ರನಗರ ಮತ್ತು ಮೇಹಸಾನಾ ಜಿಲ್ಲೆಯಲ್ಲಿಯೂ ಈ ಪ್ರಜಾತಿ ಕಂಡುಬರುತ್ತದೆ.

ಈ ಕತ್ತೆಗಳು ತುಂಬಾ ಚಪಲವಾಗಿರುತ್ತವೆ. ಈಗ ಇವುಗಳ ಸಂಖ್ಯೆಯಲ್ಲಿ ತುಂಬಾ ಕಡಿಮೆಯಾಗುತ್ತಿದೆ. ಇವು ಚಪಲ ಪ್ರಾಣಿಗಳಾಗಿರುವುದರಿಂದ ಹಿಂದಿನ ಕಾಲದಲ್ಲಿ ರಾಜರು ಇವುಗಳನ್ನು ಬೆನ್ನಟ್ಟಿ ಬೇಟೆಯಾಡುತ್ತಿದ್ದರು. ಇವುಗಳ ಬೇಟೆಯಾಡುವದು ಅಂದರೆ ರಾಜರಿಗೆ ತುಂಬಾ ಮಜಾ ಬರುತ್ತಿತ್ತು. ಜೀಪಿನ ಮುಖಾಂತರವೂ ಇವುಗಳಿಗೆ ಬೆನ್ನಟ್ಟುವುದು ಅಷ್ಟೊಂದು ಸುಲಭವಲ್ಲ. ದೆಹಲಿಯ ಅಕ್ಬರ್ ರಾಜನು ಸಹ ತನ್ನ ಎಷ್ಟು ಪೇಂಟಿಂಗ್ ಗಳನ್ನು ಇದೇ ಕತ್ತೆಗಳಿಗೆ ಬೇಟೆಯಾಡುವಾಗಲೇ ಚಿತ್ರಿಸಿ ಕೊಂಡಿದ್ದಾನೆ. ಈ ಎಲ್ಲ ಕಾರಣಗಳಿಂದಾಗಿ ಈ ಕತ್ತೆಗಳ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಹುಲ್ಲುಗಾವಲು ಇಲ್ಲದ ಪ್ರದೇಶದಲ್ಲಿ ಹಾಗೂ 59 ಡಿಗ್ರಿ ಸೆಲ್ಸಿಯಸ್ ನಲ್ಲಿ ಈ ಪ್ರಾಣಿಯು ಅಲ್ಲಿಯ ವಾತಾವರಣಕ್ಕೆ ಹೊಂದಿಕೊಂಡು ಇರುತ್ತದೆ.

ಒಂದಾನೊಂದು ಸಮಯದಲ್ಲಿ ಇವುಗಳ ಗುಂಪು ಸಾವಿರಾರು ಸಂಖ್ಯೆಗಳಲ್ಲಿ ಇರುತ್ತಿತ್ತು. 1958-59 ರಲ್ಲಿ ಕಚ್ಚದಲ್ಲಿ ಪಸರಿಸಿದ ರೋಗದಿಂದಾಗಿ ಸಾವಿರಾರು ಕತ್ತೆಗಳು ಅಸುನೀಗಿದವು. ಆ ಸಮಯದಲ್ಲಿಯಂತೂ ಈ ಪ್ರಜಾತಿಯೇ ನಷ್ಟವಾಗುತ್ತದೆ ಎಂಬ ಭಯ ಆವರಿಸಿತ್ತು. ಅದರ ಮುಂದಿನ ವರ್ಷವೇ ಆಫ್ರಿಕನ್ ಕುದುರೆಗಳ ಜ್ವರದ ರೋಗ ಹರಡಿತು. ಆಗಲೂ ಈ ಕತ್ತೆಗಳು ಸಾಕಷ್ಟು ಪ್ರಮಾಣದಲ್ಲಿ ಸತ್ತವು.

1956 ರಲ್ಲಿ ಇವುಗಳ ಸಂಖ್ಯೆ ಸುಮಾರು 4000 ಗಳವರೆಗೆ ಇತ್ತು. ಮುಂದೆ 1962 ರಲ್ಲಿ ಈ ಸಂಖ್ಯೆ ಕಡಿಮೆಯಾಗಿ ಒಮ್ಮೆಲೆ 870 ಕ್ಕೆ ಬಂದಿತು. ಮುಂದೆ 1972 ರಲ್ಲಿ ಈ ಕತ್ತೆಗಳಿಗಾಗಿ ಸಮುದ್ರದ ಬದಿಯಲ್ಲಿಯೇ ಉಪ್ಪಿನಿಂದ ತುಂಬಿದ ಮರಳು ಪ್ರದೇಶದಲ್ಲಿ ಒಂದು ಅಭಯಾರಣ್ಯವನ್ನು ನಿರ್ಮಿಸಲಾಯಿತು.

ಇದೇ ವರ್ಷ ವೈಲ್ಡ್ ಲೈಫ್ ಪ್ರೋಟೆಕ್ಷನ್ ಆಕ್ಟ್ ತಯಾರಿಸಲಾಯಿತು. ಈ ಪ್ರಾಣಿಗಳಿಗಾಗಿ 4954 ಚದರ ಅಡಿ ಭೂಭಾಗವನ್ನು ಮೀಸಲಿಡಲಾಯಿತು.

ಅದರ ನಂತರ 2016ರಲ್ಲಿ ಈ ಪ್ರದೇಶದಲ್ಲಿ ಒಟ್ಟು 15000 ಪ್ರವಾಸಿಗರು ಸುತ್ತಾಡಲು ಹೋಗಿದ್ದರು. ಈ ಭಾಗದ ಜಾಹೀರಾತು ಸ್ವತಃ ಮಹಾನಾಯಕ ಅಮಿತಾಬಚ್ಚನ್ ಅವರೇ ಮಾಡುತ್ತಾರೆ. ಹೇಗೆ ಹೇಗೆ ಬೇಟೆಯಾಡುವದರ ಮೇಲೆ ನಿರ್ಬಂಧನೆಗಳು ಬಂದವು ಅಂದಿನಿಂದ ಈ ಪ್ರಾಣಿಗಳ ಸಂಖ್ಯೆಯಲ್ಲಿ ಹೆಚ್ಚಳವಾಗತೊಡಗಿತು. ಆದರೆ ಈಗ ಜಗತ್ತಿನ ತಾಪಮಾನ ಹೆಚ್ಚಾಗುತ್ತಿರುವುದರಿಂದ ಈ ಪ್ರಾಣಿಗಳಿಗೆ ಸಮಸ್ಯೆ ಬಂದಿದೆ. ಅದರ ಜೊತೆಗೆ ಆ ಭಾಗವು ಪಾಕಿಸ್ತಾನದ ಬಾರ್ಡರ್ ಸಮೀಪ ಇರುವುದರಿಂದ ಇಲ್ಲಿ ಅನೇಕ ಸಮಸ್ಯೆಗಳು ಪಾಕಿಸ್ತಾನ ನಿರ್ಮಾಣ ಮಾಡುತ್ತಿರುತ್ತದೆ. ಅವರು ಮಾಡುವ ಫೈರಿಂಗ್ ನಿಂದ ಎಷ್ಟೋ ಸಲ ಈ ಪ್ರಾಣಿಗಳು ಸಹಿತ ಹತ್ಯೆಗೊಳಗಾಗಿವೆ.

ಅಂತರಾಷ್ಟ್ರೀಯ ರಿಪೋರ್ಟ್ ಪ್ರಕಾರ ಈ ಕತ್ತೆಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿದೆ. 2009 ರ ಗಣನೆಯ ಪ್ರಕಾರ 4038 ಕತ್ತೆಗಳು ಇದ್ದವು. ಮುಂದೆ ಡಿಸೆಂಬರ್ 2014 ರ ಪ್ರಕಾರ ಇವುಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿ 4451 ರಷ್ಟು ಆಯಿತು. ಹೀಗಾಗಿ ಈ ವಿಶೇಷ ಕತ್ತೆಗಳ ಸಂರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ ಜೊತೆಗೆ ಮಾನವನದ್ದು ಆಗಿದೆ.