ಈ ಚಿತ್ರದಲ್ಲಿ ಬೆಕ್ಕು ಎಲ್ಲಿ ಅಡಗಿದೆ ಎಂದು ನಿಮಗೆ ಹುಡುಕಿ ಹೇಳಲು ಸಾಧ್ಯವೇ? ಇಲ್ಲಿಯವರೆಗೆ ಯಾರಿಗೂ ಸಾಧ್ಯವಾಗಿಲ್ಲ!

ಸದ್ಯಕ್ಕೆ ಸೋಶಿಯಲ್ ಮೀಡಿಯಾ ದಲ್ಲಿ ಒಂದು ಫೋಟೋ ತುಂಬಾ ವೈರಲ್ ಆಗುತ್ತಿದೆ. ಅದಕ್ಕೆ ಕಾರಣ ಅದರಲ್ಲಿ ಅಡಗಿರುವ ಬೆಕ್ಕು. ಹೌದು ಈ ಫೋಟೋ ದಲ್ಲಿ ಬುಕ್ ಗಳ ಮಧ್ಯದಲ್ಲಿ ಒಂದು ಬೆಕ್ಕು ಅಡಗಿಕೊಂಡಿದೆ. ಅದಕ್ಕಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹುಡುಕಾಟ ಶುರುವಾಗಿದೆ. ರವಿವಾರ ದಿನದಂದು ಟ್ವಿಟ್ಟರ್ ಮಾಧ್ಯಮದಲ್ಲಿ ಕೇಟ್ ಹಿಂಡ್ಸ್ ಅವರು ಈ ಫೋಟೋ ಶೇರ್ ಮಾಡಿದ್ದಾರೆ. ಈ ಫೋಟೋದಲ್ಲಿ ಬಹಳಷ್ಟು ಪುಸ್ತಕಗಳಿವೆ ಅಲ್ಲದೆ ಅವುಗಳ ಮಧ್ಯದಲ್ಲಿ ಒಂದು ಟಿವಿ ಸಹ ಇದೆ. ಹಿಂಡ್ಸ್ ಅವರು ಫೋಟೋ ಶೇರ್ ಮಾಡುವಾಗ ತಮ್ಮ ಫಾಲೋರ್ಸ್ ಗಳಿಗೆ ಈ ಫೋಟೋದಲ್ಲಿ ಬೆಕ್ಕು ಹುಡುಕಲು ಹೇಳಿದ್ದಾರೆ. ಟ್ವಿಟ್ಟರ್ ನಲ್ಲಿ ಎಷ್ಟೋ ಜನರು ಹುಡುಕುವ ಪ್ರಯತ್ನ ಮಾಡಿದ್ದಾರೆ, ಆದ್ರೆ ಅದು ಸಾಧ್ಯವಾಗಿಲ್ಲ.

ಯಾವಾಗಲೂ ಯಾವುದೇ ಸವಾಲಿನಿಂದ ಹಿಂಜರಿಯಬಾರದು- ವಿಶೇಷವಾಗಿ ಅದರಲ್ಲಿ ಒಂದು ಪ್ರಾಣಿಯನ್ನು ಮರೆಮಾಚಿ ಹುಡುಕಾಟ ಮಾಡಲು ಹೇಳಿದಾಗ ಅದನ್ನು ಹುಡುಕಿಯೇ ಬಿಡಬೇಕು. ಟ್ವಿಟ್ಟರ್ ಉಪಯೋಗಕರ್ತರು ಹುಡುಕಲು ತುಂಬಾ ಪ್ರಯತ್ನಿಸಿದರು, ಕೊನೆಗೆ ತಮ್ಮ ತಲೆಯನ್ನು ತುರಿಸಿಕೊಂಡು ಹಾಗೆ ಸುಮ್ಮನಾದರು.

ಈ ಫೋಟೋ ನೋಡಿ ಒಬ್ಬಳು ಯೂಜರ್ಸ್ ಬರೆದದ್ದು ಏನೆಂದರೆ, ‘ ನನ್ನ ಪತಿಯವರು ಸಾಕಷ್ಟು ಸಮಯದವರೆಗೆ ಹುಡುಕಲು ಪ್ರಯತ್ನಪಟ್ಟರು, ಆದರೆ ಕೊನೆಗೆ ಸೋಲನ್ನಪ್ಪಿದರು’. ಎರಡನೆಯ ಯೂಜರ್ಸ್, ‘ ಹೇ ಭಗವಾನ್ , ನನಗೆ ಇದನ್ನು ಹುಡುಕಾಟ ಮಾಡಲು ಇಷ್ಟೊಂದು ಸಮಯ ಹೇಗೆ ಬೇಕಾಯಿತು’ ಎಂದು ಟ್ವಿಟ್ ಮಾಡಿದ್ದಾರೆ.

ಬೆಕ್ಕು ಹುಡುಕಾಟ ಮಾಡಲು ನಿಮಗೆ ಸಮಯ ಎಷ್ಟು ಬೇಕಾಗುತ್ತದೆ? ಕೆಳಗಡೆ ಕೊಟ್ಟಿರುವ ಫೋಟೋದಲ್ಲಿ ಹುಡುಕಾಟ ಮಾಡಿ ನೋಡೋಣ.

 

ಈ ಫೋಟೋಕ್ಕೆ ಇದುವರೆಗೆ 2 ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಬಂದಿವೆ. ಅಲ್ಲದೆ, 48 ಸಾವಿರಕ್ಕೂ ಹೆಚ್ಚು ಮರು-ಟ್ವೀಟ್‌ಗಳನ್ನು ಮಾಡಿದ್ದಾರೆ. ಜನರು ಈ ಒಗಟು ಅತ್ಯಂತ ಕಷ್ಟಕರವೆಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೊನೆಗೆ ಫೋಟೋದಲ್ಲಿ ಬೆಕ್ಕು ಎಲ್ಲಿ ಅಡಗಿದೆ ಎಂದು ಹೇಳಿದ್ದು ಹಿಂಡ್ಸ್.