‘ಈ’ ಕಾರಣದಿಂದ ಹುಟ್ಟುತ್ತವೆ ಅವಳಿ ಮಕ್ಕಳು! ಇದರ ಹಿಂದಿನ ಕಾರಣ ತಿಳಿದುಕೊಳ್ಳಿ!
ತಾಯಿಯಾಗುವ ಆನಂದ ಪ್ರತಿಯೊಂದು ಮಹಿಳೆಗೆ ನಾರಿಯ ಪೂರ್ಣತ್ವವನ್ನು ಕಲ್ಪಿಸಿಕೊಡುತ್ತದೆ. ಪ್ರತಿಯೊಂದು ಮಹಿಳೆಯು ತಾಯಿಯಾಗುವ ಕನಸನ್ನು ನನಸಾಗಿ ಮಾಡಿಕೊಳ್ಳಲು ಇಚ್ಛಿಸುತ್ತಾಳೆ.
ಒಂಬತ್ತು ತಿಂಗಳುಗಳವರೆಗೆ ಮಗುವನ್ನು ಹೊತ್ತು ಹೆತ್ತಾಗ ಮಹಿಳೆಯರ ಪುನರ್ಜನ್ಮವಾಗುತ್ತದೆ ಎಂದು ಹಿರಿಯರು ಹೇಳುತ್ತಾರೆ. ಆದರೂ ಮಹಿಳೆಯರಿಗೆ ತಾಯಿಯಾಗುವ ಸುಖವು ಬೆಟ್ಟದಷ್ಟು ಸಂತೋಷವನ್ನು ನೀಡುತ್ತದೆ.
ಅನೇಕ ಸಲ ಕೆಲವರಿಗೆ ಅವಳಿ ಮಕ್ಕಳು ಹುಟ್ಟುತ್ತಾರೆ. ಹುಟ್ಟಿದ ಅವಳಿ ಮಕ್ಕಳಲ್ಲಿ ತುಂಬಾ ಸಾಮ್ಯತೆಗಳಿರುವುದನ್ನು ನೋಡುತ್ತೇವೆ. ಈ ಲೇಖನದಲ್ಲಿ ಅವಳಿ ಮಕ್ಕಳ ಗರ್ಭಧಾರಣೆಯ ಪ್ರಾರಂಭದಲ್ಲಿ ಕಂಡುಬರುವ ಲಕ್ಷಣಗಳು ಯಾವುವು ಎಂಬುವುದನ್ನು ಹೇಳಿದ್ದೇವೆ. ನೋಡಿ ಅವು ಯಾವವು ಅಂತ.
ಗರ್ಭಾವಸ್ಥೆಯಲ್ಲಿರುವ ಮಹಿಳೆಗೆ ಅನೇಕ ಸಮಸ್ಯೆಗಳು ಇರುತ್ತವೆ. ಇವುಗಳಲ್ಲಿ ಹೆಚ್ಚಾಗಿ ವಾಂತಿಯಾಗುವುದು ಮತ್ತು ಹೊಟ್ಟೆಯಲ್ಲಿ ತಳಮಳ ವಾಗುವುದು ನಡೆದಿರುತ್ತದೆ. ಒಂದು ವೇಳೆ ಅವಳಿ ಮಕ್ಕಳ ಗರ್ಭಧಾರಣೆ ಆಗಿದ್ದರೆ ಈ ಮೇಲೆ ಹೇಳಿದ ಸಮಸ್ಯೆಗಳು ಬಹಳ ದಿನಗಳವರೆಗೆ ನಡೆದಿರುತ್ತದೆ.
ಈ ರೀತಿಯ ಗರ್ಭವತಿ ಮಹಿಳೆಯರಲ್ಲಿ ಅಧಿಕ ರಕ್ತಸ್ರಾವಾಗುವ ಸಂಭವವಿರುತ್ತದೆ. ಕೆಲವು ಸಲ ಜ್ವರ ಬರುವುದು ಸಾಮಾನ್ಯವಾಗಿದೆ.
ಹೆರಿಗೆ ಸಮಯ ಸಮೀಪಿಸಿದಂತೆ ಅವಳಿ ಮಕ್ಕಳ ಹೃದಯ ಬಡಿತ ಬೇರೆ ಬೇರೆಯಾಗಿ ಕೇಳಿಸುತ್ತವೆ. ಆದರೆ ಒಂದೇ ಸಮಯದಲ್ಲಿ ಎರಡು ಮಕ್ಕಳ ಹೃದಯ ಬಡಿತವನ್ನು ಕೇಳುವುದು ತುಂಬಾ ಕಷ್ಟದ ಕೆಲಸವಾಗಿದೆ. ಆದರೆ ಹೆರಿಗೆ ಸಿಜರಿಯನ್ ಸ್ವರೂಪದಲ್ಲಿ ಆಗುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಇನ್ನೊಂದು ಕಾರಣ ಹೇಳಬೇಕೆಂದರೆ ಮಹಿಳೆಯು 30 ರಿಂದ 40 ವಯಸ್ಸಿನಲ್ಲಿ ಗರ್ಭವತಿಯಾದರೆ ಅಂಥವರಿಗೆ ಅವಳಿ ಮಕ್ಕಳಾಗುವ ಸಂಭವ ಹೆಚ್ಚಾಗಿರುತ್ತದೆ.
ಅವಳಿ ಮಕ್ಕಳ ಗರ್ಭಧಾರಣೆ ಮತ್ತು ಸಾಮಾನ್ಯ ಗರ್ಭಧಾರಣೆ ಇವೆರಡರಲ್ಲಿ ಅಂತಹ ವ್ಯತ್ಯಾಸವೇನು ಇರುವುದಿಲ್ಲ. ಗರ್ಭಧಾರಣೆಯ ಸಾಮಾನ್ಯ ಲಕ್ಷಣಗಳು ಕಂಡುಬಂದರೂ ಅವಳಿ ಗರ್ಭಧಾರಣೆಯಲ್ಲಿ ಮಾತ್ರ ಮಹಿಳೆಗೆ ಹೆಚ್ಚು ಕಾಳಜಿ ಮತ್ತು ಜಾಗ್ರತೆ ತೆಗೆದುಕೊಳ್ಳುವುದು ತುಂಬಾ ಅತ್ಯವಶ್ಯಕವಾಗಿದೆ.
ವಿಶೇಷ ಸೂಚನೆ:- ಮಿತ್ರರೇ, ಅವಳಿ ಮಕ್ಕಳ ಸಂದರ್ಭವಾಗಿ ಇಲ್ಲಿ ನೀಡಿದ ಮಾಹಿತಿ ಪ್ರಾಥಮಿಕ ಸ್ವರೂಪದ್ದಾಗಿದೆ. ಈ ಮಾಹಿತಿಯು ವೈದ್ಯರು ನೀಡುವ ಮಾಹಿತಿಗೆ ಪೂರಕ ವಾಗಿರಬಹುದು ಅಥವಾ ಇಲ್ಲದೆಯೂ ಇರಬಹುದು. ಅವಳಿ ಮಕ್ಕಳ ಬಗ್ಗೆ ಕಂಡುಬಂದ ಪ್ರಾಥಮಿಕ ಸ್ವರೂಪದ ಲಕ್ಷಣಗಳನ್ನು ಆಧಾರವಾಗಿಟ್ಟುಕೊಂಡು ಮಾಹಿತಿ ನೀಡಲಾಗಿದೆ. ಈ ರೀತಿಯ ಯಾವುದೇ ಮಾಹಿತಿಗಳನ್ನು ಅನುಸರಿಸುವ ಮೊದಲು ನಿಮ್ಮ ಡಾಕ್ಟರುಗಳಿಗೆ ಭೇಟಿಯಾಗುವ ತುಂಬಾ ಉಚಿತ.