ಈ ಕ್ಯೂಟ್ ಮಗುವಿನ ರಿಯಲ್ ಆಕ್ಟಿಂಗ್ ಮುಂದೆ ದೊಡ್ಡ ದೊಡ್ಡ ನಟರೂ ಫೇಲ್! ಅಪ್ಪನಿಗೆ ಮಾಡಿದ ಬೆಪ್ಪ…
ಈಗಿನ ಚಿಕ್ಕ ಮಕ್ಕಳು ತುಂಬಾ ಜಾಣವಿರುತ್ತವೆ ಎಂದು ಹಿರಿಯರು ಹೇಳುತ್ತಾರೆ. ಅವು ದೊಡ್ಡವರ ಅನುಕರಣೆ ಮಾಡುವದರಲ್ಲಿ ಮತ್ತು ಏನಾದರೂ ಹೊಸದನ್ನು ಕಲಿಯುವಲ್ಲಿ ತುಂಬಾನೇ ಎಕ್ಸ್ಪರ್ಟ್ ಆಗಿರುತ್ತವೆ. ಜೊತೆಗೆ ಸಹಜವಾಗಿ ಆಕ್ಟ ಸಹಿತ ಮಾಡುವದರಲ್ಲಿ ಕಡಿಮೆ ಇರುವದಿಲ್ಲ. ಪ್ರಸ್ತುತ ವಿಡಿಯೋದಲ್ಲಿ ಇದೇ ಉದಾಹರಣೆಗೆ ಹೋಲುವ ಒಂದು ವಿಡಿಯೋ ಕ್ಲಿಪ್ ಇದೆ. ಈ ವಿಡಿಯೋ ಕ್ಲಿಪ್ ನೋಡಿದಾಗ ನಿಜಕ್ಕೂ ನೋಡುಗರಿಗೆ ಆಶ್ಚರ್ಯ ಉಂಟಾಗದೇ ಇರದು.
ವಿಡಿಯೋದಲ್ಲಿ ತಂದೆಯು ಮಲಗಿದ ಮಗುವಿಗೆ ತನ್ನ ಹೆಗಲ ಮೇಲೆ ಎತ್ತಿಕೊಂಡು ಬರುತ್ತಿದ್ದಾನೆ. ಬರುತ್ತಿರುವಾಗ ಬಾಗಲಿಗೆ ಕೈಯಿಂದ ನಾಕ್ (ಶಬ್ದ) ಮಾಡಿ ಓಹೋ ಸಾರಿ, ಸಾರಿ ಎನ್ನುತ್ತಾ ಮಗುವಿನ ತಲೆಯನ್ನು ತಿಕ್ಕುತ್ತಾನೆ. ಆಗ ಮಗು ಒಮ್ಮೆಲೆ ಎಚ್ಚೆತ್ತು ಪೆಟ್ಟು ತನ್ನ ತಲೆಗೆ ಬಿತ್ತು ಎಂಬಂತೆ ತುಂಬಾ ಜೋರು ಜೋರಾಗಿ ಅಳಲು ಶುರು ಮಾಡುತ್ತದೆ. ಮಗುವಿನ ಈ ಆಕ್ಟಿಂಗ್ ನೆಟ್ಟಿಗರಿಗೆ ತುಂಬಾ ಆಶ್ಚರ್ಯವನ್ನು ತಂದಿದೆ. ಮಕ್ಕಳು ಯಾವ ರೀತಿ ಸಹಜವಾಗಿ ಹಾಗೂ ಸತ್ಯವೆಂಬಂತೆ ಆಕ್ಟ್ ಮಾಡುತ್ತಾರೆ ಎಂಬುದು ಈ ವಿಡಿಯೋದಿಂದ ತಿಳಿದುಬರುತ್ತದೆ.
ವಿಡಿಯೋ ನೋಡಿ
View this post on Instagram
ಈ ಸುಂದರವಾದ ವಿಡಿಯೋವನ್ನು ಇಲ್ಲಿಯವರೆಗೆ 1.5 ಮಿಲಿಯನ್ ಜನರು ಲೈಕ್ ಮಾಡಿದ್ದು 17.9 ಮಿಲಿಯನ್ ಜನರು ನೋಡಿ ಆನಂದಿಸಿದ್ದಾರೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ನಲ್ಲಿ aashvi_thakur18 ಹೆಸರಿನ ಅಕೌಂಟ್ ನಿಂದ ಶೇರ್ ಮಾಡಲಾಗಿದೆ.