‘ಈ’ ಕಾರಣದಿಂದ ಬಾಲಿವುಡ್ ನಿಂದ ದೂರ ಉಳಿದು ತಮ್ಮ ಫಾರ್ಮ್ ಹೌಸ್ ನಲ್ಲಿ ವ್ಯವಸಾಯ ಮಾಡುತ್ತಿದ್ದಾರೆ ಬಾಲಿವುಡ್ ನಟ ಧರ್ಮೇಂದ್ರ!

ಕಳೆದ 60 ವರ್ಷಗಳಿಂದ ಬಾಲಿವುಡ್ನಲ್ಲಿ ನಟನೆಯ ಮುಖಾಂತರ ತಮ್ಮದೇ ಆದ ವಿಶೇಷ ಛಾಪು ಮೂಡಿಸಿದ್ದಾರೆ. ನಮ್ಮದೇ ಆದ ರಾಮನಗರದಲ್ಲಿ ಶೂಟಿಂಗ್ ಆದ ಹಿಂದಿಯ ಬ್ಲಾಕ್ ಬ್ಲಸ್ಟರ್ ಫಿಲಂ ಶೋಲೆ ಚಲನಚಿತ್ರದಿಂದ ಹೆಚ್ಚು ಪ್ರಸಿದ್ಧಿಯನ್ನು ಪಡೆದರು. ಇದೇ ಚಿತ್ರದ ಮುಖಾಂತರ ಧರ್ಮೇಂದ್ರ ಮತ್ತು ಹೇಮಮಾಲಿನಿ ಇವರಿಬ್ಬರು ತುಂಬಾ ಸಮೀಪ ಬರಲು ಕಾರಣವಾಯಿತು. ನಂತರ ಧರ್ಮೇಂದ್ರ ಅವರು ಹೇಮಮಾಲಿನಿ ಅವರಿಗೆ ಮದುವೆಯಾಗಿ ಎರಡನೇ ಪತ್ನಿಯನ್ನಾಗಿ ಸ್ವೀಕರಿಸಿದರು. ಸದ್ಯ ಧರ್ಮೇಂದ್ರ ಅವರು 85 ವರ್ಷದವರಾಗಿದ್ದರೂ ಬಾಲಿವುಡ್ ನಲ್ಲಿ ಇನ್ನು ತಮ್ಮ ವರ್ಚಸ್ಸನ್ನು ಕಾಯ್ದುಕೊಂಡಿದ್ದಾರೆ.

ಸುಮಾರು ದಿನಗಳಿಂದ ಧರ್ಮೇಂದ್ರ ಅವರು ತಮ್ಮ ಲೋನಾವಾಲದಲ್ಲಿರುವ ಫಾರ್ಮ್ ಹೌಸ್ ನಲ್ಲಿ ದಿನಗಳನ್ನು ಕಳೆಯುತ್ತಿದ್ದಾರೆ. ಲಾಕ್ಡೌನ್ ಸಮಯದಲ್ಲಿಯೂ ಧರ್ಮೇಂದ್ರ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿಯೇ ಉಳಿದುಕೊಂಡಿದ್ದರು. ಮೂಲತ: ಪಂಜಾಬಿ ಕುಟುಂಬದವರಾಗಿದ್ದರಿಂದ ಇವರಿಗೆ ಮೊದಲಿನಿಂದಲೂ ಹೊಲ ತೋಟದ ಬಗ್ಗೆ ಮತ್ತು ಅಲ್ಲಿ ಕೆಲಸ ಮಾಡುವ ಬಗ್ಗೆ ತುಂಬಾ ಆಸಕ್ತಿ ಇದೆ. ಹೀಗಾಗಿ ಸದ್ಯ ನಿಸರ್ಗದ ಜೊತೆಗೆ ನಿಸರ್ಗದ ಮಡಿಲಿನಲ್ಲಿ ಆರಾಮಾಗಿ ಜೀವನ ತೆಗೆಯುತ್ತಿದ್ದಾರೆ.

ಸುದ್ದಿ ಮಾಧ್ಯಮಗಳ ಪ್ರಕಾರ ಧರ್ಮೇಂದ್ರ ಅವರ ಫಾರ್ಮ್ ಹೌಸ್ ಸುಮಾರು 35 ಕೋಟಿ ರೂಪಾಯಿಗಳ ಬೆಲೆಯುಳ್ಳದ್ದು ಇದೆ. ಬಾಲಿವುಡ್ ಸೆಲೆಬ್ರಿಟಿಗಳ ದುಬಾರಿ ಫಾರಂ ಹೌಸ್ ಗಳಲ್ಲಿ ಇದು ಸಹ ಒಂದಾಗಿದೆ. ಈ ಫಾರ್ಮ್ ಹೌಸ್ ನಲ್ಲಿ ಎಲ್ಲಾ ಸೌಲಭ್ಯಗಳಿಂದ ಸುಸಜ್ಜಿತವಾದ ಸುಂದರವಾದ ಮನೆಯೂ ಇದೆ. ಈ ಬಂಗಲೆಯು ಸುಮಾರು 25 ಕೋಟಿ ರೂಪಾಯಿಗಳದ್ದಾಗಿದೆ. ಈ ಬಂಗಲೆಯಲ್ಲಿರುವ ಎಲ್ಲ ವಸ್ತುಗಳು ಕಟ್ಟಿಗೆಯಿಂದಲೇ ಮಾಡಲಾಗಿದೆ.

ಧರ್ಮೇಂದ್ರ ಅವರು ತಮ್ಮ ಫಾರ್ಮ್ ಹೌಸ್ ನಲ್ಲಿ ರೆಸ್ಟ್ ತೆಗೆದುಕೊಳ್ಳುವುದರ ಜೊತೆಗೆ ತೋಟದಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ. ಇಲ್ಲಿ ಬೇರೆ ಬೇರೆ ಪ್ರಕಾರದ ತರಕಾರಿ, ಬೆಳೆ ಹಾಗೂ ಹಣ್ಣುಗಳ ಉತ್ಪಾದನೆಗಳನ್ನು ಮಾಡುತ್ತಾರೆ. ಜೋಳ, ಗೋಧಿ ವಿವಿಧ ರೀತಿಯ ಹಣ್ಣುಗಳನ್ನು ಮತ್ತು ಬೇರೆ-ಬೇರೆ ತರಕಾರಿ ಬೆಳೆದು ಇವುಗಳನ್ನೆಲ್ಲ ತಮ್ಮ ಮನೆಗಾಗಿಯೇ ಹಾಗೂ ತಮ್ಮ ದೈನಂದಿನ ಜೀವನದಲ್ಲಿ ಉಪಯೋಗಿಸಿಕೊಳ್ಳುತ್ತಾರೆ.

ಇದರ ಜೊತೆಗೆ ಧರ್ಮೇಂದ್ರ ಅವರ ಫಾರ್ಮ್ ಹೌಸ್ ನಲ್ಲಿ ವಿವಿಧ ತಳಿಯ ಹಸುಗಳು ಮತ್ತು ಎಮ್ಮೆಗಳು ಇವೆ. ಇಲ್ಲಿ ಪಶುಪಾಲನೆಯು ಸಹಿತ ಮಾಡಲಾಗುತ್ತದೆ. ಧರ್ಮೇಂದ್ರ ಅವರು ಹೇಳುವ ಪ್ರಕಾರ ಇಲ್ಲಿ ಈ ಫಾರ್ಮ್ ಹೌಸ್ ನಲ್ಲಿ ಇರುವುದರಿಂದ ನನಗೆ ನನ್ನ ಊರಲ್ಲಿದ್ದ ಅನುಭವ ಸಿಗುತ್ತದೆ ಎಂದೆನ್ನುತ್ತಾರೆ.

ಈ ಎಲ್ಲ ಕಾರಣಗಳಿಂದ ಧರ್ಮೇಂದ್ರ ಅವರು ತಮ್ಮ ಕುಟುಂಬವನ್ನು ಬಿಟ್ಟು ಸದ್ಯ ಲೋಣಾವಲಾ ಫಾರ್ಮ್ ಹೌಸ್ ನಲ್ಲಿ ತಮ್ಮ ಜೀವನವನ್ನು ರೈತನಾಗಿ ಖುಷಿಯಿಂದ ಕಳೆಯುತ್ತಿದ್ದಾರೆ. ಅವರ ಇಬ್ಬರು ಹೆಂಡತಿಯರಾದ ಪ್ರಕಾಶ್ ಕೌರ್ ಹಾಗೂ ಹೇಮಾಮಲಿನಿ ಮತ್ತು ಮಕ್ಕಳಾದ ಸನ್ನಿ ಹಾಗೂ ಬಾಬಿ ಡಿಯೋಲ್ ಅವರು ಸಹ ಆಗಾಗ್ಗೆ ಫಾರ್ಮ ಹೌಸ್ ಗೆ ಬೇಟಿ ಕೊಡುತ್ತಿರುತ್ತಾರೆ.