ಈ ದೇಶದ ರಾಜಧಾನಿಯ ಹೆಸರು ವಿಶ್ವದಲ್ಲೇ ದೊಡ್ಡದಾಗಿದೆ, ಜನರು ಸರಿಯಾಗಿ ಉಚ್ಚರಿಸಲೂ ಸಹ ಸಾಧ್ಯವಿಲ್ಲ.
ಬೌದ್ಧ ಧರ್ಮದ ಪಗೋಡಾಗಳಿಗೆ ಪ್ರಸಿದ್ಧವಾದ ಥೈಲ್ಯಾಂಡ್ ಜಗತ್ತಿನ ಪ್ರವಾಸಿಗರ ನೆಚ್ಚಿನ ತಾಣವೂ ಹೌದು. ಇಲ್ಲಿ 95 ಪ್ರತಿಶತ ಬೌದ್ಧ ಧರ್ಮದ ಅನುಯಾಯಿಗಳೇ ನೆಲೆಸಿದ್ದಾರೆ.
ಥೈಲ್ಯಾಂಡ್ ದ ಮೊದಲಿನ ಹೆಸರು ‘ಸಿಯಾಮ್’. 1948 ರಲ್ಲಿ ಥೈಲ್ಯಾಂಡ್ ಅಂತ ಹೆಸರು ಬದಲಿಸಲಾಯಿತು. ಆದ್ರೆ ಇಲ್ಲಿ ನೆಲೆಸಿರುವ ಚೀನಿ ಸಮುದಾಯ ಮಾತ್ರ ಇನ್ನೂ ‘ಸಿಯಾಮ್’ ಅಂತ ಕರೆಯಲು ಇಷ್ಟ ಪಡುತ್ತಾರೆ.

ಈ ದೇಶದ ಜನರ ಇನ್ನೊಂದು ವಿಶೇಷವೆಂದರೆ ಪುರುಷೋತ್ತಮ ರಾಮ ಮತ್ತು ವಿಷ್ಣುವಿನ ಪೂಜೆ ಮಾಡುತ್ತಾರೆ. ಇಲ್ಲಿರುವ ರಾಜಪರಿವಾರವು ತಮ್ಮನ್ನು ರಾಮನ ಮಗ ‘ಕುಶ್’ ನ ವಂಶಜರೆಂದೇ ಭಾವಿಸುತ್ತಾರೆ. ಇಲ್ಲಿಯ ರಾಷ್ಟ್ರೀಯ ಗ್ರಂಥದ ಹೆಸರು ‘ರಾಮ ಕಿಯೆನ್’ ಇದೆ, ಇದು ರಾಮಾಯಣದ ಥಾಯಿ ಭಾಷೆಯಲ್ಲಿ ಸಂಸ್ಕರಣವಾಗಿದೆ. ಇಲ್ಲಿಯ ರಾಷ್ಟ್ರೀಯ ಚಿಹ್ನೆ ಗರುಡವಾಗಿದೆ. ಇದು ಭಗವಾನ್ ವಿಷ್ಣುವಿನ ವಾಹನವಾಗಿದೆ.

ಇಂಥ ಈ ದೇಶದ ರಾಜಧಾನಿ ಬ್ಯಾಂಕಾಕ್ ಒಂದು ವಿಶೇಷ ಕಾರಣದಿಂದ ಗಿನೀಜ್ ವರ್ಲ್ಡ್ ರೆಕಾರ್ಡ್ ನಲ್ಲಿ ಹೆಸರು ಪಡೆದಿದೆ. ನಿಮಗೆ ಗೊತ್ತಿರಲಿಕ್ಕಿಲ್ಲ, ಜಗತ್ತಿನಲ್ಲಿ ಇದರ ಹೆಸರು ಎಲ್ಲಕ್ಕೂ ಉದ್ದವಾಗಿದೆ. ಬ್ಯಾಂಕಾಕ್ ಇದು ಇಂಗ್ಲಿಷ್ ಹೆಸರಾಗಿದೆ. ಇದರ ನಿಜವಾದ ಹೆಸರು ಸಂಸ್ಕೃತ ಮತ್ತು ಪಾಲಿ ಈ ಎರಡು ಭಾಷೆಗಳನ್ನೊಳಗೊಂಡ ಬೇರೆ ಹೆಸರೊಂದಿದೆ. ಅದು ಸರಿಯಾಗಿ ಉಚ್ಚರಿಸಲೂ ಸಾಧ್ಯವಾಗಲ್ಲ. ಬ್ಯಾಂಕಾಕ್ ದ ಪೂರ್ಣ ಹೆಸರು “ಕುಂಗ್ರ ದೇವಮಹಾನಗರ ಅಮರರತ್ನಕೋಸಿಂದ್ರ ಮಹಿಂದ್ರಯುದ್ಧ ಮಹಾತಿಲಕಭವ ನವರತ್ನರಾಜಧಾನಿ ಪುರಿರಮ್ಯ ಉತ್ತಮರಾಜನಿವೇಶನ ಮಹಾಸ್ಥಾನ ಅಮರವಿಮಾನ ಅವತಾರಸ್ಥಿತ್ಯ ಶಕ್ರದತ್ತೀಯ ವಿಷ್ಣುಕರ್ಮಪ್ರಸಿದ್ಧಿ.”