ಈ ಪುಟ್ಟ ಪೋರ್ಟಬಲ್ AC ಎಬ್ಬಿಸುತ್ತಿವೆ ಮಾರ್ಕೆಟ್ ನಲ್ಲಿ ಧೂಳ್! ಬೆಲೆ ಕೇವಲ 400 ₹ ಗಳು; ನಿಮಿಷದಲ್ಲಿಯೇ ಮಾಡುತ್ತದೆ ಮನೆಗೆ ತಂಪು ತಂಪು! ನೋಡಿ ಡೀಟೇಲ್ಸ್…
ಬೇಸಿಗೆ ಶುರುವಾಯಿತು ಎಂದರೆ ಸಾಕು ಜೀವ ಈ ಬೇಗೆಗೆ ಅಸಹನೀಯವಾಗುತ್ತದೆ. ಈ ಬೇಗೆಯ ಸಂಕಟಕ್ಕೆ ತಾಳದೆ ಕೆಲವರು ಕೂಲರ್ ಖರೀದಿಸಿದರೆ ಇನ್ನು ಕೆಲವರು AC ಖರೀದಿಸಲು ಮುಂದಾಗುತ್ತಾರೆ. ಇನ್ನು ಮೊದಲಿನಿಂದಲೇ ಮನೆಯಲ್ಲಿ ಈ ವಸ್ತುಗಳು ಇದ್ದರೆ ಅವುಗಳನ್ನು ಯೋಗ್ಯ ರಿಪೇರ್ ಮಾಡಿ ಒಳ್ಳೆಯ ರೀತಿಯಲ್ಲಿ ಇಡಲು ಯತ್ನಿಸುತ್ತಾರೆ. ಒಂದು ವೇಳೆ ನಿಮ್ಮ ಬಜೆಟ್ AC ಅಥವಾ ಕೂಲರ್ ಖರಿದಿಸುವಷ್ಟು ಇಲ್ಲದಿದ್ದರೆ ಜೊತೆಗೆ ಮನೆಯಲ್ಲಿಯೂ ಅತೀ ಕಡಿಮೆ ಜಾಗ ವ್ಯಾಪಿಸುವ ಹಾಗೂ ಒಳ್ಳೆಯ ತಂಪಾದ ಗಾಳಿಯನ್ನು ನೀಡುವ ಡಿವೈಸ್ ಖರೀದಿ ಮಾಡುವ ಬಗ್ಗೆ ಯೋಚಿಸುತ್ತಿದ್ದರೆ, ಈ ಪೋರ್ಟಬಲ್ ಕೂಲಿಂಗ್ ಸಿಸ್ಟಮ್ AC ನಿಮಗೆ ಒಳ್ಳೆಯ ಪರ್ಯಾಯವಾಗಬಹುದು.
ಈ ಡಿವೈಸ್ ಹೇಗೆ ಕೆಲಸ ಮಾಡುತ್ತದೆ? ಮತ್ತು ಇದಕ್ಕಾಗಿ ಎಷ್ಟೊಂದು ಹಣ ಖರ್ಚು ಮಾಡಬೇಕಾಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವ…
Mini Portable AC: ಈ ಮಿನಿ ಪೋರ್ಟಬಲ್ AC ಯನ್ನು ಆನ್ ಲೈನ್ ಮತ್ತು ಆಫ್ ಲೈನ್ ಎರಡೂ ರೀತಿಯಲ್ಲಿ ಖರೀದಿ ಮಾಡಬಹುದಾಗಿದೆ. ವಿಶೇಷವೆಂದರೆ ಇದನ್ನು ಖರೀದಿಸಲು ಹೆಚ್ಚು ಹಣ ಖರ್ಚು ಮಾಡುವ ಅಗತ್ಯವಿಲ್ಲ. ಇದನ್ನು ಬರೀ 500 ರೂಪಾಯಿಗಳಿಗಿಂತಲೂ ಕಡಿಮೆ ಖರ್ಚಿನಲ್ಲಿ ಮನೆಗೆ ತರಬಹುದಾಗಿದೆ. ಯಾಕೆಂದರೆ ಈ ಮಿನಿ AC ಯ ಬೆಲೆ 400 ₹ ಗಳಿಂದ ಪ್ರಾರಂಭವಾಗಿ 2000 ರೂಪಾಯಿಗಳವರೆಗೆ ಇದೆ. ಈ ಮಿನಿ ಪೋರ್ಟಬಲ್ AC ಬೇರೆ ಬೇರೆ ಆಕಾರ ಮತ್ತು ಡಿಸೈನ್ ನಲ್ಲಿ ಉಪಲಬ್ಧವಿದೆ. ನೀವು ನಿಮ್ಮ ಇಷ್ಟದಂತೆ ಹಾಗೂ ಬಜೆಟ್ ಪ್ರಕಾರ ಆಯ್ಕೆ ಮಾಡಬಹುದಾಗಿದೆ.
ಇದು ಹೇಗೆ ಕೆಲಸ ಮಾಡುತ್ತದೆ?
ಇದಕ್ಕಾಗಿ ಐಸ್ ಅಥವಾ ನೀರಿನ ಉಪಯೋಗ ಮಾಡಬೇಕಾಗುತ್ತದೆ. ತಂಪಾದ ಐಸ್ ಮಿಶ್ರಿತ ನೀರು ಉಪಯೋಗಿಸುವುದರಿಂದ ಮತ್ತಷ್ಟು ಚೆನ್ನಾಗಿ ರಿಸಲ್ಟ್ ದೊರೆಯುತ್ತದೆ. ಇದನ್ನು ಆಪರೇಟ್ ಮಾಡುವ ಸಿಸ್ಟಮ್ ಸಹ ತುಂಬಾ ಸರಳವಾಗಿದೆ, ಇದರ ಬಗ್ಗೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇನ್ನು ಇದಕ್ಕಾಗಿ ಕರೆಂಟ್ ತುಂಬಾ ಕಡಿಮೆ ಖರ್ಚಾಗುತ್ತದೆ. ನೀವು Mini Portable AC ಖರೀದಿಸಿ ಕರೆಂಟಿನ ಉಳಿತಾಯ ಮಾಡಬಹುದಾಗಿದೆ. ಯಾರು ಮನೆಯಿಂದ ಕೆಲಸ Work from Home ಮಾಡುತ್ತಾರೆ ಅವರಿಗಂತೂ ಇದು ತುಂಬಾ ಒಳ್ಳೆಯ ಪರ್ಫೆಕ್ಟ್ ಡಿವೈಸ್ ಆಗಿದೆ.