‘ಈ’ ಘಟನೆಯ ನಂತರ ಅಮೀರ್ ಖಾನ್ ಜೊತೆಗೆ ಕೆಲಸ ಮಾಡುವುದು ಬೇಡ ಎಂದು ನಿರ್ಧರಿಸಿದರು ಅಕ್ಷಯ್ ಕುಮಾರ್!

ಬಾಲಿವುಡ್ ನಲ್ಲಿ ಅಮೀರ್ ಖಾನ್ ಮತ್ತು ಅಕ್ಷಯ್ ಕುಮಾರ್ ಇವರಿಬ್ಬರು ಸುಮಾರು ಕಳೆದ ಮೂರು ದಶಕಗಳಿಂದಲೂ ಕಾರ್ಯಪ್ರವೃತ್ತರಾಗಿದ್ದಾರೆ. ಆದರೆ ಇಲ್ಲಿಯವರೆಗೆ ಒಂದು ಚಲನಚಿತ್ರದಲ್ಲಿ ಸ್ಕ್ರೀನ್ ಹಂಚಿಕೊಂಡಿದ್ದನ್ನು ನಾವು ನೋಡಿಲ್ಲ.

ಅಮೀರ್ ಖಾನ್ ಅವರ ಮೊದಲ ಚಿತ್ರ ಖಯಾಮತ್ ಸೆ ಖಯಾಮತ್ ತಕ್ 1988 ರಲ್ಲಿ ತೆರೆಕಂಡಿತು. ಈ ಚಿತ್ರದ ಯಶಸ್ಸಿನ ನಂತರ ಅಮೀರ್ ಖಾನ್ ತುಂಬಾ ಜನಪ್ರಿಯರಾಗಿದ್ದರು.

ಮುಂದೆ 1991 ರಲ್ಲಿ ಅಕ್ಷಯ್ ಕುಮಾರ್ ಸೌಗಂಧ ಚಿತ್ರದ ಮುಖಾಂತರ ಬಾಲಿವುಡ್ ನಲ್ಲಿ ಎಂಟ್ರಿ ಮಾಡಿದರು. ಇವರಿಬ್ಬರಿಗೂ ಬಾಲಿವುಡ್ ಅಂಗಳದಲ್ಲಿ 30 ವರ್ಷಗಳು ಕಳೆದರೂ ಸಹಿತ ಇನ್ನೂವರೆಗೆ ಕೂಡಿ ಒಂದು ಚಲನಚಿತ್ರದಲ್ಲಿಯೂ ನಾವು ನೋಡಿಲ್ಲ. ಯಾಕೆ ಎನ್ನುವ ಕಾರಣವನ್ನು ಈ ಲೇಖನದಲ್ಲಿ ಹೇಳಲಿದ್ದೇವೆ.

ಆ ಸಮಯದಲ್ಲಿ ಅಕ್ಷಯ್ ಕುಮಾರ್ ಅವರು ಇನ್ನು ಸ್ಟ್ರಗಲ್ ಮಾಡುತ್ತಿದ್ದರು. ಆಗ ಅಮೀರ್ ಖಾನ್ ‘ಜೋ ಜೀತಾ ವಹಿ ಸಿಕಂದರ್’ ಚಿತ್ರದ ತಯಾರಿಯಲ್ಲಿ ತೊಡಗಿದ್ದರು. ಈ ಚಿತ್ರದಲ್ಲಿ ಅಮೀರ್ ಖಾನ್ ಅವರು ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳುವವರಿದ್ದರು. ಇದೇ ಚಿತ್ರದಲ್ಲಿ ಇನ್ನೊಂದು ಪ್ರಮುಖ ಪಾತ್ರಕ್ಕಾಗಿ ಆಡಿಷನ್ ಸ್ಟಾರ್ಟ್ ಆಗಿತ್ತು. ಆ ರೋಲ್ ಗಾಗಿ ಅಕ್ಷಯ್ ಕುಮಾರ್ ಅವರು ಆಡಿಶನ್ ಗೆ ಹಾಜರಿದ್ದು ಬಂದಿದ್ದರು. ಮುಂದೆ ಅಕ್ಷಯ್ ಕುಮಾರ್ ಅವರು ಆ ಪಾತ್ರ ತನಗೆ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಾಲ್ ಬರಬಹುದೆಂದು ಕಾಯುತ್ತಿದ್ದರು.

ಆದರೆ ಆ ಪಾತ್ರಕ್ಕಾಗಿ ದೀಪಕ್ ತಿಜೋರಿ ಹೆಸರಿನ ಬೇರೊಬ್ಬ ನಟನಿಗೆ ಫೈನಲ್ ಮಾಡಲಾಯಿತು. ದೀಪಕ್ ತಿಜೋರಿ ಅಮೀರ್ ಖಾನ್ ಅವರ ಕಾಲೇಜ್ ಮಿತ್ರನಾಗಿರುವುದರ ಬಗ್ಗೆ ಅಕ್ಷಯ್ ಕುಮಾರ್ ಅವರಿಗೆ ತಿಳಿದುಬಂತು.

ಈ ಕಾರಣದಿಂದ ಅಕ್ಷಯ್ ಕುಮಾರ್ ಅಮೀರ್ ಖಾನ್ ಅವರ ಮೇಲೆ ಬೇಸರ ವ್ಯಕ್ತಪಡಿಸಿದರು. ನೀವು ನಿಮ್ಮ ಕಾಲೇಜ್ ಫ್ರೆಂಡ್ ದೀಪಕ್ ತಿಜೋರಿಯವರಿಗೆ ಚಿತ್ರದಲ್ಲಿ ತೆಗೆದುಕೊಳ್ಳುವುದು ನಿಶ್ಚಿತ ವಾಗಿದ್ದರೆ ಇಷ್ಟೊಂದು ಹುಡುಗರ ಆಡಿಷನ್ ತೆಗೆದುಕೊಳ್ಳುವ ಅವಶ್ಯಕತೆಯಾದರೂ ಏನಿತ್ತು? ಎಂಬ ವಿಚಾರ ಅಕ್ಷಯ್ ಕುಮಾರ್ ಅವರದಾಗಿತ್ತು.

ಇದೇ ಒಂದು ಕಾರಣದಿಂದ ಅಕ್ಷಯ್ ಕುಮಾರ್ ಅವರು ಇಲ್ಲಿಯವರೆಗೆ ಅಮೀರ್ ಖಾನ್ ಜೊತೆ ಒಂದು ಚಿತ್ರದಲ್ಲಿಯೂ ಜೊತೆಯಾಗಿ ತೆರೆ ಹಂಚಿಕೊಂಡಿಲ್ಲ.