ಈ ತಮಾಷೆಯ ಅಪಘಾತದ ವೈರಲ್ ವೀಡಿಯೋ ಬೇಕಾದರೆ ಎರಡು ಸಲ ನೋಡಿದ ನಂತರ ನೀವಾದರೂ ಹೇಳಿ ತಪ್ಪು ಯಾರದು ಅಂತ?

ಸೋಶಿಯಲ್ ಮೀಡಿಯಾದಲ್ಲಿ ಸೈಕಲ್ ಮತ್ತು ವ್ಯಕ್ತಿಯೊಬ್ಬನ ಮಧ್ಯೆ ನಡೆದ ಡಿಕ್ಕಿಯ ವೀಡಿಯೋ ಒಂದು ತುಂಬಾ ವೈರಲ್ ಆಗುತ್ತಿದೆ. ನಾವು ನಮ್ಮ ಲೇಖನದಲ್ಲಿ ಹೆಚ್ಚಾಗಿ ವೈರಲ್ ಆದ ಸುದ್ದಿಗಳನ್ನೇ ತರುತ್ತೇವೆ. ಇವತ್ತಿನ ಈ ವೈರಲ್ ಸುದ್ದಿಯಲ್ಲಿ ಪ್ರಶ್ನೆಯೊಂದು ಸತಾಯಿಸುತ್ತಿದೆ. ಅದೇನೆಂದರೆ, ಈ ಪುಟ್ಟ ಅಪಘಾತದಲ್ಲಿ ತಪ್ಪು ಯಾರದು ಎಂದು? ಅದಕ್ಕೆ ಪ್ರಶ್ನೆ ನೀವಾದರೂ ಹೇಳಿ ನೋಡೋಣ.

ಪ್ರಸ್ತುತ ಘಟನೆ ಕಳೆದ ತಿಂಗಳು 18 ರಂದು ನಡೆದಿದೆ. ಈ ಸಿಸಿಟಿವಿ ಫೂಟೇಜ್ ನ 5 ಸೆಕೆಂಡಿನ ವೀಡಿಯೋವನ್ನು ಟ್ವಿಟರ್ ನಲ್ಲಿ ಐಪಿಎಸ್ ಅಧಿಕಾರಿಯಾದ ದೀಪಾಂಶು ಕಾಬರಾ ಅವರು ಶೇರ್ ಮಾಡಿದ್ದಾರೆ. ಜೊತೆಗೆ ಒಂದು ಪ್ರಶ್ನೆಯನ್ನು ಕ್ಯಾಪ್ಶನ್ ನಲ್ಲಿ ಹಾಕಿದ್ದಾರೆ, ತಪ್ಪು ಯಾರದು?

ವಿಡಿಯೋದಲ್ಲಿ ಕಾಣುವ ಹಾಗೆ ಸೈಕಲ್ ಸವಾರನೊಬ್ಬ ಸೈಕಲ್ ಮೇಲೆ ವೇಗವಾಗಿ ಬರುತ್ತಿದ್ದನು. ಆತನಿಗೆ ಅಡ್ಡಲಾಗಿ ವ್ಯಕ್ತಿಯೊಬ್ಬ ರಸ್ತೆಯನ್ನು ದಾಟುತ್ತಿದ್ದನು. ಸೈಕಲ್ ನಡೆಸುತ್ತಿದ್ದ ವ್ಯಕ್ತಿ ವೇಗವಾಗಿ ಬರುತ್ತಿದ್ದದನ್ನು ಗಮನಿಸಿದ ವ್ಯಕ್ತಿಯು ಸೈಕಲ್ ಸವಾರ ಬರುವುದಕ್ಕೂ ಮುನ್ನ ತಾನೇ ಮೊದಲು ರೋಡ್ ಕ್ರಾಸ್ ಮಾಡಬೇಕು ಎಂಬ ವಿಚಾರದಿಂದ ನಡೆಯುವುದನ್ನು ಬಿಟ್ಟು ಓಡಿ ಹೋಗಲು ಪ್ರಯತ್ನಿಸಿದನು. ಅತ್ತ ಸೈಕಲ್ ಸವಾರ ಎದುರಿನಿಂದ ವ್ಯಕ್ತಿಯೊಬ್ಬ ರೋಡ್ ಕ್ರಾಸ್ ಮಾಡುತ್ತಿದ್ದಾನೆ ಎಂಬುದನ್ನು ನೋಡಿಯೂ ವೇಗ ಕಡಿಮೆ ಮಾಡದೆ ಆತ ಬರುವುದಕ್ಕೂ ಮುನ್ನ ತಾನೇ ಪಾಸ್ ಆಗಬೇಕು ಎಂಬ ವಿಚಾರದಿಂದ ಮತ್ತಷ್ಟು ಸೈಕಲ್ ವೇಗ ಹೆಚ್ಚಿಸಿದನು.

ಆಮೇಲೇನು? ಏನು ಆಗಬಾರದಾಗಿತ್ತು ಅದೇ ಅಲ್ಲಿ ಘಟಿಸಿತು.

ಈ ತಮಾಷೆಯ ಎಕ್ಸಿಡೆಂಟ್ ವಿಡಿಯೋದಲ್ಲಿ ಇವರಿಬ್ಬರಲ್ಲಿ ಈಗ ತಪ್ಪು ಯಾರದು? ಎಂಬ ಪ್ರಶ್ನೆಗೆ ಉತ್ತರವನ್ನು ನೀವಾದರೂ ಹೇಳಿ ನೋಡೋಣ…

ನೋಡಿ ವಿಡಿಯೋ…

ವೀಡಿಯೋ ನೋಡಿದ ನೇಟಿಜನ್ಸ್ ಗಳಲ್ಲಿ ಕೆಲವರು ತಪ್ಪು ಪಾದಚಾರಿಯದಿದ್ದರೆ ಇನ್ನು ಕೆಲವರು ಸೈಕಲ್ ಸವಾರನ ಕಡೆಗೆ ತಪ್ಪು ಇದೆ ಎಂದು ಹೇಳುತ್ತಿದ್ದಾರೆ. ನೀವು ಯಾರಿಗೆ ದೋಷ ಕೊಡುತ್ತೀರಿ?