ಈ ಕೂಡಲೇ ವಾಟ್ಸಾಪ್ ನ ಸೆಟ್ಟಿಂಗ್ಸ್ ನಲ್ಲಿ ಈ ಬದಲಾವಣೆ ಮಾಡಿ, ಇಲ್ಲದಿದ್ರೆ ನಿಮ್ಮ ಅಕೌಂಟ್ ಹ್ಯಾಕ್ ಆಗುವ ಸಾಧ್ಯತೆಗಳಿವೆ
ಬಹುಶಃ ವಾಟ್ಸಾಪ್ ಇಲ್ಲದೇ ಇರುವ ಸ್ಮಾರ್ಟ್ ಫೋನ್ ಗಳು ಬಹಳ ವಿರಳ ಎನ್ನಬಹುದು. ಇತ್ತೀಚಿನ ದಿನಗಳಲ್ಲಿ ವಾಟ್ಸಾಪ್ ಇಲ್ಲದೆ ಅನೇಕರಿಗೆ ದಿನ ಕಳೆಯುವುದು ಕೂಡಾ ಕಷ್ಟ ಎನಿಸುತ್ತದೆ. ಹಾಗಾದರೆ ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ಬೇರೆ ಯಾರೂ ಕೂಡಾ ಹ್ಯಾಕ್ ಮಾಡಬಾರದು ಎನ್ನುವ ಆಲೋಚನೆ ಇದ್ದರೆ, ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕರ್ಸ್ ನಿಂದ ಸೇಫ್ ಆಗಿ ಇಡಬೇಕೆಂದರೆ ಈ ಕೂಡಲೇ ಕೆಲವು ಸೆಟ್ಟಿಂಗ್ ಗಳಲ್ಲಿ ವಿಶೇಷ ಬದಲಾವಣೆಗಳನ್ನು ಮಾಡುವ ಕಡೆಗೆ ನಿಮ್ಮ ಗಮನ ಹರಿಸಲೇಬೇಕಾದ ಅಗತ್ಯವಿದೆ. ಇತ್ತೀಚಿಗೆ ಹ್ಯಾಕರ್ಸ್ ಗಳು ಅನ್ಯರ ವಾಟ್ಸಾಪ್ ಖಾತೆಯನ್ನು ಅಕ್ಸೆಸ್ ಮಾಡುವ ಸಲುವಾಗಿ ಹೊಸ ಮಾರ್ಗವೊಂದನ್ನು ಕಂಡುಕೊಂಡಿದ್ದಾರೆ. ಸೈಬರ್ ಸೆಕ್ಯುರಿಟಿ ಎಕ್ಸ್ ಪರ್ಟ್
ಝಾಕ್ ಡೊಫ್ಮನ್ ಹೇಳುವ ಪ್ರಕಾರ ಈ ಹೊಸ ವಿಧಾನದ ಮೂಲಕ ಹ್ಯಾಕರ್ಸ್ ತಮ್ಮ ಡಿವೈಸ್ ನಲ್ಲಿ ನಿಮ್ಮ ವಾಟ್ಸಾಪ್ ಲಾಗಿನ್ ಮಾಡಲು ಸಾಧ್ಯವಾಗುತ್ತದೆ.
ಸೈಬರ್ ಎಕ್ಸ್ ಪರ್ಟ್ ಗಳು ಈ ವಿಚಾರದ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ. ಸಾಮಾನ್ಯವಾಗಿ ನೀವು ಯಾವುದಾದರೂ ಹೊಸ ಡಿವೈಸ್ ನ ಮೂಲಕ ವಾಟ್ಸಾಪ್ ಲಾಗಿನ್ ಮಾಡಿದಾಗ ವಾಟ್ಸಾಪ್ ನಿಮ್ಮ ನೋಂದಾಯಿತ ಮೊಬೈಲ್ ನಂಬರ್ ಗೆ ಒಂದು ವೆರಿಫಿಕೇಶನ್ ಎಸ್ ಎಂ ಎಸ್ ಅನ್ನು ಕಳುಹಿಸುತ್ತದೆ. ಅಕಸ್ಮಾತ್ ನಿಮ್ಮ ಫೋನ್ ಯಾರಾದರೂ ವಂ ಚ ಕ ಅಥವಾ ಚಾಲಾಕಿ ವ್ಯಕ್ತಿಯ ಬಳಿ ಇತ್ತು ಎಂದರೆ, ನೀವು ಸೆಟ್ಟಿಂಗ್ಸ್ ನಲ್ಲೇನಾದರೂ ಎಸ್ ಎಮ್ ಎಸ್ ನ ಪ್ರಿವ್ಯೂ ಲಾಕ್ ಸ್ಕ್ರೀನ್ ಮೇಲೆ ನೋಡುವಂತೆ ಸೆಟ್ಟಿಂಗ್ ಮಾಡಿದ್ದರೆ ಆಗ ನೀವು ನಿಜಕ್ಕೂ ಅ ಪಾ ಯ ವನ್ನು ಆಹ್ವಾನ ಮಾಡಿದಂತೆ ಆಗುವುದು ಎನ್ನುವುದನ್ನು ಮರೆಯಬೇಡಿ.
ಇಷ್ಟೇ ಅಲ್ಲ, ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಮಾಲ್ ವೇರ್ ಗಳು ಕೂಡಾ ಬಂದಿದ್ದು ಇವುಗಳ ಸಹಾಯದಿಂದ ಹ್ಯಾಕರ್ಸ್ ಗಳು ಬಹಳ ದೂರದಲ್ಲೇ ಕುಳಿತುಕೊಂಡು ಕೂಡಾ ನಿಮ್ಮ ಡಿವೈಸ್ ಗೆ ಬರುವ ಆರು ಸಂಖ್ಯೆಗಳ ಕೋಡನ್ನು ಪಡೆಯಲು ಸಾಧ್ಯವಿದೆ.
ನೀವು ಈ ಕೋಡ್ ಅನ್ನು ನಮೂದಿಸಿದ ಕೂಡಲೇ ಅವರು ಕೂಡಾ ತಮ್ಮ ಡಿವೈಸ್ ನ ಮೂಲಕ ನಿಮ್ಮ ವಾಟ್ಸಾಪ್ ಖಾತೆಗೆ ಲಾಗಿನ್ ಮಾಡಲು ಸಾಧ್ಯವಾಗುತ್ತದೆ. ನಿಮ್ಮ ವಾಟ್ಸಾಪ್ ನಲ್ಲಿ ಲಾಗಿನ್ ಮಾಡುವ ಮೂಲಕ ಈ ವಂ ಚ ಕರು ನಿಮ್ಮ ಸಂಪರ್ಕದಲ್ಲಿ ಇರುವ ವ್ಯಕ್ತಿಗಳ ಬಳಿ ಹಣವನ್ನು ಕೇಳಬಹುದು. ಕಳೆದ ವರ್ಷ ಇಂತಹುದೊಂದು ಹಗರಣದ ಬಗ್ಗೆ ಲಂಡನ್ ನ ಮಾದ್ಯಮವೊಂದು ವರದಿ ಮಾಡಿತ್ತು ಎನ್ನಲಾಗಿದೆ.

ಇತ್ತೀಚಿಗೆ ಇಂತಹ ಮೋ ಸ ದ ಪ್ರಕರಣಗಳ ಸಂಖ್ಯೆಯು ಹೆಚ್ಚುತ್ತಿದ್ದು, ಇಂತಹ ವಂಚನೆಗಳಿಂದ ನಮ್ಮನ್ನು ನಾವು ರಕ್ಷಣೆಯನ್ನು ಮಾಡಿಕೊಳ್ಳಲು ವಾಟ್ಸಾಪ್ ನಲ್ಲಿ ಕೆಲವು ಸೆಟ್ಟಿಂಗ್ ಗಳನ್ನು ಮಾಡಿಕೊಳ್ಳುವ ಮೂಲಕ ಜಾಗೃತಿಯನ್ನು ವಹಿಸಲು ಸಾಧ್ಯವಿದೆ. ವಾಟ್ಸಾಪ್ ನಲ್ಲಿ ಬಳಕೆದಾರರಿಗೆ ಟು ಸ್ಟೆಪ್ಸ್ ವೆರಿಫಿಕೇಷನ್ ಎನ್ನುವ ವಿಶಿಷ್ಟ ಸೌಲಭ್ಯ ಒಂದನ್ನು ನೀಡಲಾಗಿದೆ. ಇದರಲ್ಲಿ ನಿಮಗೆ ಆರು ಅಂಕಿಗಳ ಒಂದು ವಿಶಿಷ್ಟ ಕೋಡನ್ನು ಸೆಟ್ ಮಾಡಬೇಕಾಗುತ್ತದೆ. ಈ ಸೌಲಭ್ಯದ ಪ್ರಯೋಜನ ಏನೆಂದರೆ ನೀವು ಯಾವುದೇ ಹೊಸ ಡಿವೈಸ್ ನಿಂದ ನಿಮ್ಮ ವಾಟ್ಸಾಪ್ ಲಾಗಿನ್ ಮಾಡಿದಾಗ ಅಲ್ಲಿ ಅದು ನಿಮ್ಮನ್ನು ಈಗಾಗಲೇ ಸೆಟ್ ಮಾಡಿರುವ ಆರು ಅಂಕಿಗಳ ಕೋಡನ್ನು ಕೇಳುತ್ತದೆ.
ಈ ಕೋಡ್ ಅನ್ನು ಯಾವಾಗ ಬೇಕಾದರೂ ಬಳಸಬಹುದಾಗಿದೆ. ಈ ಸೆಟ್ಟಿಂಗ್ ಅನ್ನು ಯಾವ ರೀತಿ ಆ್ಯಕ್ಟಿವೇಟ್ ಮಾಡಬೇಕು ಎನ್ನುವುದನ್ನು ಈಗ ತಿಳಿಯೋಣ ಬನ್ನಿ. ಟು ಸ್ಟೆಪ್ ವೆರಿಫಿಕೇಷನ್ ಸೆಟ್ ಮಾಡಲು ಮೊದಲು ನಿಮ್ಮ ವಾಟ್ಸಾಪ್ ಖಾತೆಯನ್ನು ತೆರೆಯಬೇಕಾಗುತ್ತದೆ. ನಂತರ ಅದರಲ್ಲಿ ಸೆಟ್ಟಿಂಗ್ ಗಳಿಗೆ ಹೋಗಿ ಅಲ್ಲಿ ಅಕೌಂಟ್ ಗೆ ಹೋಗಿ. ಅಲ್ಲಿ ನಿಮಗೆ ಟು ಸ್ಟೆಪ್ ವೆರಿಫಿಕೇಷನ್ ಎನ್ನುವ ಆಯ್ಕೆ ನೋಡಲು ಸಿಗುತ್ತದೆ. Enable ( ಸಕ್ರಿಯಗೊಳಿಸಿ ) ಆಯ್ಕೆಯನ್ನು ಒತ್ತುವ ಮೂಲಕ ನಿಮಗೆ ಇಷ್ಟವಾದ ಆರು ಅಂಕಿಗಳ ಒಂದು ಹೊಸ ಕೋಡನ್ನು ಸೆಟ್ ಮಾಡಿ. ಹೀಗೆ ನೀವು ನಿಮ್ಮ ವಾಟ್ಸಾಪ್ ಖಾತೆಯನ್ನು ಹ್ಯಾಕರ್ಸ್ ಗಳಿಂದ ಸುರಕ್ಷಿವಾಗಿಡಿ.